Advertisement

ಹೊಯಿಗೆಬೈಲ್‌: ರಾಜಕಾಲುವೆಯ ತಡೆಗೋಡೆ, ಮನೆಯ ಆವರಣ ಗೋಡೆ ಕುಸಿತ

12:13 PM Jun 22, 2018 | Team Udayavani |

ಮಹಾನಗರ: ಅಶೋಕ ನಗರದ ಹೊಯಿಗೆಬೈಲ್‌ನಲ್ಲಿ ರಾಜಕಾಲುವೆಯ ತಡೆಗೋಡೆ ಹಾಗೂ ಮನೆಯೊಂದರ ಆವರಣ ಗೋಡೆ ಕುಸಿದು ಬಿದ್ದ ಘಟನೆ ಗುರುವಾರ ಸಂಭವಿಸಿದೆ. ಶೆರಿ ಡಿ’ಸೋಜಾ ಅವರ ಎರಡಂತಸ್ತಿನ ಮನೆಯ ಆವರಣ ಗೋಡೆ ಇದಾಗಿದ್ದು, ಬೆಳಗ್ಗೆ 6 ಗಂಟೆ ವೇಳೆಗೆ ದಿಢೀರನೆ ಕುಸಿದಿದೆ. ಇದರಿಂದ ಮನೆಯ ಅಡಿಪಾಯದ ತನಕವೂ ಹಾನಿ ಉಂಟಾಗಿದೆ.

Advertisement

13 ವರ್ಷಗಳ ಹಿಂದೆ 10- 12 ಎತ್ತರಕ್ಕೆ ರಾಜ ಕಾಲುವೆಯ ತಡೆಗೋಡೆಯಾಗಿ ನಿರ್ಮಾಣ ಮಾಡಲಾಗಿತ್ತು. ಧಾರಾಕಾರವಾಗಿ ಸುರಿದ ಮಳೆಯ ಕಾರಣ ಸುಮಾರು 40 ಅಡಿ ಉದ್ದಕ್ಕೆ ಭೂ ಕುಸಿತ ಸಂಭವಿಸಿದೆ. ತಡೆ ಗೋಡೆಯ ಕಲ್ಲುಗಳು ಮಣ್ಣು ಸಮೇತ ಕುಸಿದ ಕಾರಣ ಮನೆಯಂಗಳದ ಹೂಗಿಡಗಳು ನಾಶವಾಗಿವೆ.

ಮಹಾನಗರ ಪಾಲಿಕೆಯ ಸ್ಥಳೀಯ ಕಾರ್ಪೊರೇಟರ್‌ ರಾಧಾಕೃಷ್ಣ ಮತ್ತು ಪಾಲಿಕೆಯ ಎಂಜಿನಿಯರ್‌ ನಿತ್ಯಾನಂದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಾಯದ ಸೂಚನೆ ಇರುವುದರಿಂದ ಮಧ್ಯಾಹ್ನ ಬಳಿಕ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆ ತೆರವು ಮಾಡಲು ಸೂಚನೆ ನೀಡಿದ್ದಾರೆ.

ಮರಳಿನ ಚೀಲ ಇರಿಸಿ ತಾತ್ಕಾಲಿಕ ಪರಿಹಾರ
ಮಳೆಗಾಲ ಆಗಿರುವುದರಿಂದ ಹಾಗೂ ರಾಜ ಕಾಲುವೆಯಲ್ಲಿ ನೀರು ಹರಿಯುತ್ತಿರುವುದರಿಂದ ಮೂರು ತಿಂಗಳ ಕಾಲ ಶಾಶ್ವತ ತಡೆಗೋಡೆ ಕಾಮಕಾರಿ ನಡೆಸುವಂತಿಲ್ಲ. ಹಾಗಾಗಿ ತಾತ್ಕಾಲಿಕವಾಗಿ ಮರಳಿನ ಚೀಲಗಳನ್ನಿಟ್ಟು ತಡೆಗೋಡೆಯನ್ನು ನಿರ್ಮಿಸಲು ಸೂಚಿಸಲಾಗಿದೆ ಎಂದು ಕಾರ್ಪೊರೇಟರ್‌ ರಾಧಾಕೃಷ್ಣ ಅವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next