Advertisement

ಪ್ರತ್ಯೇಕ ರಾಜ್ಯದ ಪ್ರಸ್ತಾವ ಮೂರ್ಖತನದ ವಾದ

01:45 PM Jul 30, 2018 | Team Udayavani |

ಮೈಸೂರು: ಅಖಂಡ ಕರ್ನಾಟಕ ಏಕೀಕರಣ ಹೋರಾಟ ಗೊತ್ತಿಲ್ಲದವರು ಪ್ರತ್ಯೇಕ ರಾಜ್ಯವನ್ನು ಕೇಳುತ್ತಿದ್ದು, ಈ ಬಗ್ಗೆ ನಡೆಯುತ್ತಿರುವುದು ಫ‌ೂಲಿಷ್‌ ಆರ್ಗ್ಯೂಮೆಂಟ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. 

Advertisement

ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ-ಉತ್ತರ ಕರ್ನಾಟಕ ಎಂಬುದೇನೂ ಇಲ್ಲ, ಇರುವುದು ಅಖಂಡ ಕರ್ನಾಟಕ ಒಂದೇ ಆಗಿದೆ.

ಆದರೆ ಅಖಂಡ ಕರ್ನಾಟಕ ನಿರ್ಮಾಣ, ಏಕೀಕರಣ ಹಾಗೂ ಭಾಷಾವಾರು ಪ್ರಾಂತ್ಯ ರಚನೆಯ ಹೋರಾಟದ ಬಗ್ಗೆ ಗೊತ್ತಿಲ್ಲದವರು, ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನು ಮಾಡುವಂತೆ ಕೇಳುತ್ತಿದ್ದು, ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಕೇಳಲಾಗುತ್ತಿದೆ.

ಆದರೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕು ಮತ್ತು ಪ್ರಾದೇಶಿಕ ಅಸಮತೋಲನ ಹೋಗಬೇಕೆಂಬುದು ನಿಜ. ನಾನು ಕೂಡ ಉತ್ತರ ಕರ್ನಾಟಕದ ಬಾದಾಮಿಯಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಆದರೆ ಪ್ರತ್ಯೇಕ ರಾಜ್ಯಬೇಕೆಂದು ಕೇಳುವುದಿಲ್ಲ.

ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಕೇಳುವುದು ಹಾಗೂ ಆ ಬಗ್ಗೆ ಚರ್ಚೆಗಳು ನಡೆಯುತ್ತಿರುವುದು ಮೂರ್ಖತನದ ವಾದ ಎಂದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದೇನೆ.

Advertisement

ಜತೆಗೆ ಆರ್ಟಿಕಲ್‌ 371 ತಂದು ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಿದ್ದು, ಆ ಭಾಗದ ಜಿಲ್ಲೆಗಳಿಗೆ ಪ್ರತಿ ವರ್ಷ 1500 ಕೋಟಿ ರೂ. ವಿಶೇಷ ಅನುದಾನ ನೀಡಿದ್ದೇನೆ. ಈ ಸಂದರ್ಭದಲ್ಲಿ ಯಾವುದೇ ಚಕಾರವೆತ್ತದ ಶ್ರೀರಾಮುಲು, ಉಮೇಶ್‌ ಕತ್ತಿ ಅವರುಗಳು ಇದೀಗ ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಪ್ರತೇಕ ರಾಜ್ಯಕ್ಕಾಗಿ ಮಾತನಾಡುತ್ತಿದ್ದಾರೆ.

ಅವರು ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆಯೂ ಶೂನ್ಯವಾಗಿದೆ.

ನಂಜುಂಡಪ್ಪ ವರದಿಯಲ್ಲಿ ಉತ್ತರ ಕರ್ನಾಟಕದ ತಾಲೂಕುಗಳು ಹಿಂದುಳಿದಿವೆ ಎಂದು ಹೇಳಲಾಗಿದ್ದು, ಈ ಪ್ರಾದೇಶಿಕ ಅಸಮಾತೋಲನ ದೂರಾಗಿಸುವ ಮೂಲಕ ಹಿಂದುಳಿದ ತಾಲೂಕುಗಳ ಅಭಿವೃದ್ಧಿಯಾಗಬೇಕೆಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next