ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಯ ಗುಣಮಟ್ಟ ಹಾಗೂ ಸೇವೆಗಳ ಬಗ್ಗೆ ಸಮಾಜದಲ್ಲಿ ನಕಾರಾತ್ಮಕ ಧೋರಣೆ ಬೆಳೆದು ಬಿಟ್ಟಿದೆ.ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರೆ ಅವುಗಳನ್ನು ಮುಚ್ಚಿಸಲು ಸಿದಟಛಿ ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ “ಕರ್ನಾಟಕ ಹೆಲ್ತ್‌ಕೇರ್ ಸಮ್ಮಿಟ್-2017′ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನಿಗೆ ಬರುವ ಕಾಯಿಲೆಗಳಿಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ
ಚಿಕಿತ್ಸಾ ವಿಧಾನ ಮತ್ತು ಔಷಧಿಗಳು ಒಂದೇ ಆಗಿರುತ್ತದೆ. ಆದರೂ, ಖಾಸಗಿ ಆಸ್ಪತ್ರೆಗಳ ಬಗ್ಗೆಯೇ ಜನರಲ್ಲಿ ಹೆಚ್ಚು ವಿಶ್ವಾಸ. ಹಾಗಾದರೆ, ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾದವರಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ವಾ? ಜನರ ಪ್ರಾಣ ಉಳಿಸುವ ಕೆಲಸ ಸರ್ಕಾರಿ ಆಸ್ಪತ್ರೆಗಳಿಂದ ಆಗುತ್ತಿಲ್ವಾ ಎಂದು ಪ್ರಶ್ನಿಸಿದರು.
“ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಮಾಜದಲ್ಲಿ ನಕರಾತ್ಮಕ ಧೋರಣೆ ಬೆಳೆದು ಬಿಟ್ಟಿದೆ. ಆ ರೀತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಸಾಬೀತಾದರೆ, ಅಂತಹ ಆಸ್ಪತ್ರೆಯನ್ನು ಮುಚ್ಚಿಸಲು ನಾನು ಸಿದ್ಧ’ ಎಂದರು. ಆರೋಗ್ಯ ಕ್ಷೇತ್ರವನ್ನು ಸೇವಾ ವಲಯದಬದಲಿಗೆ ಉದ್ಯಮವನ್ನಾಗಿ ನೋಡಿದರೆ, ಕೆಳಹಂತದ ಜನರಿಗೆ ಆರೋಗ್ಯ ಸೇವೆ ನೀಡುವುದು ಕಷ್ಟ.ಕಾರ್ಪೋರೇಟ್ ಹಾಗೂ ಖಾಸಗಿ ಸಂಸ್ಥೆ ಯವರು ಆರೋಗ್ಯ ಕ್ಷೇತ್ರವನ್ನು ಸೇವಾ ವಲಯ ಎಂದು ಅಥವಾ ಉದ್ಯಮ ಎಂದು ಭಾವಿಸಿದ್ದಾರೆ ಅನ್ನುವುದು ಸ್ಪಷ್ಟವಾಗ ಬೇಕು.
ಒಂದೊಮ್ಮೆ ಆರೋಗ್ಯ ಕ್ಷೇತ್ರವನ್ನು ಉದ್ಯಮ ವಲಯ ಎಂದು ಭಾವಿಸಿ ಬಿಟ್ಟರೆ ಸಮಾಜದಲ್ಲಿನ ಬಡವರು, ಮಧ್ಯಮ ವರ್ಗದವರಿಗೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವುದು ಕಷ್ಟವಾಗುತ್ತದೆ. ಆರೋಗ್ಯ ವಲಯ ಎಂದಿಗೂ ವ್ಯಾಪಾರ ಆಗಬಾರದುಎಂದರು.ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ನಿರ್ದೇಶಕ ಡಾ.ಕೆ.ರಾಜೇಶ್ವರ್ ರಾವ್, ಕೇರಳ ರಾಜ್ಯದ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್, ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ನಿರ್ದೇಶಕಿ ಡಿ.ಎಲ್. ಅಲವೇಲು, ಡಾ.ರತನ್ ಕೇಲ್ಕರ್ ಮತ್ತಿತರರು ಉಪಸ್ಥಿತರಿದ್ದರು.