ಜೇವರ್ಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಪ್ರತಿಯೊಬ್ಬ ವ್ಯಕ್ತಿಗೂ ಮುಟ್ಟಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ ಕರೆ ನೀಡಿದರು.
ಪಟ್ಟಣದ ಶಾಂತನಗರದ ಹನುಮಾನ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ವಿಸ್ತಾರಕರ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣದಲ್ಲಿರುವ ಎಲ್ಲ ಕುಟುಂಬಗಳಿಗೂ ಬಿಜೆಪಿ ಕಾರ್ಯಕರ್ತರು ಭೇಟಿಯಾಗಬೇಕು. ಕೇಂದ್ರ ಸರಕಾರದ ಸಾಧನೆಗಳು ಮತ್ತು
ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ
ಅಭ್ಯರ್ಥಿ ಗೆಲ್ಲಿಸಲು ಬೇಕಾದ ಸಿದ್ಧತೆಯನ್ನು ಈಗಲೇ ಆರಂಭಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ತಾಲೂಕಿನ 253 ಬೂತ್‌ಗಳಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ತಾಲೂಕಿನಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಇಲ್ಲಿನ ಯುವಕರು ಆಡಳಿತ ಪಕ್ಷದ ಗಮನ ಸೆಳೆಯಬೇಕು. ರಾಜ್ಯ ಸರಕಾರದ ವಿರುದ್ಧ ಅನೇಕ ಹೋರಾಟಗಳನ್ನು ತಾಲೂಕಿನಲ್ಲಿ ರೂಪಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಬಿಜೆಪಿ ಕಾರ್ಯಕರ್ತರು ಪಟ್ಟಣದ ಹಲವು ಬೂತ್‌ಗಳಿಗೆ ಭೇಟಿ ನೀಡಿ ಕೇಂದ್ರ ಸರಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಜನರಿಗೆ ವಿವರಿಸಿದರು.
ಮುಖಂಡರಾದ ರಮೇಶ ಬಾಬು ವಕೀಲ, ಪಪಂ ಮಾಜಿ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ, ಶರಣಗೌಡ ಕುಳಗೇರಿ, ಸಂಗಣಗೌಡ ರದ್ದೇವಾಡಗಿ, ಬಸವರಾಜ ಹರಸೂರ, ಸಿದ್ದು ಕೆಇಬಿ, ಶರಣು ರಾಂಪುರ, ಅಮರ ಹಳ್ಳಿ, ಸಂತೋಷ ಮಲ್ಲಾಬಾದ,
ಅಂಬ್ರಿಶ್ ಶಖಾಪುರ, ರಾಜಶೇಖರ ಗೌನಳ್ಳಿ, ರಾಕೇಶ ಹರಸೂರ, ಭೀಮು ಹಳ್ಳಿ, ಶಿವಶರಣಪ್ಪ ಸಜ್ಜನಶೆಟ್ಟಿ, ಸೂರಪ್ಪ ನರಿಬೋಳ ಇದ್ದರು.