Advertisement
ಪ್ರವಾಸೋದ್ಯಮ ಪುನರಾರಂಭಕ್ಕೆ ಸಮಯಮಿತಿ ನಿಗದಿಗೊಳಿಸದ ಅವರು, ಪ್ರವಾಸಿಗರು ತಂಗುವ ಹೊಟೇಲ್‌ಗಳಲ್ಲಿ ಸಾಂಕ್ರಾಮಿಕ ಆರೋಗ್ಯ ತಜ್ಞರು ನಿಗಾ ಇರಿಸಲಿದ್ದಾರೆ.ಪ್ರವಾಸಿಗರು ಹವಾನಕ್ಕೆ ಭೇಟಿ ನೀಡುವುದನ್ನು ಕೂಡ ನಿರ್ಬಂಧಿಸಲಾಗುವುದು. ಪ್ರವಾಸೋದ್ಯಮವನ್ನು ಮೊದಲು ದೇಶದ ಪ್ರಜೆಗಳಿಗೆ ಮುಕ್ತಗೊಳಿಸಿ, ಆ ಬಳಿಕ ವಿದೇಶಿಯರ ಆಗಮನಕ್ಕೆ ಅವಕಾಶ ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಪುಟ್ಟ ಕೆರಿಬಿಯನ್ ದ್ವೀಪವು ಅತಿ ಕಡಿಮೆ ಕೋವಿಡ್ ಸೋಂಕಿತರನ್ನು ಹೊಂದಿತ್ತು ಹಾಗೂ ಕೊರೊನಾಮುಕ್ತವಾಗುವ ದಿನಗಳು ಹತ್ತಿರದಲ್ಲಿದೆ.ಹೊಸ ಲಾಕ್‌ಡೌನ್ ಯೋಜನೆ ಬಗ್ಗೆ ತಿಳಿಸಿದ ಪ್ರಧಾನಿ, ದೇಶದ ಸಾರ್ವಜನಿಕ ಈಜುಕೊಳಗಳು ಈ ಬಾರಿಯ ಬೇಸಗೆಗೆ ಶೇ. 30ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯಾರಂಭ ಮಾಡಲಿದೆ. ಸಾಮಾಜಿಕ ಅಂತರ ಕಾಪಾಡುವ ಷರತ್ತಿನೊಂದಿಗೆ ಸ್ಥಳೀಯಾಡಳಿತ ನಿಗಾದಲ್ಲಿ ಬೀಚುಗಳು ಪ್ರವಾಸಿಗರಿಗೆ ಮುಕ್ತವಾಗಲಿವೆ. ಆದರೆ ಸೋಂಕು ಹರಡುವುದನ್ನು ತಡೆಯುವ ಭಾಗವಾಗಿ ಈ ಬಾರಿ ಬೀಚುಗಳಲ್ಲಿ ಬೇಸಗೆ ಹಬ್ಬಗಳನ್ನು ಸರಕಾರ ಆಯೋಜಿಸುವುದಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಶಾಲೆಗಳನ್ನು ಸೆಪ್ಟಂಬರ್ ಮತ್ತು ನವೆಂಬರ್‌ನಲ್ಲಿ ಎರಡು ಹಂತಗಳಲ್ಲಿ ತೆರೆಯಲು ಸರಕಾರ ನಿರ್ಧರಿಸಿದೆ. ಸಾರ್ವಜನಿಕ ಹಾಗೂ ಖಾಸಗಿ ವಾಹನ ಸಂಚಾರವು ಕ್ರಮೇಣ ದೇಶವ್ಯಾಪಿಯಾಗಿ ಪುನರಾರಂಭವಾಗಲಿದೆ. ಸಾರ್ವಜನಿಕ ಸ್ಥಳಗಳು ಹಾಗೂ ಜನರು ಹತ್ತಿರದ ಸಂಪರ್ಕದಲ್ಲಿರುವಲ್ಲೆಲ್ಲ ಮಾಸ್ಕ್ ಬಳಕೆ ಕಡ್ಡಾಯವಾಗಿದೆ ಎಂದೂ ಅವರು ಹೇಳಿದ್ದಾರೆ. ದೇಶದಲ್ಲಿ ಸೋಂಕು ಪತ್ತೆಯಾದ ಕೂಡಲೇ ಗಡಿಗಳನ್ನು ಹಾಗೂ ಶಾಲೆಗಳನ್ನು ಮುಚ್ಚುವ ಮೂಲಕ ಸರಕಾರವು ವೈರಸ್ ಹೆಚ್ಚು ಹರಡದಂತೆ ನೋಡಿಕೊಂಡಿತ್ತು.