Advertisement

ಸಮಾವೇಶದ ಖರ್ಚುವೆಚ್ಚ ಬಹಿರಂಗಕ್ಕೆ ಬಿಜೆಪಿ ಆಗ್ರಹ

09:28 AM Jan 09, 2018 | Team Udayavani |

ಉಡುಪಿ: ಬ್ರಹ್ಮಾವರದಲ್ಲಿ ನಡೆದ ಸಾಧನಾ ಸಮಾವೇಶಕ್ಕೆ ಜನರನ್ನು ಕಲೆಹಾಕಲು ವಾಮ ಮಾರ್ಗಗಳನ್ನು ಉಸ್ತುವಾರಿ ಸಚಿವರು ಅನುಸರಿಸಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ಪ್ರಭಾಕರ ಪೂಜಾರಿ ಮತ್ತು ಮಾಜಿ ಶಾಸಕ ಕೆ. ರಘುಪತಿ ಭಟ್‌ ಆರೋಪಿಸಿದ್ದಾರೆ.

Advertisement

ಸರಕಾರಿ ಕಾರ್ಯಕ್ರಮವನ್ನು ಆಯೋಜಿಸಿರುವ ಸಚಿವರು ಸರಕಾರಿ ಉನ್ನತ ಅಧಿಕಾರಿಗಳನ್ನು ಬಳಸಿ ಸಾಕಷ್ಟು ಹಣ ವಸೂಲು ನಡೆಸಿದ್ದಾರೆ, ಅದರ ಲೆಕ್ಕಪತ್ರಗಳನ್ನು ರಹಸ್ಯವಾಗಿಡಲಾಗಿದೆ. ಲಕ್ಷಾಂತರ ರೂ. ಭ್ರಷ್ಟಾಚಾರ ನಡೆಸಿ ರುವ ಸಾಧ್ಯತೆಯಿದೆ. ಸಮಾವೇಶದ ಖರ್ಚು- ವೆಚ್ಚಗಳನ್ನು ಬಹಿರಂಗಪಡಿಸ ಬೇಕೆಂದು ಅವರು ಆಗ್ರಹಿಸಿದ್ದಾರೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ ಹಾಗೂ ಬಿಜೆಪಿ ಸರಕಾರದ ಸಮಯದಲ್ಲಿ ಚಾಲನೆ ನೀಡಿದ್ದ ಹಕ್ಕುಪತ್ರ ನೀಡುವ ಅಭಿಯಾನಗಳನ್ನು ಹಲವು ವರ್ಷಗಳಿಂದ ಕಡತದಲ್ಲಿಯೇ ಇರಿಸಿ ಈಗ ಚುನಾವಣೆಯ ಸಂದರ್ಭದಲ್ಲಿ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದರು.

ಸರಕಾರಿ ಅಧಿಕಾರಿಗಳನ್ನು ಯಥೇತ್ಛ ವಾಗಿ ದುರ್ಬಳಕೆ ಮಾಡುತ್ತಿದ್ದು, ಜಿಲ್ಲಾಧಿಕಾರಿ ಸಚಿವರ ಕೈಗೊಂಬೆಯಾಗಿದ್ದಾರೆ, ಗ್ರಾಮಲೆಕ್ಕಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಇಂತಿಷ್ಟು ಜನ ಸಂಗ್ರಹ ಮಾಡಲೇಬೇಕೆಂಬ ಆದೇಶ ನೀಡಿದ್ದರಿಂದ ಅವರು ಫ‌ಲಾನುಭವಿಗಳು ಮತ್ತವರ ಕುಟುಂಬದವರಿಗೆ ಬೆದರಿಕೆ ಹಾಕಲೇ ಬೇಕಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೂ ಕಡ್ಡಾಯವಾಗಿ ಸಾಧನಾ ಸಮಾವೇಶದಲ್ಲಿ ಹಾಜರಾಗಬೇಕೆಂಬ ಆದೇಶ ನೀಡಿದ್ದು, ಅವರಿಗೆ ಸೂಕ್ತ ಪ್ರಯಾಣದ ವ್ಯವಸ್ಥೆ ಯನ್ನೂ ಮಾಡಿಲ್ಲ. ಹಾಜರಾಗದಿದ್ದರೆ ಸಂಬಳ ಕಡಿತಗೊಳಿಸುವ ಬೆದರಿಕೆ ಹಾಕಲಾಗಿದೆ. ಮುಜರಾಯಿ ಇಲಾಖೆಗೆ ಸೇರಿದ ಕೊಲ್ಲೂರು ದೇವಾಲಯದಿಂದ ಭೋಜನ ತರಿಸಲಾಗಿದೆ. ಜನ ಸೇರಿಸಲು ಸರಕಾರಿ ಬಸ್‌ಗಳನ್ನು ದುರ್ಬಳಕೆ ಮಾಡಲಾಗಿದೆ ಎಂದರು. 

ಸಮಾವೇಶದ ಖರ್ಚು ವೆಚ್ಚಗಳನ್ನು ಉಸ್ತುವಾರಿ ಸಚಿವರ ಮತ್ತೋರ್ವ ಕೈಗೊಂಬೆ ಪೌರಾಯುಕ್ತ ಮಂಜುನಾಥಯ್ಯ ವಹಿಸಿದ್ದಾರೆ. ಪ್ರತಿ ಗುತ್ತಿಗೆದಾರರಿಂದಲೂ ವಸೂಲಿ ನಡೆದಿದೆ. ಪ್ರತಿ ಇಲಾಖೆಗಳಿಂದ 5 ಲ.ರೂ. ಹಫ್ತಾ ವಸೂಲಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next