Advertisement

ಘಟನೆ ನಡೆದ 24 ತಾಸೊಳಗೆ 6 ಅಪಹರಣಕಾರರ ಬಂಧನ

11:28 AM Sep 09, 2017 | Team Udayavani |

ಬೆಂಗಳೂರು: ಮಲ್ಲೇಶ್ವರದ ಫ‌ುಟ್‌ಬಾಲ್‌ ಮೈದಾನದಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕನನ್ನು ಅಪಹರಿಸಿದ್ದ ಆರು ಮಂದಿಯನ್ನು ಘಟನೆ ನಡೆದ 24 ಗಂಟೆಗಳಲ್ಲೇ ಬಂಧಿಸುವಲ್ಲಿ ಮಲ್ಲೇಶ್ವರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಮಂಜುನಾಥ್‌ (35), ಮನು (40) ವಿಠಲ್‌ (24), ಶಿವಮೂರ್ತಿ (25), ಆಕಾಶ್‌ (21) ವೆಂಕಟೇಶ್‌ (50) ಬಂಧಿತರು. ಅನೇಶ್‌ (11) ರಕ್ಷಿಸಲ್ಪಟ್ಟ ಬಾಲಕ. ಆರೋಪಿಗಳು ಸೆ.7ರಂದು ಸಂಜೆ 6 ಗಂಟೆ ಸುಮಾರಿಗೆ ಬಾಲಕನನ್ನು ಅಪಹರಣ ಮಾಡಲಾಗಿತ್ತು. ಈ ಸಂಬಂಧ ಬಾಲಕನ ಪೋಷಕರು ದೂರು ನೀಡಿದ್ದು, ಕೇವಲ 24 ಗಂಟೆಗಳಲ್ಲೇ ಬಾಲಕನನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರನಲ್ಲಿ ಬಾಲಕನ ಕುಟುಂಬ ವಾಸವಾಗಿದ್ದು, ಇದೇ ಕಟ್ಟಡದ ಕೆಳ ಮಳಿಗೆಯಲ್ಲಿ ಜ್ಯೂಸ್‌ ಅಂಗಡಿ ನಡೆಸುತ್ತಿರುವ ಮಂಜುನಾಥ್‌ ತನ್ನ ಸಹಚರರೊಂದಿಗೆ ಕೃತ್ಯವೆಸಗಿದ್ದಾನೆ. ಕಳೆದ 8 ವರ್ಷದಿಂದ ಬಾಲಕ ವಾಸವಿದ್ದ ಮನೆ ಬಳಿಯೇ ಜ್ಯೂಸ್‌ ಅಂಗಡಿ ನಡೆಸುತ್ತಿದ್ದ ಮಂಜುನಾಥ್‌ ಹಣದ ಆಸೆಗಾಗಿ ತನ್ನ ಐವರು ಸಹಚರರೊಂದಿಗೆ ಸೇರಿ ಕೃತ್ಯ ಎಸಗಿದ್ದಾನೆ. ಈ ಪೈಕಿ ಕೆಲ ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿದ್ದು, ಪರಿಶೀಲನೆ ನಡೆಯುತ್ತಿದೆ.

ಪುಟ್ಬಾಲ್‌ ತರಬೇತಿ ಪಡೆಯುತ್ತಿದ್ದ ಅನೇಶ್‌, ಎಂದಿನಂತೆ ಸಂಜೆ ಫುಟ್‌ಬಾಲ್‌ ಆಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಬಾಲಕನನ್ನು ಅಪಹರಿಸಿ ನಾಗಮಂಗಲದ ಹೂಸೂರಿಗೆ ಕರೆದೊಯ್ದಿದ್ದರು. ಇಲ್ಲಿನ ಗುಡಿಸಿನಲ್ಲಿ ಬಾಲಕನನ್ನು ಬಂಧಿಸಿಟ್ಟಿದ್ದರು. ಹೀಗಾಗಿ ಆರೋಪಿಗಳ ಮೊಬೈಲ್‌ ನೆಟ್‌ವರ್ಕ್‌ ಮತ್ತು ಸಿಸಿಟಿವಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಲ್ಲೇಶ್ವರಂ ಠಾಣೆ ಪೊಲೀಸರು ತಿಳಿಸಿದ್ದಾರೆ.

1 ಕೋಟಿಗೆ ಬೇಡಿಕೆ: ಅಪಹರಣ ಮಾಡಿದ ಬಾಲಕನ ತಂದೆ ಹೊಸದಾಗಿ ಬಿಸಿನೆಸ್‌ ಆರಂಭಿಸಲು ಸಿದ್ದತೆ ನಡೆಸಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಆರೋಪಿ ಮಂಜುನಾಥ್‌, ಬಾಲಕನನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಡಲು ಸಂಚು ರೂಪಿಸಿದ್ದ. ಅದರಂತೆ ಒಂದು ವಾರಗಳ ಹಿಂದೆಯೇ ಸಂಚು ರೂಪಿಸಿ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next