ಬೆಳಗಾವಿ: ಬ್ಯಾಡ್ಮಿಂಟನ್ ಅಸೋಸಿಯೇಷನ್ ಬೈಲಾ ಉಲ್ಲಂಘನೆಯಾಗಿದ್ದರೆ ಪರಿಶೀಲಿಸಿ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಶ್ನೋತ್ತರ ವೇಳೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರದಿಂದ ಲೀಸ್ ಮೂಲಕ ನೀಡಿರುವ ಭೂಮಿ ಹಾಗೂ ಬೈಲಾ ವಿರುದ್ಧ ಹೋಗಿರುವ ಬಗ್ಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ರಾಷ್ಟ್ರೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಕೆಲವು ನಿಯಮಗಳಿವೆ.
ಮತದಾನವನ್ನು ಕೆಲವರಿಗೆ ಮಾತ್ರ ನೀಡಿ, ಜಿಲ್ಲೆಗಳಲ್ಲಿ ಸಾವಿರಾರು ಅಜೀವ ಸದಸ್ಯರಿದ್ದರೂ ಅವರಿಗೆ ಮತದಾನ ನೀಡದೇ ಇರುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ:40 ನಗರಗಳಲ್ಲಿ ಬರಲಿದೆ ವಿಶೇಷ ಹೈಬ್ರಿಡ್ ಶಾಲೆ; ದಕ್ಷಿಣ ಏಷ್ಯಾದಲ್ಲಿಯೇ ಇಂಥ ಪ್ರಯತ್ನ ಮೊದಲು
ಶಾಸಕ ರಘುಪತಿ ಭಟ್ ಮಾತನಾಡಿ, ಸರಕಾರ ಶೀಘ್ರವಾಗಿ ಸಮಸ್ಯೆ ಸರಿಪಡಿಸಬೇಕು ಹಾಗೂ ಕೇಂದ್ರ ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಬೇಕು. ವಿವಿಧ ಮೂಲಗಳಿಂದ 2 ಕೋಟಿಯಷ್ಟು ವಾರ್ಷಿಕ ಅನುದಾನ ಬರುತ್ತದೆ. ಅದರ ಸದ್ಬಳಕೆ ಆಗಬೇಕು ಮತ್ತು ಗ್ರಾಮೀಣ ಭಾಗದಲ್ಲಿ ಇದಕ್ಕೆ ಆದ್ಯತೆ ಸಿಗಬೇಕು ಎಂದು ಆಗ್ರಹಿಸಿದರು.