Advertisement
ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ 163ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಹೆಸರಿನಲ್ಲಿ ಮಂಗಳೂರಿನ ಕೋಟಿ ಚೆನ್ನಯ ಯುವ ವೇದಿಕೆ ವತಿಯಿಂದ ಪರಿಸರವಾದಿ ಮಾಧವ ಉಳ್ಳಾಲ್ ನೇತೃತ್ವದಲ್ಲಿ ಆಕಾಶ ಭವನ ಸಮೀಪದ ಆನಂದ ನಗರದಲ್ಲಿರುವ ರುದ್ರಭೂಮಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವುದಕ್ಕೆ ತೀರ್ಮಾನಿಸಲಾಗಿದೆ .
‘ನಾರಾಯಣ ಗುರು ವನ’ದ ಜತೆಗೆ ತುಳಸಿ ವನ ನಿರ್ಮಾಣ ಮಾಡುವ ಯೋಜನೆ ಇದ್ದು, ಈ ನಿಟ್ಟಿನಲ್ಲಿ 50ಕ್ಕೂ ಹೆಚ್ಚಿನ ತುಳಸಿ ಗಿಡವನ್ನು ನೆಡಲಾಗುತ್ತದೆ. ಹಿಂದೂ ಸಂಪ್ರದಾಯದಂತೆ ಶವ ಸಂಸ್ಕಾರ ನೆರವೇರಿಸಲು ಬರುವವರಿಗಾಗಿ ತುಳಸಿ ಗಿಡ ನೆಡುವ ಯೋಚನೆಯನ್ನು ಕೋಟಿ ಚೆನ್ನಯ ಯುವ ವೇದಿಕೆ ಮಾಡುತ್ತಿದೆ.
Related Articles
ಆಕಾಶಭವನ ಸಮೀಪದ ಆನಂದನಗರದ ರುದ್ರಭೂಮಿಯಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ವನದ ಉದ್ಘಾಟನೆ ಡಿ. 3ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಸಚಿವ ಯು.ಟಿ. ಖಾದರ್, ಮೇಯರ್ ಕವಿತಾ ಸನಿಲ್ ಪಾಲ್ಗೊಳ್ಳಲಿದ್ದಾರೆ. ಶ್ಮಶಾನದ ಉದ್ಘಾಟನೆ ಡಿ. 6ರಂದು ನಡೆಯಲಿದೆ.
Advertisement
ಕೈಜೋಡಿಸಿಸಸಿ ನೆಡಲು ಹಣಕ್ಕಿಂತ ಹೆಚ್ಚು ಶ್ರಮ ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಿಸರ ಉಳಿಸಲು ಎಲ್ಲರೂ ಕೈಜೋಡಿಸಬೇಕು. ತಲಪಾಡಿಯಿಂದ ನಂತೂರು ರಸ್ತೆಯ ಬದಿಯಲ್ಲಿ ಸಾಲುಮರದ ಯೋಜನೆ ನನ್ನಲ್ಲಿತ್ತು. ಆದರೆ ಕೈತಪ್ಪಿತು. ಜಾಗದ ಹುಡುಕಾಟದಲ್ಲಿದ್ದಾಗ ರುದ್ರಭೂಮಿಯ ಖಾಲಿ ಜಾಗ ಕಣ್ಣಿಗೆ ಬಿತ್ತು. ಬಳಿಕ ಸಮಿತಿಯನ್ನು ಸಂಪರ್ಕಿಸಿ ಅನುಮತಿ ಪಡೆದೆವು.
– ಮಾಧವ ಉಳ್ಳಾಲ್, ಪರಿಸರವಾದಿ ಅಂತ್ಯಕ್ರಿಯೆಗೆ ಅಡ್ಡಿಯಿಲ್ಲ
ಶ್ಮಶಾನದಲ್ಲಿ ವನ ನಿರ್ಮಾಣ ಮಾಡುವುದರಿಂದ ಅಂತ್ಯಕ್ರಿಯೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಅಂತ್ಯಕ್ರಿಯೆಗೆ ಪ್ರತ್ಯೇಕ ಸ್ಥಳಾವಕಾಶ ಇದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಮತ್ತು ಸುತ್ತಲಿನ ಪರಿಸರವನ್ನು ಹಸಿರಾಗಿಡಲು ಗಿಡ ನೆಡುತ್ತೇವೆ.
– ಆನಂದ ಪಾಂಗಳ,
ಪರಿಶಿಷ್ಟ ಜಾತಿ ಮತ್ತು ಪಂಗಡ ಹಿತರಕ್ಷಣ ಸಮಿತಿ ಅಧ್ಯಕ್ಷ