Advertisement

ಪ್ರತಿಭಟನೆಯ ಅವಲೋಕನಕ್ಕೆ ಬಿಜೆಪಿ ನಿಯೋಗ

09:52 AM Nov 28, 2018 | Team Udayavani |

ಕೊಚ್ಚಿ: ಶಬರಿಮಲೆ ದೇಗುಲದ ಹೊರಗೆ ನಡೆಯುತ್ತಿರುವ ಪ್ರತಿಭಟನೆಯ ಅವಲೋಕನಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ನಾಲ್ವರು ಸದಸ್ಯರ ನಿಯೋಗವೊಂದನ್ನು ರಚಿಸಿದ್ದಾರೆ.

Advertisement

 ಈ ನಿಯೋಗದಲ್ಲಿ ಕರ್ನಾಟಕದ ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌, ಪ್ರಹ್ಲಾದ್‌ ಜೋಷಿ  ಅವರೂ ಇದ್ದಾರೆ. ಇವರಲ್ಲದೆ ಸರೋಜ್‌ ಪಾಂಡೆ ಹಾಗೂ ವಿನೋದ್‌ ಸೋಂಕಾರ್‌ ಕೂಡ ಸಮಿತಿಯಲ್ಲಿ ಇರಲಿದ್ದಾರೆ. ಇವರು ಕೇರಳಕ್ಕೆ ತೆರಳಿ, ಅಲ್ಲಿ ನಡೆಯುತ್ತಿರುವ ಪ್ರತಿಭಟನೆ, ಸತ್ಯಾಗ್ರಹಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪ್ರತಿಭಟನಾ ಕಾರರ ಬಂಧನ ಸೇರಿದಂತೆ ಹಲವು ವಿಷಯಗಳನ್ನು ಪರಿಶೀಲಿಸಲಿದ್ದಾರೆ. ಅಲ್ಲದೆ, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

 ಇನ್ನೊಂದೆಡೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಪೋಸ್ಟ್‌ ಅನ್ನು ಫೇಸ್‌ಬುಕ್‌ನಲ್ಲಿ ಹಾಕಿರುವ ಹೋರಾಟಗಾರ್ತಿ ರೆಹಾನಾ ಫಾತಿಮಾರನ್ನು ಪತ್ತನಂತಿಟ್ಟ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಳೆದ ತಿಂಗಳಷ್ಟೇ ಫಾತಿಮಾ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ತೀವ್ರ ಪ್ರತಿಭಟನೆ ಯಿಂದಾಗಿ ಪ್ರವೇಶ ಸಾಧ್ಯವಾಗಿರಲಿಲ್ಲ. ಅದರ ಬಳಿಕ ಫಾತಿಮಾ ಫೇಸ್‌ಬುಕ್‌ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next