Advertisement
ಮನವಿಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ದುಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ನಮ್ಮ ಕುಂದಾಪ್ರ ಬಳಗ ಗಲ್ಫ್ ಕನ್ನಡ ಬಳಗ ಗಲ್ಪ್ ಸಂಘಟನೆ ಮೂಲಕ ಮನವಿ ನೀಡಿದ್ದಾರೆ. ಮಹತ್ವಾಕಾಂಕ್ಷೆಯ ಯೋಜನೆಯ ಸಾಕಾರಕ್ಕೆ ದುಬೈನಲ್ಲಿರುವ ಕುಂದಾಪುರ ಕನ್ನಡಿಗರ ಬಳಗ ಕೇಂದ್ರ ಮಟ್ಟದಲ್ಲೂ ಪ್ರಯತ್ನ ಪ್ರಾರಂಭಿಸಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ಸ್ಥಳಗಳನ್ನು ಹೊಂದಿದ ಹೆಗ್ಗಳಿಕೆ ಬೈಂದೂರಿನದ್ದಾಗಿದೆ.ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಹೊಂದಿದ ಹೆಗ್ಗಳಿಕೆ ಬೈಂದೂರಿನದ್ದಾಗಿದೆ. ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರಿಗೆ ಪ್ರತಿದಿನ ಸಾವಿರಾರು ಯಾತ್ರಿಕರು ಆಗಮಿಸುತ್ತಾರೆ. ವಿಶ್ವ ಪ್ರಸಿದ್ದ ಮುಡೇìಶ್ವರ ಬೈಂದೂರಿನಿಂದ ಕೆಲವೇ ಕಿ.ಮೀ. ಅಂತರದಲ್ಲಿದೇ ದುಬೈ ಸೇರಿದಂತೆ ವಿದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವರು ಭಟ್ಕಳದವರಾಗಿದ್ದಾರೆ. ಗೋವಾ ಹಾಗೂ ಮಂಗಳೂರು ಹೊರತುಪಡಿಸಿದರೆ ಬೇರೆ ವಿಮಾನ ನಿಲ್ದಾಣಗಳಿಲ್ಲದ ಪರಿಣಾಮ ಕಾರವಾರದಿಂದ ಉಡುಪಿಯ ವರೆಗಿನ ಜನರು ಮಂಗಳೂರು ವಿಮಾನ ನಿಲ್ದಾಣವನ್ನು ಅವಲಂಬಿಸಬೇಕಾಗಿದೆ. ಹೀಗಾಗಿ 2004ರಲ್ಲಿ ಕೊಲ್ಲೂರು ದೇವಸ್ಥಾನ ಟ್ರಸ್ಟಿ ಹಾಗೂ ಮುಡೇìಶ್ವರದ ಸಂಸ್ಥಾಪಕ ಆರ್. ಎನ್. ಶೆಟ್ಟಿ ಸಹಯೋಗದಲ್ಲಿ ಬೈಂದೂರಿನ ಒತ್ತಿನೆಣೆಯಲ್ಲಿ ಏರ್‌ಸ್ಕಿÅಪ್ಟ್ ಪ್ರಾರಂಭಿಸುವ ಪ್ರಸ್ತಾವನೆಗೆ ಚಾಲನೆಗೆ ನೀಡಲಾಗಿತ್ತು. ಈ ಕುರಿತು ಸರ್ವೆ ಕಾರ್ಯ ಸೇರಿದಂತೆ ಬಹುತೇಕ ಪ್ರಾಥಮಿಕ ಕಾರ್ಯಗಳು ಪೂರ್ಣಗೊಂಡಿದ್ದವು. ಬೈಂದೂರು ತಾಲೂಕು ರಚನೆ ಮತ್ತು ಅಭಿವೃದ್ದಿ ಸಮಿತಿಯ ಅಧ್ಯಕ್ಷ ನಿವೃತ್ತ ಅರಣ್ಯಾಧಿಕಾರಿ ಬಿ. ಜಗನ್ನಾಥ ಶೆಟ್ಟಿ ನೇತೃತ್ವದಲ್ಲಿ ಸರಕಾರಕ್ಕೆ ಪ್ರಸ್ತಾವನೆ ನೀಡಲಾಗಿತ್ತು. ಆದರೆ ಒತ್ತಿನೆಣೆಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಅವಶ್ಯವಿರುವ ಜಾಗ ಅರಣ್ಯ ಇಲಾಖೆಗೆ ಸಂಬಂಧಿಸುವುದರಿಂದ ಈ ಕುರಿತು ಕೇಂದ್ರ ಸರಕಾರದ ಮಟ್ಟದಲ್ಲಿ ಅನುಮತಿ ಪಡೆಯಬೇಕಾಗಿದೆ. ಸರಕಾರದ ಅನುದಾನದ ಕೊರತೆ ಹಾಗೂ ಅರಣ್ಯ ಇಲಾಖೆಯ ಕಠಿನ ಕಾನೂನುಗಳ ಕಾರಣ ಪ್ರಸ್ತಾವನೆ ಮುಂದುವರಿದಿರಲಿಲ್ಲ.
