Advertisement
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚುನಾವಣಾ ಜನ ಜಾಗೃತಿ ಮತ್ತು ಮತದಾನ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ 5 ವರ್ಷಕ್ಕೊಮ್ಮೆ ಬರುವ ಚುನಾವಣಾ ಪ್ರಕ್ರಿಯಿಯೆಯಲ್ಲಿ ಮತದಾರ ಬಹು ಮುಖ್ಯ ಪಾತ್ರ ವಹಿಸುತ್ತಾನೆ. ತನ್ನ ನಾಯಕನನ್ನು ಆರಿಸಿಕೊಳ್ಳಲು ಸೂಕ್ತ ಸಮಯ ಇದಾಗಿದ್ದು, ಮತದಾನದಿಂದ ತಪ್ಪಿಸಿಕೊಳ್ಳಬಾರದು ಎಂದು ಹೇಳಿದರು.
Related Articles
ಜಗಳೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಸಲುವಾಗಿ ಬಿಎಲ್‌ಓ ಗಳು ಹಾಗೂ ಮತದಾರ ಸಾಕ್ಷರತಾ ಸಂಘಗಳ ಸಂಚಾಲಕರಿಗೆ ಎರಡು ದಿನದ ಕಾರ್ಯಾಗಾರವನ್ನು ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
Advertisement
ಸಾಕ್ಷರತಾ ಸಂಘಗಳ ಸಂಚಾಲಕರಾದ ಸಮಾಜ ವಿಜ್ಞಾನ ಶಿಕ್ಷರು, ರಾಜ್ಯಶಾಸ್ತ್ರ ಉಪನ್ಯಾಸಕರು ಮತ್ತು ಬೂತ್ ಮಟ್ಟದ ಬಿಎಲ್ ಒಗಳಿಗೆ ಮತಯಂತ್ರಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಮತದಾನದ ಮಹತ್ವ ಕುರಿತ ಮಸ್ತಿ ದೋಸ್ತಿ ಎಂಬ ಕಿರು ಚಿತ್ರ ಹಾಗೂ ಹಳ್ಳಿಗಳಲ್ಲಿ ಬೀದಿ ನಾಟಕದ ಮೂಲಕ ಮತದಾನ ಮಾಡುವ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಸಾರ್ವಜನಿಕರಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಿ, ಮತದಾನ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎಂದು ತರಬೇತುದಾರರು ತಿಳಿಸಿದರು.
ಕಾರ್ಯಾಗಾರದಲ್ಲಿ ಬ್ಲಾಕ್ ಮಟ್ಟದ 130 ಬಿಎಲ್‌ಒಗಳು ಭಾಗವಹಿಸಿದ್ದರು. ಇಸಿಒ ಶಿವಣ್ಣ, ಕೊಟ್ರೇಶ್, ಕೃಷ್ಣಪ್ಪ, ಮಂಜಣ್ಣ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.
