Advertisement

ಸಿಬಿಐನಿಂದ ವಿನಯ್ ಕುಲಕರ್ಣಿ ಬಂಧನವಾಗಿರುವುದು ರಾಜಕೀಯ ಪ್ರೇರಿತ: ಸಂತೋಷ್ ಲಾಡ್

07:47 PM Nov 08, 2020 | Mithun PG |

ಧಾರವಾಡ: ಹುಬ್ಬಳ್ಳಿ ಜಿ.ಪಂ. ಸದಸ್ಯರಾಗಿದ್ದ ಯೋಗೀಶ್ ಗೌಡರ ಹತ್ಯೆಯ ಪ್ರಕರಣದಲ್ಲಿ ಸಿಬಿಐನಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನವು ಮೇಲ್ನೋಟಕ್ಕೆ ರಾಜಕೀಯ ಪ್ರೇರಿತದಂತೆ ಕಾಣುತ್ತದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.

Advertisement

ನಗರದಲ್ಲಿ ರವಿವಾರ ವಿನಯ ಕುಲಕರ್ಣಿ ಅವರ ಮನೆಗೆ ಭೇಟಿ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಷಡ್ಯಂತ್ರವಂತೂ ಇದ್ದೇ ಇದೆ. ಕಾನೂನು ಎಲ್ಲರಗಿಂತ ದೊಡ್ಡದು. ಹೀಗಾಗಿ ಕಾನೂನಿನ ಮೂಲಕವೇ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ವಿನಯ್ ಅವರೊಂದಿಗೆ ಇದೆ ಎಂದರು.

ಇದು ಕರ್ನಾಟಕ ಮಾತ್ರವಲ್ಲ. ಇಡೀ ದೇಶದಲ್ಲಿ ಇಂತಹ ಕೇಸ್‌ಗಳು ಆಗುತ್ತಿವೆ. ಯಾರನ್ನೂ ನಾನು ವೈಯಕ್ತಿಕವಾಗಿ ನಿಂದಿಸುವುದಿಲ್ಲ. ಎಲ್ಲ ಇಲಾಖೆಗಳಲ್ಲೂ ರಾಜಕೀಯ ಬಳಕೆ ಮಾಡುತ್ತಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಇಡೀ ದೇಶದಲ್ಲಿ ಸಿಬಿಐ, ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಹುಲ್ ಗಾಂಧಿ ಅವರನ್ನೂ ಸಹ ನೂಕುನುಗ್ಗಾಟ ಮಾಡಿದ್ದರು. ಅತ್ಯಾಚಾರ ಸಂತ್ರಸ್ಥೆ ಕುಟುಂಬ ಭೇಟಿಯಾಗದಂತೆ ಮಾಡಿದ್ದಾರೆ. ಎಲ್ಲವನ್ನೂ ಜನ ನೋಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ವಿನಯ್ ಕುಲಕರ್ಣಿ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ:ಜಗದೀಶ್ ಶೆಟ್ಟರ್

ಶಾಸಕರ ಪಾಸು ದುರ್ಬಳಕೆ; ಸಂತೋಷ್ ಲಾಡ್ ಕ್ಷಮೆ: ಕಲಘಟಗಿ ಮತಕ್ಷೇತ್ರದಿಂದ ಸೋತು ಮಾಜಿ ಶಾಸಕರಾದರೂ ಸಹ ಸಂತೋಷ್ ಲಾಡ್ ಅವರು ಕುಲಕರ್ಣಿ ಅವರ ಮನೆಗೆ ಆಗಮಿಸಿದ್ದ ವೇಳೆ ಇನೋವಾ ಕಾರಿಗೆ (ಕೆಎ-25 ಎಂಬಿ-2252) ಮಾತ್ರ ಕಲಘಟಗಿ ಮತಕ್ಷೇತ್ರದ ಶಾಸಕರು ಎಂಬ ಪಾಸು ಇರುವುದು ಕಂಡು ಬಂತು. ಶಾಸಕರ ಪಾಸು ದುರ್ಬಳಕೆ ಮಾಡಿರುವ ಬಗ್ಗೆ ಮಾಧ್ಯಮದವರು ಚಿತ್ರೀಕರಣಕ್ಕೆ ಮುಂದಾಗುತ್ತಿದ್ದಂತೆಯೇ ಕಾರಿನ ಚಾಲಕ ಆ ಪಾಸು ತೆಗೆದು ಹಾಕಿದರು. ಆ ಬಳಿಕ ಈ ಬಗ್ಗೆ ಕ್ಷಮೆ ಕೇಳಿದ ಲಾಡ್, ಅಚಾನಕ್ಕಾಗಿ ನಮ್ಮವರು ಕಾರಿನಲ್ಲಿ ಪಾಸು ಇಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿ ಅಲ್ಲಿಂದ ತೆರಳಿದರು.

Advertisement

ಬಿಜೆಪಿ ಪಕ್ಷದ ಕೆಲವರು, ಅಧಿಕಾರ ಶಾಶ್ವತವಾಗಿ ಇರುವುದಾಗಿ ತಿಳಿದಿದ್ದಾರೆ. ಆದರೆ ಅಧಿಕಾರ ಎಂದಿಗೂ ಶಾಶ್ವತವಲ್ಲ. ಈ ಸತ್ಯ ಬಿಜೆಪಿಯ ಕೆಲವರಿಗೆ ಇನ್ನೂ ತಿಳಿದಂತಿಲ್ಲ. ಈಗಂತೂ ಏನು ಮಾಡೋದು ನಾವೀಗ ಕೆಟ್ಟ ಕಾಲದಲ್ಲಿ ಇದ್ದೇವೆ. ಈ ಸಮಯ ಮುಂದೆ ಕಳೆದು ಹೋಗಿ ನಮಗೂ ಒಳ್ಳೆಯ ಕಾಲ ಬರುತ್ತದೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next