Advertisement
ರಾಜಕೀಯವಾಗಿ ಯಾವುದೇ ನೆಲೆ ಇಲ್ಲದ ಬಿಜೆಪಿ, ಪ್ರಬಲ ಕಾಂಗ್ರೆಸ್, ಜೆಡಿಎಸ್ ವಿರುದ್ದ ಗೆಲುವಿಗಾಗಿ ಹೋರಾಟ ನಡೆಸಬೇಕಿದೆ. 2013, 2018ರಲ್ಲಿ ಸತತ ಎರಡು ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸುಲಭವಾಗಿ ಗೆದ್ದ ಡಾ.ಕೆ.ಸುಧಾಕರ್, ಉಪ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ ಹೊಂದಿದ್ದಾರೆ. ಆದರೆ, ಅವರಿಗೆ ಪಕ್ಷಾಂತರ, ಅನರ್ಹತೆಯ ಬಿಸಿ ಜೊತೆಗೆ ಕಾಂಗ್ರೆಸ್, ಜೆಡಿಎಸ್‌ನ ಪ್ರಬಲ ಪೈಪೋಟಿ ಎದುರಾಗಿದೆ.
Related Articles
Advertisement
ಒಕ್ಕಲಿಗ ಮತಗಳು ಮೂರೂ ಪಕ್ಷಗಳಿಗೆ ವಿಭಜನೆ ಆಗುತ್ತಿದ್ದು, ಪರಿಶಿಷ್ಟ ಜಾತಿ, ಕುರುಬರು, ಅಲ್ಪಸಂಖ್ಯಾ ತರು ಕೈ ಹಿಡಿಯುತ್ತಾರೆಂಬ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿದೆ. ಕಾಂಗ್ರೆಸ್ ಪರ ಡಿಕೆಶಿ ಎರಡು ಬಾರಿ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದಾರೆ. ಜೊತೆಗೆ, ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾರಣವಾಗಿರುವ ಅನರ್ಹ ಶಾಸಕನ ಸೋಲಿಸಲು ಜೆಡಿಎಸ್ ಕಾರ್ಯಕರ್ತರು ಸ್ವಾಭಿಮಾನ ಎತ್ತಿ ಹಿಡಿದು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಬಹಿರಂಗವಾಗಿ ಪ್ರಚಾರ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪೈಪೋಟಿ ನೀಡುತ್ತಿರುವ ದಳಪತಿಗಳು: ಉಪ ಚುನಾವಣೆಯ ಸ್ಪರ್ಧೆಗೆ ಆಸಕ್ತಿ ಇಲ್ಲ ಎನ್ನುತ್ತಿದ್ದ ಕ್ಷೇತ್ರದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರ ಬದಲಾಗಿ ಕೊನೆ ಕ್ಷಣದಲ್ಲಿ ಉದ್ಯಮಿ ಎ.ರಾಧಾಕೃಷ್ಣರನ್ನು ಜೆಡಿಎಸ್ ಕಣಕ್ಕೆ ಇಳಿಸಿದೆ. ಅಭ್ಯರ್ಥಿ ಬದಲಾಗುತ್ತಿದ್ದಂತೆ ಜೆಡಿಎಸ್ ಕಡೆಗೆ ಇತರ ಪಕ್ಷಗಳಿಂದ ವಾಲುತ್ತಿರುವರ ಸಂಖ್ಯೆ ಹೆಚ್ಚಾಗಿದ್ದು, ಜೆಡಿಎಸ್ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿ ರುವುದು ಕಾಂಗ್ರೆಸ್, ಬಿಜೆಪಿ ಪಾಳೆಯವನ್ನು ತಲ್ಲಣ ಗೊಳಿಸಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ 50 ಸಾವಿರಕ್ಕೂ ಅಧಿಕ ಮತ ಪಡೆದಿತ್ತು. ಕ್ಷೇತ್ರದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯ ಜೆಡಿಎಸ್‌ಗೆ ಮತ ಬ್ಯಾಂಕ್ ಆಗಿದೆ. ಈಗಾಗಲೇ ಕುಮಾರಸ್ವಾಮಿ ಎರಡು ಬಾರಿ ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದು, ಮೈತ್ರಿ ಸರ್ಕಾರ ಪತನಕ್ಕೆ ಸುಧಾಕರ್‌ನೆà ಸೂತ್ರಧಾರಿ. ಆದ್ದರಿಂದ ಅವರು ಯಾವುದೇ ಕಾರಣಕ್ಕೂ ಮತ್ತೆ ಉಪ ಚುನಾವಣೆಯಲ್ಲಿ ಶಾಸಕರಾಗಬಾರದು. ಸೋಲಿಸಬೇಕೆಂದು ಕರೆ ಕೊಟ್ಟಿದ್ದಾರೆ.
