Advertisement

ವೀರಶೈವ ಧರ್ಮದ ಹುಟ್ಟಿನ ದಾಖಲೆ ತೃಪ್ತಿಕರವಾಗಿಲ್ಲ

06:40 AM Mar 17, 2018 | |

ಬೆಂಗಳೂರು: ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಕುರಿತು ರಚನೆಯಾಗಿದ್ದ ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದ ತಜ್ಞರ ಸಮಿತಿ ವೀರ ಶೈವರು ಮತ್ತು ಲಿಂಗಾಯತರ ನಡುವೆ ಭಿನ್ನತೆಯನ್ನು ಸ್ಪಷ್ಟವಾಗಿ ವರ್ಗೀಕರಿಸಿದೆ. ವರದಿಯಲ್ಲಿನ ಉಲ್ಲೇಖ ಹೀಗಿದೆ:

Advertisement

– ವೀರಶೈವರ ಮಠಗಳು ಅಡ್ಡಪಲ್ಲಕ್ಕಿ ದರ್ಬಾರ್‌ ಮಾಡುತ್ತಾರೆ. ಲಿಂಗಾಯತರ ಮಠಗಳು ಸಾಮಾಜಿಕ ಸೇವೆ ಮಾಡುತ್ತವೆ.
– ವೀರಶೈವ ಲಿಂಗಾಯತ ಸಮುದಾಯದ ಮಠಗಳಲ್ಲಿ ವಿರಕ್ತ ಮತ್ತು ಗುರುವರ್ಗ ಎಂಬ ಎರಡು ಪ್ರಕಾರಗಳಿವೆ. ವಿರಕ್ತ ಮಠಗಳು  ಬಸವ ತತ್ವಗಳನ್ನು ಪಾಲಿಸುತ್ತಿದ್ದು, ಅವು ದೊಡ್ಡ ಸಂಖ್ಯೆಯಲ್ಲಿವೆ.
– ಗುರು ವರ್ಗದ ಮಠಗಳು ಸಾಂಪ್ರದಾಯಿಕ, ಧಾರ್ಮಿಕ ಮತ್ತು ಪುರೋಹಿತರ ಕಾರ್ಯದಲ್ಲಿ ತೊಡಗಿವೆ.
– ಗುರು ವರ್ಗದವರು ಬಸವಣ್ಣನನ್ನು ಗೌರವಿಸುವುದು ಮತ್ತು ಅವರ ತತ್ವಗಳಿಗೆ ಮನ್ನಣೆ ನೀಡುವುದು ಕಡಿಮೆ. ಅವರು ಹೆಚ್ಚಾಗಿ ಅಡ್ಡಪಲ್ಲಕ್ಕಿ, ದಸರಾ ದರ್ಬಾರಿನಲ್ಲಿ ಸಕ್ರೀಯರಾಗಿರುತ್ತಾರೆ.
– ವೀರಶೈವ ಧರ್ಮವನ್ನು ಪಂಚಾಚಾರ್ಯರು ಅಥವಾ ರೇಣುಕರು ಸ್ಥಾಪಿಸಿದ್ದರು ಎನ್ನುವುದಕ್ಕೆ ಯಾವುದೇ ಐತಿಹಾಸಿಕ ದಾಖಲೆ ಇಲ್ಲ. ವೀರಶೈವ ಧರ್ಮದ ಹುಟ್ಟಿನ ಬಗ್ಗೆ ದಾಖಲೆಗಳು ತೃಪ್ತಿಕರವಾಗಿಲ್ಲ.
– ವೀರಶೈವರಿಂದ ಲಿಂಗಾಯತ ಕಲುಷಿತವಾಗಿದೆ.
– ಲಿಂಗಾಯತರ ಶಿವ ಸಾಕಾರ ದೇವರಲ್ಲ. ಲಿಂಗಾಯತ ಶಿವನಿಗೂ, ವೀರಶೈವರ ಶಿವನಿಗೂ ವ್ಯತ್ಯಾಸ ಇದೆ. ವೀರಶೈವ ಲಿಂಗಾಯತರ ನಡುವಿನ ಸಾಮ್ಯತೆ: ಇಷ್ಟಲಿಂಗ ಕಟ್ಟಿಕೊಳ್ಳುವುದು, ಅಷ್ಟಾವರಣ, ಷಟ್‌ಸ್ಥಲ ಸಿದಾಟಛಿಂತಗಳಲ್ಲಿ ನಂಬಿಕೆ. ಜನನ, ಮರಣ ಮತ್ತು ಲಿಂಗದೀಕ್ಷೆಯಲ್ಲಿ ಸಾಮ್ಯತೆಗಳಿವೆ. ಆದರೆ, ಅಯ್ನಾಚಾರ,(ಉಪನಯನ) ಮಡಿವಂತಿಕೆ, ಕಾಯಕ ಕರ್ಮವೆಂದು ಪರಿಗಣಿಸುವುದು, ಮಹಿಳೆಗೆ ಹೆಚ್ಚು ಪ್ರಾಧಾನ್ಯತೆ ನೀಡುವುದು, ಮದುವೆಯಲ್ಲಿನ ವಿಧಿ ವಿಧಾನದಲ್ಲಿನ ವ್ಯತ್ಯಾಸಗಳು, ಚರ್ತುವರ್ಣದ ಆಚರಣೆ, ಸ್ಥಾವರಲಿಂಗ ಪೂಜೆ, ದೇವಾಲಯ ಸಂಸ್ಕೃತಿ ,ಪೌರೋಹಿತ್ಯ ನಡೆಸುವುದು, ವಚನಗಳ ತಿರಸ್ಕಾರ, ಸಂಸ್ಕೃತ ಭಾಷೆ ಬಳಕೆ, ಬೇರೆ ಗ್ರಂಥವನ್ನು ತಮ್ಮ ಗ್ರಂಥವೆಂದು ಹೇಳುವುದು ಇವುಗಳಿಂದಾಗಿ ವೀರಶೈವ ಮತ್ತು ಲಿಂಗಾಯತ ಬೇರೆಯೇ ಆಗಿವೆ.