ರೈತರಿಗೆ ಮತದಾನ ಜಾಗೃತಿಹರಿಹರ: ವಿವಿಧ ಕೆಲಸ ಕಾರ್ಯಗಳಿಗೆಂದು ನಗರದ ಕೃಷಿ ಇಲಾಖೆಗೆ ಆಗಮಿಸಿದ್ದ ರೈತರಿಗೆ ಮತದಾನದ ಜಾಗೃತಿ ಮೂಡಿಸಲಾಯಿತು. ರೈತರನ್ನು ಕಚೇರಿ ಆವರಣದಲ್ಲಿ ಒಗ್ಗೂಡಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಪಿ.ಗೋವರ್ಧನ್, ಬರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ. ಮತ್ತು ಚುನಾವಣೆಯಲ್ಲಿ ನಿರ್ಭೀತರಾಗಿ ಮತ ಚಲಾಯಿಸುತ್ತೇವೆ ಎಂದು ರೈತರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕೃಷಿ ಅಧಿಕಾರಿ ಜೀವನ್ ಸಾಬ್, ಮಲ್ಲಿಕಾರ್ಜುನ ಹುಣಿಸಿಕಟ್ಟಿ, ದೇವೇಂದ್ರಪ್ಪ, ಪ್ರಸಾದ್ ಗಂಗನರಸಿ ಮತ್ತಿತರರಿದ್ದರು. ಮತದಾನ ಜಾಗೃತಿಗೆ ರಂಗೋಲಿ ಸ್ಪರ್ಧೆ
ಹರಿಹರ: ನಗರದ ವಿದ್ಯಾದಾಯಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮತದಾನ ಜಾಗೃತಿ ಮೂಡಿಸಲು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ಮತದಾನದ ಮಹತ್ವ ಸಾರುವ ಭಿನ್ನ ಭಿನ್ನ ಚಿತ್ತಾಕರ್ಷಕ ರಂಗೋಲಿ ಬಿಡಿಸಿದ್ದರು. ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾನದ ಪಾತ್ರವನ್ನು ಸಾರುವ ಘೋಷ ವಾಕ್ಯಗಳ ರಂಗೋಲಿಗಳು ಎಲ್ಲರ ಗಮನ ಸೆಳೆದವರು. ಅತ್ಯುತ್ತಮವಾಗಿ ರಂಗೋಲಿ ರಚಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ವಿದ್ಯಾಸಂಸ್ಥೆಯ ಅಧ್ಯಕ್ಷ ಡಿ.ಜಿ.ರಘುನಾಥ್, ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿನಿಯರಾದ ಮಧು ಆರ್.ಡಿ., ಮಂಗಳಾ ಎಚ್. ಪ್ರಥಮ ಸ್ಥಾನವನ್ನು, ನಂದಿನಿ ಜಿ.ಎಸ್., ನಿಲುಫರ್ ಕಣನಕೇರಿ, ಲತಾ, ವೀಣಾ ದ್ವಿತೀಯ ಸ್ಥಾನ, ರೂಪ ಎಂ.ಎಸ್., ಸಹನಾ ಎಂ. ತೃತೀಯ ಸ್ಥಾನ ಗಳಿಸಿದರು. ಬಿಎಲ್‌ಒಗಳಿಗೆ ತರಬೇತಿ
ಜಗಳೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಸಲುವಾಗಿ ಬಿಎಲ್‌ಓ ಗಳು ಹಾಗೂ ಮತದಾರ ಸಾಕ್ಷರತಾ ಸಂಘಗಳ ಸಂಚಾಲಕರಿಗೆ ಎರಡು ದಿನದ ಕಾರ್ಯಾಗಾರವನ್ನು ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾಕ್ಷರತಾ ಸಂಘಗಳ ಸಂಚಾಲಕರಾದ ಸಮಾಜ ವಿಜ್ಞಾನ ಶಿಕ್ಷರು, ರಾಜ್ಯಶಾಸ್ತ್ರ ಉಪನ್ಯಾಸಕರು ಮತ್ತು ಬೂತ್ ಮಟ್ಟದ ಬಿಎಲ್ ಒಗಳಿಗೆ ಮತಯಂತ್ರಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಮತದಾನದ ಮಹತ್ವ ಕುರಿತ ಮಸ್ತಿ ದೋಸ್ತಿ ಎಂಬ ಕಿರು ಚಿತ್ರ ಹಾಗೂ ಹಳ್ಳಿಗಳಲ್ಲಿ ಬೀದಿ ನಾಟಕದ ಮೂಲಕ ಮತದಾನ ಮಾಡುವ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಸಾರ್ವಜನಿಕರಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಿ, ಮತದಾನ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎಂದು ತರಬೇತುದಾರರು ತಿಳಿಸಿದರು. ಕಾರ್ಯಾಗಾರದಲ್ಲಿ ಬ್ಲಾಕ್ ಮಟ್ಟದ 130 ಬಿಎಲ್‌ಒಗಳು ಭಾಗವಹಿಸಿದ್ದರು. ಇಸಿಒ ಶಿವಣ್ಣ, ಕೊಟ್ರೇಶ್, ಕೃಷ್ಣಪ್ಪ, ಮಂಜಣ್ಣ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.