ಚರ್ಚಾ ವಿಷಯ: ಕಾಂಗ್ರೆಸ್, ಸುಧಾಕರ್ ಅನರ್ಹತೆ, ಪಕ್ಷ ದ್ರೋಹವನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಇಳಿದಿದೆ. ಸುಧಾಕರ್, ಮೈತ್ರಿ ಸರ್ಕಾರ ಅಭಿವೃದ್ದಿಗೆ ಸ್ಪಂದಿಸಿಲ್ಲ. ಮೆಡಿಕಲ್ ಕಾಲೇಜ್‌ಗೆ ಅನುದಾನ ಕೊಡಲಿಲ್ಲ. ಮಂಚೇನಹಳ್ಳಿ ತಾಲೂಕು ಮಾಡಲಿಲ್ಲ ಎಂದು ಹೇಳಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್, ಕುಮಾರಸ್ವಾಮಿ ಸಿಎಂ ಆಗಿದ್ದ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಪಕ್ಷಾಂತರಿ, ಅನರ್ಹ ಸುಧಾಕರ್‌ರನ್ನು ಸೋಲಿಸಿ, ಸ್ವಾಭಿಮಾನ ಎತ್ತಿ ಹಿಡಿಯುವಂತೆ ಮತದಾರರಲ್ಲಿ ಮನವಿ ಮಾಡುತ್ತಿದೆ. ಆದರೆ, ಮೂರು ಪಕ್ಷಗಳಿಗೂ ಜಿಲ್ಲೆಯ ಜ್ವಲಂತ ಸಮಸ್ಯೆಯಾದ ನೀರಾವರಿ ವಿಷಯ ನಗಣ್ಯವಾಗಿದೆ.
ಕ್ಷೇತ್ರದ ಇತಿಹಾಸ: ದಶಕಗಳಿಂದ ಪರಿಶಿಷ್ಠ ಜಾತಿಯ ಮೀಸಲು ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ, 2008ರ ಚುನಾವಣೆಯಿಂದ ಸಾಮಾನ್ಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಸಾಮಾನ್ಯವಾದ ಬಳಿಕ ಮೊದಲ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದು ಬಿಟ್ಟರೆ ಉಳಿದ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆದಿದೆ. ಇಲ್ಲಿ ಅಹಿಂದ ವರ್ಗ ಸೋಲು, ಗೆಲುವಿನಲ್ಲಿ ನಿರ್ಣಾಯಕ.
ಜಾತಿವಾರು ಲೆಕ್ಕಾಚಾರಪ.ಜಾತಿ -55,000
ಪ. ವರ್ಗ – 25,000
ಒಕ್ಕಲಿಗರು – 45,000
ಕುರುಬರು – 16,000
ಬಲಿಜಿಗರು -35,000
ಅಲ್ಪಸಂಖ್ಯಾತರು -20,000
ಇತರರು- 25,000 ಒಟ್ಟು ಮತದಾರರು: 2,00,622
ಪುರುಷರು : 99,825
ಮಹಿಳೆಯರು: 1,00,776
ಇತರರು: 21
ಹೊಸ ಮತದಾರರು: 3,435 * ಕಾಗತಿ ನಾಗರಾಜಪ್ಪ, ಚಿಕ್ಕಬಳ್ಳಾಪುರ