Advertisement

ಮೆಕಾಲೆ ಸುಳ್ಳು ಹೇಳಿಕೆ ನಂಬಿರುವುದು ಆಘಾತಕಾರಿ

10:20 AM Sep 17, 2017 | Harsha Rao |

ಉಡುಪಿ:ಭಾರತಕ್ಕೆ ಮೆಕಾಲೆ ಬರುವವರೆಗೂ ಸಂಸ್ಕೃತವನ್ನು ದೇಶದ ಜನತೆ ತಾಯಿ ಭಾಷೆ ಎಂದು ತಿಳಿದಿದ್ದರು. ಮೆಕಾಲೆ ಸಂಸ್ಕೃತವನ್ನು ನಕಾರಾತ್ಮಕವಾಗಿ ಸಂಭೋಧಿಸಿ ಆಂಗ್ಲ ಭಾಷೆಯನ್ನು ಹೇರಿದ. ಸಂಸ್ಕೃತ ಭಾಷೆಯ
ಬಗ್ಗೆ ಆತನ ಸುಳ್ಳು ಹೇಳಿಕೆಗಳು ವಿಸ್ತರಿಸಿತು. ಆದರೆ ಅದನ್ನೇ ದೇಶದ ಕೆಲವು ಕವಿಗಳು ಅಂದು ನಂಬಿರುವುದು ಆಘಾತಕಾರಿ ಎಂದು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಚಂದ್ರಶೇಖರ ಕಂಬಾರ ಹೇಳಿದರು. 

Advertisement

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. 

ಭಕ್ತಿ ರಸ ಸಾಹಿತ್ಯ, ಕಲೆಯಿಂದ ದೊರೆಯುತ್ತದೆ. ದೇಶದಲ್ಲಿ ಕಾರ್ಪೊರೇಟ್‌ ಸಂಸ್ಕೃತಿ ವೇಗವಾಗಿ ಅಪ್ಪಳಿಸುತ್ತಿದ್ದರೂ ನಮ್ಮ ಕಲೆ ಬೆಳೆದಿದೆ. ಕಲೆ ಮಾತ್ರ ನಮ್ಮ ವಿವೇಕವನ್ನು ಉಳಿಸುತ್ತದೆ. ಅದು ಉಳಿದರೆ ಮಾತ್ರ ನಾವು ಭಾರತೀಯರಾಗಿ ಇರಲು ಸಾಧ್ಯ ಎಂದರು. 

ಭಕ್ತಿ ಚಳವಳಿ ವಿಶ್ವವ್ಯಾಪಿ
ದೇಶದಲ್ಲಿ ಅಂದಿನ ಕಾಲದ ಭಕ್ತಿ ಕ್ರಾಂತಿ ಮತ್ತು ಶೈಕ್ಷಣಿಕ ಕ್ರಾಂತಿ ಮಹತ್ವದಾಗಿತ್ತು. ಭಕ್ತಿ ಚಳವಳಿ ಪ್ರಪಂಚ ವ್ಯಾಪಿಯಾಗಿತ್ತು. ಭಾರತದ ಭಕ್ತಿಯ ಶಕ್ತಿಗೆ ಎಲ್ಲರೂ ಚಕಿತರಾಗಿದ್ದರು. ಭಕ್ತಿ ಚಳವಳಿಯ ಕಾಲದಲ್ಲಿ ಭಾಷೆಗಳು ವಿಸ್ತರಿಸಿದವು. ಯಕ್ಷಗಾನ, ಇತರ ಕಲೆಗಳು ಭಾರೀ ಪ್ರಚಾರ ಪಡೆದವು. ಸಾಹಿತ್ಯದ ಸುಗ್ಗಿಯೇ ಅಂದಿನ ಕಾಲದಲ್ಲಿ ಹರಿದಿತ್ತು ಎಂದರು. 

ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಭಕ್ತಿ ಚಳುವಳಿಯ ಕಾಲದಲ್ಲಿ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಲು ಅನೇಕ ಸಂತರು ಶ್ರಮಿಸಿದ್ದಾರೆ.

Advertisement

ಭಕ್ತಿ ಒಂದು ಗುಂಪಿಗೆ ಸೀಮಿತವಲ್ಲ, ಭಕ್ತಿಯಲ್ಲಿ ಎಲ್ಲರೂ ಸಮಾನರು ಎಂಬ ಸಮಾನತೆಯ ಸಂದೇಶವನ್ನು ಅಂದಿನ ಚಳವಳಿ ಸಮಾಜಕ್ಕೆ ನೀಡಿದೆ. ಅದೊಂದು ವಿಶೇಷ ಸಂದರ್ಭವಾಗಿತ್ತು ಎಂದರು. 

ಪೇಜಾವರ ಶ್ರೀಗಳು ಡಾ|ಚಂದ್ರಶೇಖರ ಕಂಬಾರ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು. ಡಾ| ಗುರುಮೂರ್ತಿ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next