Advertisement

ಸೇನೆಗೆ ಸಿಗಲಿದೆ ಮತ್ತಷ್ಟು ಶಸ್ತ್ರಾಸ್ತ್ರಗಳ ನೆರವು

07:00 AM Mar 01, 2018 | |

ನವದೆಹಲಿ: ಪಾಕಿಸ್ತಾನ ಹಾಗೂ ಚೀನಾದ ಗಡಿಭಾಗಗಳಲ್ಲಿ ಆ ದೇಶಗಳ ಸೈನಿಕರಿಂದ ಹೆಚ್ಚುತ್ತಿರುವ ಉಪಟಳವನ್ನು ಹತ್ತಿಕ್ಕಲು, ಗಡಿ ಕಾಯುವ ಯೋಧರಿಗೆ ಮತ್ತಷ್ಟು ಶಸ್ತ್ರಾಸ್ತ್ರ ಬಲ ಒದಗಿಸಲು ಭಾರತೀಯ ರಕ್ಷಣಾ ಇಲಾಖೆ ಮುಂದಾಗಿದೆ. ಇದರ ಪರಿಣಾಮವಾಗಿ, ಗಡಿ ಕಾಯುವ ಯೋಧರಿಗಾಗಿ 41,000 ಲೈಟ್‌ ಮೆಷಿನ್‌ ಗನ್‌ (ಎಲ್‌ಎಂಜಿ), 3.5 ಲಕ್ಷಗಳಷ್ಟು ಕ್ಲೋಡ್‌-ಕ್ವಾರ್ಟರ್‌ ಕಾರ್ಬೈನ್‌ಗಳನ್ನು ಖರೀದಿಸುವ 9,435 ಕೋಟಿ ಮೌಲ್ಯದ ಪ್ರಸ್ತಾವನೆಗೆ ರಕ್ಷಣಾ ಇಲಾಖೆಯು ಒಪ್ಪಿಗೆ ನೀಡಿದೆ. ಪ್ರಸ್ತಾವನೆಯಲ್ಲಿರುವ ಶಸ್ತ್ರಾಸ್ತ್ರಗಳಲ್ಲಿ ಶೇ. 75ರಷ್ಟನ್ನು ಖಾಸಗಿ ಸಂಸ್ಥೆಯೊಂದು ಪೂರೈಸಲಿದ್ದು, ಶೇ. 25ರಷ್ಟು ಶಸ್ತ್ರಾಸ್ತ್ರಗಳನ್ನು ಆರ್ಡಿನನ್ಸ್‌ ಫ್ಯಾಕ್ಟರಿ ಬೋರ್ಡ್‌ ಒದಗಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next