Advertisement

ಮಂಗಳೂರಿನಲ್ಲಿ ಸೆರೆ ಸಿಕ್ಕ ಕಾಡು ಕೋಣ ಚಾರ್ಮಾಡಿಯಲ್ಲಿ ಕೊನೆಯುಸಿರೆಳೆಯಿತು!

08:01 AM May 06, 2020 | Hari Prasad |

ಮಂಗಳೂರು: ನಗರದ ಹ್ಯಾಟ್ ಹಿಲ್ ಸಮೀಪ ಇಂದು ಬೆಳಿಗ್ಗೆ ಕಾಣಿಸಿಕೊಂಡು ಜನರಲ್ಲಿ ಭಯಹುಟ್ಟಿಸಿದ್ದ ಕಾಡುಕೋಣ ಸಾಯಂಕಾಲದ ವೇಳೆಗೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

Advertisement

ಈ ಪ್ರದೇಶದ ಬೀದಿಗಳಲ್ಲಿ ಓಡಾಡುತ್ತಿದ್ದ ಕಾಡುಕೋಣಕ್ಕೆ ಅರಣ್ಯ ಇಲಾಖಾ ಸಿಬಂದಿ ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಆ ಬಳಿಕ ಕ್ರೇನ್‌ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿ ಲಾರಿಯಲ್ಲಿ ಚಾರ್ಮಾಡಿ ಘಾಟಿ ಬಳಿ ಇರುವ ಪಶ್ಚಿಮಘಟ್ಟ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದರು.

ಆ ಪ್ರದೇಶಕ್ಕೆ ತೆರಳುವ ವೇಳೆಗಾಗಲೇ ಕಾಡುಕೋಣ ಕೊನೆಯುಸಿರೆಳೆದಿದೆ. ಬಳಿಕ ಪಶುವೈದ್ಯರು ಪರಿಶೀಲನೆ ನಡೆಸಿ, ಕಾಡಿಕೋಣವು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಖಚಿತಪಡಿಸಿದ್ದಾರೆ ಎಂದು ದ.ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್‌ ಉದಯವಾಣಿಗೆ ತಿಳಿಸಿದ್ದಾರೆ.

ಇದಕ್ಕೂ ಮೊದಲು ನಗರದೊಳಗೆ ಪ್ರವೇಶಿಸಿ ಸಾರ್ವಜನಿಕರಿಗೆ ಭೀತಿ ಮೂಡಿಸುತ್ತಾ ಓಡಾಡುತ್ತಿದ್ದ ಕಾಡುಕೋಣವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು.


Advertisement

Udayavani is now on Telegram. Click here to join our channel and stay updated with the latest news.

Next