Related Articles
ಕೇವಲ ಒತ್ತಿನೆಣೆ ಮಾತ್ರವಲ್ಲದೆ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮದ್ಯಭಾಗದಲ್ಲಿ ವ್ಯಾಪಾರ ವೃದ್ದಿ ಹಾಗೂ ಪ್ರವಾಸೋಧ್ಯಮ ಅಭಿವೃದ್ದಿಯ ದೃಷ್ಟಿಯಿಂದ ಕಿರು ವಿಮಾನ ನಿಲ್ದಾಣ ಅತ್ಯವಶ್ಯಕವಾಗಿದೆ. ಈಗಾಗಲೆ ಪ್ರಧಾನ ಮಂತ್ರಿಗಳು ಸಣ್ಣ ವಿಮಾನ ನಿಲ್ದಾಣದ ಸ್ಥಾಪನೆಯ ಬಗ್ಗೆ ವಿಶೇಷ ಒತ್ತು ನೀಡಿರುವುದಲ್ಲದೆ ರಾಜ್ಯ ಪ್ರವಾಸೋಧ್ಯಮ ಸಚಿವರು ಪಡುಬಿದ್ರಿ ಬಳಿ ವಿಮಾನ ನಿಲ್ದಾಣ ಸ್ಥಾಪಿಸುವ ಹೇಳಿಕೆ ನೀಡಿದ್ದರು.
Advertisement
ಆದರೆ ಮಂಗಳೂರಿನ ಸನಿಹದಲ್ಲಿರುವ ಪಡುಬಿದ್ರಿ ಬದಲು ಬೈಂದೂರಿನಲ್ಲಿ ಪ್ರಾರಂಭಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ.ಮಾತ್ರವಲ್ಲದೇ ಕುಂದಾಪುರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿರುವವರು ಅಧಿಕ ಸಂಖ್ಯೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಬಳಸುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಹೀಗಾಗಿ ಸರಕಾರ ಈ ಬಗ್ಗೆ ಆಸಕ್ತಿ ವಹಿಸಬೇಕಾಗಿದೆ.
ಬೈಂದೂರಿನಲ್ಲಿ ವಿಮಾನ ನಿಲ್ದಾಣವಾದರೆ ಪ್ರವಾಸೋದ್ಯಮ ಹಾಗೂ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸುವವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈಗಾಗಲೆ ಮುಖ್ಯಮಂತ್ರಿಗಳ ಗಮನಕ್ಕೆ ಪ್ರಸ್ತಾಪ ನೀಡಲಾಗಿದೆ. ನಮ್ಮ ಕುಂದಾಪ್ರ ಕನ್ನಡ ಬಳಗ ದುಬೈಯವರು ವಿಶೇಷ ಬೇಡಿಕೆ ಸಲ್ಲಿಸಿದ್ದಾರೆ. ಕೇಂದ್ರಮಟ್ಟದಲ್ಲಿ ಪ್ರಯತ್ನಿಸುವ ಮೂಲಕ ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು.– ಕೆ.ಗೋಪಾಲ ಪೂಜಾರಿ, ಶಾಸಕ ಅಂಕೋಲಾದಿಂದ ಕುಂದಾಪುರದ ವರೆಗೆ ಕಿರು ವಿಮಾನ ನಿಲ್ದಾಣ ಸ್ಥಾಪನೆಗೆಹಲವು ವಿಪುಲ ಅವಕಾಶಗಳಿವೆ. ಈ ಭಾಗದ ಸಾವಿರಾರು ಜನ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪ್ರಸ್ತುತ ಗೋವಾ ಹಾಗೂ ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶ ಪ್ರಯಾಣ ಬೆಳೆಸಬೇಕಾಗಿದೆ. ಈಗಾಗಲೆ ಬೈಂದೂರು ಒತ್ತಿನೆಣೆಯಲ್ಲಿ ಏರ್‌ಸ್ವಿ$#ಪ್‌ಪ್ರಸ್ತಾವನೆಯಾಗಿದೆ.ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ವಿಮಾನನಿಲ್ದಾಣ ಅತ್ಯಾವಶ್ಯಕವಾಗಿದೆ.
– ಸಾಧನ್ ದಾಸ್, ನಮ್ಮ ಕುಂದಾಪ್ರ ಕನ್ನಡ ಬಳಗ ದುಬೈಯ ಅಧ್ಯಕ್ಷ