Advertisement
ಶಾ ನೀಡಿದ್ದ ಟಾಸ್ಕ್ನ ವರದಿಯನ್ನು ಮುಖಂಡರು ಸಿದ್ಧಪಡಿಸಿದ್ದು, ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಪಕ್ಷ ಸಂಘಟನೆಗಾಗಿ 3 ರೀತಿಯ ಸಮಿತಿಗಳ ರಚನೆ ಮಾಡಿರುವುದು, ಪರಿವರ್ತನಾ ರಥಯಾತ್ರೆಯ ಸಿದ್ಧತೆ, ಬೂತ್ ಮಟ್ಟದ ಸಮಿತಿಯ ಉಸ್ತುವಾರಿಗಳ ನೇಮಕ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವಿಸ್ತಾರಕರ ನೇಮಕ, ಇತರೆ ಸಮಿತಿಯ ಮಾಹಿತಿಯನ್ನು ಅ.4ರಂದು ನಡೆಯುವ ಕೋರ್ ಸಮಿತಿ ಸಭೆಯಲ್ಲಿ ಮಂಡಿಸಿಲಿದ್ದಾರೆ ಎಂಬುದು ತಿಳಿದು ಬಂದಿದೆ. ಕಳೆದ 2 ತಿಂಗಳ ಪಕ್ಷ ಸಂಘಟನೆ ವರದಿ, ವಿಸ್ತಾರಕರ ಕಾರ್ಯವೈಖರಿ, ರಾಜ್ಯ ಪ್ರವಾಸದ ನಂತರ ನಡೆದ ಬೆಳವಣಿಗೆ, ಪ್ರವಾಸ ಸಂದರ್ಭದಲ್ಲಿ ನೀಡಿರುವ ಸಲಹೆ, ಸೂಚನೆಯ ಅನುಷ್ಠಾನದ ವಸ್ತುನಿಷ್ಠ ಮಾಹಿತಿ ನೀಡುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಶಾ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಕೇಂದ್ರದ ಇಬ್ಬರು ಸಚಿವರನ್ನು ಹೊರತುಪಡಿಸಿ, ರಾಜ್ಯದ ಬಿಜೆಪಿ ನಾಯಕರಿಗೆ ಮೋದಿ ಸರ್ಕಾರದ ಸ್ವಚ್ಛತಾ ದಿವಸ್ ನೆನಪಾಗಲೇ ಇಲ್ಲ. ರಾಜ್ಯಾಧ್ಯಕ್ಷ ಯಡಿಯೂರಪ್ಪ ಬೆಂಗಳೂರಿನಲ್ಲಿ ಇದ್ದರೂ ಸ್ವಚ್ಛತಾ ದಿವಸ್ ಆಚರಿಸಲಿಲ್ಲ. ಹುಬ್ಬಳ್ಳಿಯಲ್ಲಿದ್ದ ಮಾಜಿ ಸಿಎಂ ಜಗದೀಶ ಶೆಟ್ಟರ್, ಶಿವಮೊಗ್ಗದಲ್ಲಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮೊದಲಾದ ನಾಯಕರು ಸ್ವಚ್ಛತಾ ದಿವಸ್ ಆಚರಣೆ ಮಾಡಿಲ್ಲ. ಮೊದಲೆರೆಡು ವರ್ಷ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಪಾಲ್ಗೊಂಡಿದ್ದರು. ಆದರೆ, ಈ ವರ್ಷ ತೆರೆಮರೆಗೆ ಸರಿದಂತಿದೆ. ಸೋಮವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಜನ್ಮದಿನಾಚರಣೆಯಲ್ಲೂ ಬಿಜೆಪಿ ರಾಜ್ಯ ನಾಯಕರು ಇರಲೇ ಇಲ್ಲ.