Advertisement

ಬಿಡಿಎಯನ್ನೂ ರೇರಾ ವ್ಯಾಪ್ತಿಗೆ ತರಲು ಆಗ್ರಹ

12:38 PM May 08, 2017 | Team Udayavani |

ಬೆಂಗಳೂರು: ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆಯನ್ನು ಶೀಘ್ರವೇ ಜಾರಿಗೆ ತರುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಪುರಭವನದ ಎದುರು ಭಾನುವಾರ ಪತ್ರಿಭಟನೆ ನಡೆಸಿದವು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಬಿಡಿಎ, ಹೌಸಿಂಗ್‌ ಬೋರ್ಡ್‌ ರೇರಾ ಕಾಯ್ದೆಗೆ ಒಳಪಡಲಿವೆ.

Advertisement

ಆದರೆ ಸರ್ಕಾರ ಕಾಯ್ದೆಯಿಂದ ಬಿಡಿಎಯನ್ನು ಹೊರಗಿರಿಸಲು ಪ್ರಯತ್ನಿಸುತ್ತಿದೆ. ಇದರಿಂದ ಸಾರ್ವಜನಿಕರಿಗೆ ಅನ್ಯಾಯವಾಗಲಿದ್ದು, ಯಾವುದೇ ಕಾರಣಕ್ಕೂ ಕಾಯ್ದೆಯಿಂದ ಬಿಡಿಎಯನ್ನು ಕೈಬಿಡಬಾರದು ಎಂದು ಫೈಟ್‌ ಫಾರ ರೇರಾ ಸಂಘಟನೆ, ಕೆಂಪೇಗೌಡ ಬಡಾವಣೆ ನಿವೇಶನದಾರರು ಹಾಗೂ ಮನೆ ಖರೀದಿದಾರರ ಸಂಘದ ಕಾರ್ಯಕರ್ತರು ಪತ್ರಿಭಟನೆಯಲ್ಲಿ ಒತ್ತಾಯಿಸಿದರು.

ಬಿಡಿಎ ನಿರ್ಮಿಸಿರುವ ಎಲ್ಲ ಬಡಾವಣೆ, ವಸತಿ ಸಮುತ್ಛಯ ಸಮಯಕ್ಕೆ ಸರಿಯಾಗಿ ಫ‌ಲಾನು ಭವಿಗಳ ಕೈಸೇರಿಲ್ಲ. ಕಾಯ್ದೆ ಜಾರಿಯಾದ ಬಳಿಕ ಈ ರೀತಿ ಯೋಜನೆಗಳು ವಿಳಂಬವಾದಲ್ಲಿ ಗ್ರಾಹಕರಿಗೆ ವಾರ್ಷಿಕ ಶೇ.10.9ರ ದರದಲ್ಲಿ ದಂಡ ಪಾವತಿಸಬೇಕಾಗುತ್ತದೆ.

ಜತೆಗೆ ಗ್ರಾಹಕರು ಪವತಿಸಿದ ಹಣದ ಶೇ.70 ಭದ್ರತೆಗಾಗಿ ಠೇವಣಿ ಇಡಬೇಕೆಂಬ ನಿಯಮ ಕಾಯ್ದೆಯಲ್ಲಿದೆ. ಯಾವುದೇ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸದ ಬಿಡಿಎಗೆ ಈ ಕಾಯ್ದೆಯಿಂದ ಸಾಕಷ್ಟು ತೊಂದರೆಯಾಗಲಿದೆ ಎಂಬುದನ್ನು ಮನಗಂಡಿರುವ ಸರ್ಕಾರ ರೇರಾ ಕಾಯ್ದೆಯಿಂದ ಅದನ್ನು ಹೊರಗಿಡಲು ಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next