Advertisement

ಅಂತರ್‌ ರಾಜ್ಯಗಳಿಂದ 285 ಜನರ ಆಗಮನ

10:32 AM Jun 30, 2020 | Suhan S |

ರಾಯಚೂರು: ಬೇರೆ ರಾಜ್ಯಗಳಿಂದ ಜಿಲ್ಲೆಗೆ 285 ಜನ ಆಗಮಿಸಿದ್ದು, 48 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌, 235 ಜನರಿಗೆ ಹೋಮ್‌ ಕ್ವಾರಂಟೈನ್‌ ಹಾಗೂ ಇಬ್ಬರನ್ನು ರೆಸಿಡೆನ್ಸಿಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ಸಾಂಸ್ಥಿಕ ಕ್ವಾರಂಟೈನ್‌ ಅಥವಾ ಹೋಮ್‌ ಕ್ವಾರಂಟೈನ್‌ ಗೆ ಕಳುಹಿಸಲಾಗಿದೆ.

Advertisement

ಅಂತರ ರಾಜ್ಯ ಚೆಕ್‌ಪೋಸ್ಟ್‌ ಮತ್ತು ರೈಲ್ವೆ ಸ್ಟೇಷನ್‌ ಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದು, ಹೊರ ರಾಜ್ಯದಿಂದ ಬರುವವರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಶಕ್ತಿನಗರ ಚೆಕ್‌ ಪೋಸ್ಟ್‌ ಮೂಲಕ 105, ಗಿಲ್ಲೆಸೂಗೂರು ಚೆಕ್‌ಪೋಸ್ಟ್‌ 20, ಕೊತ್ತದೊಡ್ಡಿ ಚೆಕ್‌ ಪೋಸ್ಟ್‌ 84, ಸಿಂಗನೋಡಿ ಚೆಕ್‌ಪೋಸ್ಟ್‌ 9, ಹೂವಿನ ಹೆಡಗಿ ಚೆಕ್‌ಪೋಸ್ಟ್‌ 7, ಉದ್ಯಾನ ಎಕ್ಸಪ್ರಸ್‌ ರೈಲು ಮೂಲಕ 33, ಹೈದರಾಬಾದ್‌-ತಿರುಪತಿ ರೈಲಿನಲ್ಲಿ 10, ತಿರುಪತಿ- ಹೈದರಾಬಾದ್‌ ರೈಲಿನಲ್ಲಿ 17 ಜನ ಆಗಮಿಸಿದ್ದಾರೆ. ಕ್ವಾರಂಟೈನ್‌ಗೆ ಒಳಪಟ್ಟವರ ಕೈ ಮೇಲೆ ಸೀಲ್‌ ಹಾಕಲಾಗಿದೆ.

ಸಾರ್ವಜನಿಕ ಪ್ರದೇಶದಲ್ಲಿ ಅಂಥವರು ಕಂಡುಬಂದಲ್ಲಿ ಮಾಹಿತಿ ನೀಡಲು ಕೋರಿದೆ. ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಸ್‌ಪಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next