Advertisement

ಲೋಕಪಾಲ ನೇಮಕ; ತೀರ್ಪು ಶೀಘ್ರ

03:45 AM Mar 29, 2017 | Team Udayavani |

ನವದೆಹಲಿ: ದೇಶದಲ್ಲಿ ಲೋಕಪಾಲರನ್ನು ನೇಮಕ ಮಾಡುವ ಕುರಿತ ಅರ್ಜಿಗಳ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ.

Advertisement

“ಎಲ್ಲರ ವಾದ-ಪ್ರತಿವಾದಗಳನ್ನು ನ್ಯಾಯಾಲಯ ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ’ ಎಂದು ನ್ಯಾ. ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಮಂಗಳವಾರ ಹೇಳಿದೆ. ವಿಚಾರಣೆ ವೇಳೆ ಲೋಕಪಾಲರ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, “ಲೋಕಪಾಲ ಕಾಯ್ದೆಯಲ್ಲಿ ಪ್ರತಿಪಕ್ಷ ನಾಯಕ ಎಂಬ ಪದದ ವ್ಯಾಖ್ಯಾನಕ್ಕೆ ಸಂಬಂಧಿಸಿದ ತಿದ್ದುಪಡಿ ವಿಚಾರ ಇನ್ನೂ ಸಂಸತ್‌ನಲ್ಲಿದೆ. ಇಂತಹ ಸಂದರ್ಭದಲ್ಲಿ ಲೋಕಪಾಲರ ನೇಮಕ ಸಾಧ್ಯವಿಲ್ಲ,’ ಎಂದರು.

ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ 2013ರ ಪ್ರಕಾರ, ಲೋಕಸಭೆಯ ಪ್ರತಿಪಕ್ಷ ನಾಯಕನೇ ಲೋಕಪಾಲ ಆಯ್ಕೆ ಸಮಿತಿಯ ಭಾಗವಾಗಿರುತ್ತಾನೆ. ಆದರೆ, ಸದ್ಯ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನೇ ಇಲ್ಲ. ಸಂಖ್ಯಾಬಲದ ಕೊರತೆಯಿಂದಾಗಿ ಕಾಂಗ್ರೆಸ್‌ಗೂ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಗಿಲ್ಲ. ಪ್ರತಿಪಕ್ಷಗಳ ಪೈಕಿ ಅತಿದೊಡ್ಡ ಪಕ್ಷಕ್ಕೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಬಹುದು ಎಂಬ ಪ್ರಸ್ತಾಪಕ್ಕೆ ಸಂಸತ್‌ನಲ್ಲಿ ಒಪ್ಪಿಗೆ ಸಿಗುವವರೆಗೂ ಲೋಕಪಾಲರ ನೇಮಕ ಸಾಧ್ಯವಿಲ್ಲ ಎಂದು ರೋಹಟಗಿ ವಾದಿಸಿದರು.

ಇದೇ ವೇಳೆ, ಎನ್‌ಜಿಒ ಕಾಮನ್‌ ಕಾಸ್‌ ಪರ ವಾದಿಸಿದ ಹಿರಿಯ ನ್ಯಾಯವಾದಿ ಶಾಂತಿ ಭೂಷಣ್‌, “ಸರ್ಕಾರವು ಉದ್ದೇ ಶಪೂರ್ವಕವಾಗಿ ಲೋಕಪಾಲರನ್ನು ನೇಮಕ ಮಾಡುತ್ತಿಲ್ಲ. ಲೋಕಪಾಲರನ್ನು ತ್ವರಿತವಾಗಿ ನೇಮಕ ಮಾಡಬೇಕೆಂದು ಸ್ವತಃ ಲೋಕಪಾಲ ಕಾಯ್ದೆಯೇ ಹೇಳುತ್ತದೆ,’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next