ವೀರಶೈವರು ಮತ್ತು ಲಿಂಗಾಯತರು ಒಂದೇ ಎಂದು ಹೇಳಲು ಕ್ರಿಶ್ಚಿಯನ್‌ ಧರ್ಮಗಳ ಉದಾಹರಣೆ ನೀಡಿರುವ ಸಮಿತಿ ಮುಸ್ಲಿಮರಲ್ಲಿ ಶಿಯಾ ಸುನ್ನಿ ಪಂಗಡಗಳಿದ್ದರೂ ಧರ್ಮಗ್ರಂಥ ಕುರಾನನ್ನು ಗೌರವಿಸುತ್ತಾರೆ. ರಮಜಾನ್‌ ತಿಂಗಳಲ್ಲಿ ಉಪವಾಸ ಮಾಡುತ್ತಾರೆ. ಅದೇ ರೀತಿ ಕ್ರಿಶ್ಚಿಯನ್ನರಲ್ಲಿ ಕ್ಯಾಥೋಲಿಕ್‌ ಮತ್ತು ಪ್ರೊಟೆಸ್ಟಂಟ್‌ ಪಂಗಡಗಳಿದ್ದರೂ ಒಂದೇ ಬೈಬಲ್‌ ಬಳಸುತ್ತಾರೆ. ಒಂದೇ ರೀತಿಯ ಧಾರ್ಮಿಕ ನಂಬಿಕೆ ಹೊಂದಿದ್ದಾರೆ. ಆದರೆ, ವೀರಶೈವ ಲಿಂಗಾಯತರಲ್ಲಿ ಧಾರ್ಮಿಕ ಗ್ರಂಥಗಳು ಭಿನ್ನವಾಗಿವೆ. ಹೀಗಾಗಿ ವೀರಶೈವ ಲಿಂಗಾಯತ ಎರಡೂ ಒಂದೇ ಅಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಲಿಂಗಾಯತರಾಗಿದ್ದ ಮೈಸೂರು ಒಡೆಯರು: 15ನೇ ಶತಮಾನದವರೆಗೂ ಮೈಸೂರು ಒಡೆಯರು ಲಿಂಗಾಯತರಾಗಿದ್ದರು. 1610ರಲ್ಲಿ ರಾಜ ಒಡೆಯರ್‌ ಕಾಲದಲ್ಲಿ ವೈಷ್ಣವರಾಗಿ ಪರಿವರ್ತನೆಗೊಂಡ ನಂತರ ಲಿಂಗಾಯತರು ಅವರ ಬಗ್ಗೆ ಅಸಮಾಧಾನಗೊಂಡಿದ್ದರು.
ಹಾಗೂ 1678 ರಲ್ಲಿ ಚಿಕ್ಕದೇವರಾಜನು ವಿಧಿಸಿದ್ದ ತೆರಿಗೆಗಳ ವಿರುದ್ಧ ಲಿಂಗಾಯತರು ದಂಗೆ ಎದ್ದಿದ್ದರು. ಆಗ 770 
ಲಿಂಗಾಯತ ಮಠಾಧೀಶರಲ್ಲಿ 440 ಮಠಾಧೀಶರನ್ನು ಮೋಸದಿಂದ ಚಿಕ್ಕದೇವರಾಜ ಕೊಲ್ಲಿಸಿ ‘ಜಂಗಮ ಕ್ರಾಂತಿ’ಯನ್ನು ಸದೆ ಬಡಿದರು.

ಬ್ರಿಟೀಷರಿಂದ ಮೈಸೂರು ರಾಜರಿಗೆ ಅಧಿಕಾರ ಮರಳಿ ಬಂದಾಗ ಲಿಂಗಾಯತರನ್ನು ಹದ್ದು ಬಸ್ತಿನಲ್ಲಿಡಲು 1818ರ
ಜನಗಣತಿಯಲ್ಲಿ ಸಿ. ರಂಗಾಚಾರಿಯವರು ಲಿಂಗಾಯತರನ್ನು ಮೂಲೆಗುಂಪು ಮಾಡಿ ಹಿಂದೂ ಧರ್ಮದ ಶೂದ್ರದ ಪಟ್ಟಿಗೆ ಸೇರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next