Advertisement

ಸರಕಾರ ಪತನವಾಗುವ ಭ್ರಮೆಯಲ್ಲಿ  ಬಿಜೆಪಿ

12:09 PM Sep 18, 2018 | Team Udayavani |

ಮಂಗಳೂರು: ರಾಜ್ಯದ ಸಮ್ಮಿಶ್ರ ಸರಕಾರ ಪತನವಾಗುತ್ತದೆ ಎನ್ನುವ ಭ್ರಮೆ ಬಿಜೆಪಿಗಿದೆ. ಆದರೆ ಸರಕಾರ ಭದ್ರವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರೊ| ರಾಧಾಕೃಷ್ಣ ತಿರುಗೇಟು ನೀಡಿದ್ದಾರೆ.

Advertisement

ಪಕ್ಷದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇರಬಹುದು. ಅದು ಭಿನ್ನಮತ ಅಲ್ಲ. ಇದು ಬಿಜೆಪಿಗೂ ಗೊತ್ತಿದೆ. ಆದರೂ ಅಪನಂಬಿಕೆ, ಸುಳ್ಳು ಸುದ್ದಿಗಳ ಮೂಲಕ ಸರಕಾರ ಬೀಳಿಸುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಧಾನಸಭೆ ಚುನಾವಣೆಯ ಪೂರ್ಣ ಫ‌ಲಿತಾಂಶ ಬರುವುದಕ್ಕೂ ಮೊದಲೇ ಸಮ್ಮಿಶ್ರ ಸರಕಾರ ರಚನೆ ಮಾಡಲು ನಿರ್ಧರಿಸಲಾಗಿತ್ತು. ಇನ್ನು ಐದು ವರ್ಷ ಸರಕಾರಕ್ಕೆ ಏನೂ ತೊಂದರೆಯಾಗದು. ಬಿಜೆಪಿ ಭರವಸೆ ನೀಡಿದಂತೆ ಅಚ್ಛೇ ದಿನ್‌ ಜಾರಿಗೆ ತರಲಿ ಎಂದು ಸಲಹೆ ಮಾಡಿದರು.

ಬೆಲೆ ಏರಿಕೆಯ ಅಚ್ಛೇ ದಿನ್‌
ಯುಪಿಎ ಸರಕಾರ ಇದ್ದಾಗ ಡೀಸೆಲ್‌ಗೆ ವಾರ್ಷಿಕ 1.38 ಲಕ್ಷ ಕೋ. ರೂ. ಸಬ್ಸಿಡಿ ನೀಡುತ್ತಿತ್ತು. ಎನ್‌ಡಿಎ ಸರಕಾರ ಸಬ್ಸಿಡಿ ನಿಲ್ಲಿಸಿ 12 ಲಕ್ಷ ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿದೆ. ಜನಸಾಮಾನ್ಯರಿಗೆ ಬೆಲೆ ಏರಿಕೆಯ ಕಷ್ಟ ನೀಡಿದೆ. ಇದು ಮೋದಿ ಸರಕಾರದ ಅಚ್ಛೇ ದಿನ್‌ ಎಂದು ಟೀಕಿಸಿದರು.

ಜೇಟ್ಲಿ  ಸೌದಿಗೆ ಹೋಗಿ ಹೇಳ‌ಲಿ
ರವಿವಾರ ಬೆಂಗಳೂರಿನಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ತೈಲ ಬೆಲೆ 2 ರೂ.ಗಳಷ್ಟು ಕಡಿಮೆ ಮಾಡಲು ಮುಖ್ಯಮಂತ್ರಿ ನಿರ್ಧಾರ ಕೈಗೊಂಡಿದ್ದಾರೆ. ದೇಶದಲ್ಲೇ ಕನಿಷ್ಠ ತೈಲ ಬೆಲೆಯ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿದೆ. ಕೇಂದ್ರ ಸಚಿವ ಅರುಣ್‌ ಜೇಟ್ಲಿ ತಾನೇ ಸೌದಿಗೆ ಹೋಗಿ ಬೆಲೆ ಇಳಿಕೆ ಬಗ್ಗೆ ಒಪ್ಪಂದ ಮಾಡಿ ಅಲ್ಲಿಂದಲೇ ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.

Advertisement

ಕೇಂದ್ರ ಸಚಿವೆ ನಿರ್ಮಲಾ ಸೀತಾ ರಾಮನ್‌ ಅವರು ಎಚ್‌ಎಎಲ್‌ ಕಂಪೆನಿಗೆ ಯುದ್ಧ ವಿಮಾನ ತಯಾರಿಸುವ ಶಕ್ತಿಯೇ ಇಲ್ಲ ಎನ್ನುವ ಮೂಲಕ ದೇಶದ ವಿಜ್ಞಾನಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಪ್ರೊ| ರಾಧಾಕೃಷ್ಣ ಆರೋಪಿಸಿದರು.

ಕಾಂಗ್ರೆಸ್‌ ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಭಾರತಿ, ನೀರಜ್‌ಪಾಲ್‌, ಎ.ಸಿ. ವಿನಯರಾಜ್‌, ನಝೀರ್‌ ಬಜಾಲ್‌ ಉಪಸಿªತರಿದ್ದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಗಡ್ಕರಿ ಉತ್ತರಿಸಲಿ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರೇಳು ವರ್ಷ ಕಳೆದ‌ರೂ ಪೂರ್ತಿಗೊಂಡಿಲ್ಲ. ತೊಕ್ಕೊಟ್ಟು, ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿಗಳು ಕುಂಟುತ್ತ ಸಾಗಿವೆ. ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಇದಕ್ಕೆ ಏನು ಹೇಳುತ್ತಾರೆ, ರಾಜ್ಯದ ಆರು ನಗರಗಳನ್ನು ಸ್ಮಾರ್ಟ್‌ ಸಿಟಿ ಘೋಷಣೆ ಮಾಡಿದ್ದು, ಅದರ ಕತೆ ಏನಾಗಿದೆ ಎಂದು ರಾಧಾಕೃಷ್ಣ ಪ್ರಶ್ನಿಸಿದರು.
ವಿಜಯ್‌ ಮಲ್ಯ ಲಂಡನ್‌ಗೆ ಪರಾರಿಯಾಗುವ ಮುನ್ನ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿದ್ದರು. ಮಲ್ಯ ಅವರ ಮೇಲಿನ ಆರೋಪಗಳು ಆಗ ಜೇಟ್ಲಿಗೆ ಗೊತ್ತಿರಲಿಲ್ಲವೆ? ಮಲ್ಯ ಅವರಿಗೆ ಎರಡು ದೇಶಗಳ ಪಾಸ್‌ಪೋರ್ಟ್‌ ದೊರೆತಿರುವ ಹಿಂದೆ ವಿದೇಶಾಂಗ ವ್ಯವಹಾರ ಸಚಿವಾಲಯದ ಕೈವಾಡವಿದೆ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next