Advertisement

ಯಡ್ರಾಮಿಯಲ್ಲಿ ಭವ್ಯ ಮಂದಿರ

12:47 PM Apr 10, 2022 | Team Udayavani |

ಯಡ್ರಾಮಿ: ಪಟ್ಟಣದ ಆರಾಧ್ಯ ದೈವ ಗ್ರಾಮದೇವತೆ ಮಂದಿರ ಏ. 26ರಂದು ಉದ್ಘಾಟನೆಯಾಗಲಿದ್ದು, 15ರಿಂದ ಪುರಾಣ ಕಾರ್ಯಕ್ರಮ ಆರಂಭವಾಗಿದ್ದು, ಏ.28, 29ರಂದು ಜಾತ್ರೆ ನಡೆಯಲಿದೆ.

Advertisement

ಕಳೆದ ಒಂಭತ್ತು ವರ್ಷದಿಂದ ದೇಗುಲದ ಕಾಮಗಾರಿ ನಡೆದಿದ್ದು, ದ್ರಾವಿಡ ಶೈಲಿಯಲ್ಲಿ ಜಿಲ್ಲೆಯ ಹಿರಿಯ ಕಲಾವಿದ ಬಿ.ಜಿ.ಖಂಡೇರಾವ್‌ ಅವರ ವಿನ್ಯಾಸದಲ್ಲಿ ಮಂದಿರ ನಿರ್ಮಾಣವಾಗಿದೆ ಎಂದು ದೇಗುಲ ಸಮಿತಿ ಸದಸ್ಯರು ತಿಳಿಸಿದ್ದಾರೆ.

ದೇಗುಲ ಉದ್ಘಾಟನೆ ಹಾಗೂ ಜಾತ್ರೆಗಾಗಿ ಬಣ್ಣಬಣ್ಣದ ವಿದ್ಯುತ್‌ ದೀಪಗಳನ್ನು ದೇಗುಲಕ್ಕೆ ಅಳವಡಿಸಲಾಗಿದೆ. ಸತತ 15 ದಿನ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿವಿಧ ಗಣ್ಯರು, ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.

ಗ್ರಾಮದಲ್ಲಿ ಭವ್ಯ ಮಂದಿರ ಉದ್ಘಾಟನೆ ಆಗುತ್ತಿರುವುದಕ್ಕೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದು ಯುವ ಹೋರಾಟಗಾರ ಅಪ್ರೋಜ್‌ ಅತ್ನೂರ, ಗ್ರಾಮದೇವತೆ ಟ್ರಸ್ಟ್‌ ಕಮಿಟಿ ಸದಸ್ಯ ಪ್ರಕಾಶ ಸಾಹು ಬೆಲ್ಲದ, ಡೊಳ್ಳು ಕಲಾವಿದ ರೇವಣಸಿದ್ಧ ಪೂಜಾರಿ ಹೊಸಮನಿ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next