Advertisement
ನಗರದ ವಿ. ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗದ ವತಿಯಿಂದ ಮಾನಸಗಂಗೋತ್ರಿ ರಾಣಿ ಬಹದ್ಧೂರ್ ಸಭಾಂಗಣದಲ್ಲಿ ಸಾಮಾಜಿಕ ಕ್ರಾಂತಿಕಾರಿ ಮಾಜಿ ಸಚಿವ ಬಿ. ಬಸವಲಿಂಗಪ್ಪನವರ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ಮಲ್ಕುಂಡಿ ಮಹಾದೇವಸ್ವಾಮಿ ಅವರ “ಬಯಲು ಬಹಿರ್ದೆಸೆ-ಒಂದು ಸಾಮಾಜಿಕ ಅನಿಷ್ಟ’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಲಿತರ ನೋವು ದಲಿತನಿಗಷ್ಟೇ ತಿಳಿದಿದ್ದು, ಧರ್ಮ, ವರ್ಣಾಶ್ರಮ ಪದ್ಧತಿ, ಜಾತಿಯಿಂದ ದಲಿತರು ನೋವು ಅನುಭವಿಸಿದ್ದಾರೆ.
Related Articles
Advertisement
ಕೃತಿ ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನೀಲಗಿರಿ ಎಂ.ತಳವಾರ್ ಮಾತನಾಡಿ, ಭಾರತವೆಂದರೆ ನಮ್ಮ ಕಣ್ಮುಂದೆ ಬರುವುದು ನಗರಗಳು. ಗ್ರಾಮ ಭಾರತ ಕೂಡ ಇದೆ ಎಂಬುದನ್ನು ನಾವು ಮರೆಯುತ್ತೇವೆ. ಮಲ್ಕುಂಡಿ ಮಹದೇವಸ್ವಾಮಿ ಅವರ ಕೃತಿ ಗ್ರಾಮ ಭಾರತದ ನೋಡಲು ಪ್ರೇರೆಪಿಸುತ್ತದೆ. ಅದರ ಬಗ್ಗೆ ಚಿಂತಿಸಲು ಒತ್ತಾಯಿಸುತ್ತದೆ. 110 ಪುಟಗಳ ಪುಟ್ಟ ಪುಸ್ತಕ ಗ್ರಾಮ ಭಾರತದ ವಿಶ್ವರೂಪ ದರ್ಶನ ಮಾಡಿಸುತ್ತದೆ.
ಕೃತಿಯು ಸಹೃದಯ ಜನರ ಗ್ರಾಮ ಜೀವನದ ಬಗೆಗೆ ಆತ್ಮವಲೋಕನ ಮಾಡಿಕೊಳ್ಳುವ ಪ್ರಜ್ಞೆ ಬರಲಿದ್ದು, ಮನವರಿಕೆಯ ಬರವಣಿಗೆಯಿದೆ. ವೈಜ್ಞಾನಿಕ ದೃಷ್ಟಿಕೋನವಿದ್ದು, ಅಂಕಿ ಸಂಖ್ಯೆಗಳ ಕ್ರೋಢೀಕರಣ ದಾಖಲಾಗಿದೆ. ಒಂದು ಕೃತಿಯ ಯಶಸ್ಸು ಇರುವುದು ಪ್ರಶ್ನೆ ಮೂಡಿಸುವುದರಲ್ಲಿ ಮಲ್ಕುಂಡಿ ಮಹದೇವಸ್ವಾಮಿ ಅವರ ಕೃತಿ ಯಶಸ್ವಿಯಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇದೊಂದು ವಿಭಿನ್ನ ಕೃತಿಯಾಗಿ ನಿಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಪಂ ಪಿಡಿಒ, ಕವಿ ಮಲ್ಕುಂಡಿ ಮಹಾದೇವಸ್ವಾಮಿ ಅವರ “ಬಯಲು ಬಹಿರ್ದೆಸೆ- ಒಂದು ಸಾಮಾಜಿಕ ಅನಿಷ್ಠ’ ಕೃತಿಯನ್ನು ಕವಿ ಡಾ. ಸಿದ್ದಲಿಂಗಯ್ಯ ಬಿಡುಗಡೆ ಮಾಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಲೇಖಕ ಮಲ್ಕುಂಡಿ ಮಹದೇವಸ್ವಾಮಿ, ಬಳಗದ ಅಧ್ಯಕ್ಷ ಪಿ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ವೆಂಕಟರಾಜು, ಮೈಸೂರು ವಿವಿ ಪರೀûಾಂಗ ಕುಲಸಚಿವ ಪೊ›.ಜೆ.ಸೋಮಶೇಖರ್, ಮಾಜಿ ಮೇಯರ್ ಪುರುಷೋತ್ತಮ್, ಸಾಹಿತಿ ಬನ್ನೂರು ಕೆ.ರಾಜು, ಈಶ್ವರ್ ಚಕ್ಕಡಿ ಇನ್ನಿತರರು ಹಾಜರಿದ್ದರು.
ಪ್ರತಿಭೆಗೆ ಬೆಲೆಯಿಲ್ಲ: ದೇಶದಲ್ಲಿ ಜಾತಿಯದೇ ದೊಡ್ಡ ಸಂಶೋಧನೆಯಾಗಿದ್ದು, ಒಬ್ಬ ವ್ಯಕ್ತಿಯ ಜಾತಿ ಯಾವುದೆಂದು ಸಂಶೋಧನೆ ಮಾಡದಿದ್ದರೆ ನಮ್ಮ ದೇಶದ ಜಾತಿಯ ಮನಸ್ಸುಗಳಿಗೆ ಊಟ, ನಿದ್ದೆ ಸೇರುವುದಿಲ್ಲ ಹಾಗೂ ಸಮಾಧಾನ ಇರುವುದಿಲ್ಲ. ಅಥ್ಲೀಟ್ ಹಿಮದಾಸ್ ಅವರು ಚಿನ್ನದ ಪದಕ ಗೆದ್ದಾಗ ವಿದೇಶಿಗರು “ಭಾರತದಲ್ಲಿ ನವತಾರೆ ಉದಯಿಸಿತು’ ಎಂದು ಹೊಗಳಿದರೆ, ನಮ್ಮ ದೇಶದಲ್ಲಿ ಹಿಮದಾಸ್ ಜಾತಿ ಯಾವುದೆಂಬ ಸಂಶೋಧನೆ ನಡೆಯುತ್ತದೆ.
ಒಲಂಪಿಕ್ಸ್‌ನಲ್ಲಿ ಪಿ.ವಿ. ಸಿಂಧು ಪದಕ ಗೆದ್ದಾಗ 10 ನಿಮಿಷದಲ್ಲಿ 10 ಸಾವಿರ ಮಂದಿ ಸಿಂಧು ಯಾವ ಜಾತಿಯೆಂದು ಸಂಶೋಧನೆ ಮಾಡುತ್ತಾರೆ. ಇದನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಜಾತಿಗೆ ಬೆಲೆ ಇದೆ ಹೊರತು, ಪ್ರತಿಭೆ, ಪ್ರಾಮಾಣಿಕತೆಗೆ ಬೆಲೆ ಇಲ್ಲದಿರುವುದು ದುರಾದುಷ್ಟಕರ ಸಂಗತಿ ಎಂದು ಕವಿ ಡಾ.ಸಿದ್ದಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು.