ಮಹಾನಗರ: ರಾಜ್ಯವನ್ನು ದಕ್ಷ, ಜನಪರ ಆಡಳಿತದ ಮೂಲಕ ಅಭಿವೃದ್ಧಿಪಥದಲ್ಲಿ ಮುನ್ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರುವ ಗುರಿಯೊಂದಿಗೆ ಬ್ಲಾಕ್ ಮಟ್ಟದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಸಂಘಟಿತರಾಗಿ ಕಾರ್ಯೋನ್ಮುಖರಾಗಬೇಕು ಎಂದು ಪಕ್ಷದ ದಕ್ಷಿಣ ಬ್ಲಾಕ್ ನೂತನ ಅಧ್ಯಕ್ಷ ಅಬ್ದುಲ್ ಸಲೀಂ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಜರಗಿದ ಪದಗ್ರಹಣ ಸಮಾರಂಭದಲ್ಲಿ ಬ್ಲಾಕ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಈ ಹಿಂದೆ 9 ವರ್ಷಗಳ ಕಾಲ ದಕ್ಷಿಣ ಬ್ಲಾಕ್‌ನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಈಗ ಪಕ್ಷದ ನಾಯಕರು ಮತ್ತೂಮ್ಮೆ ನನಗೆ ಬ್ಲಾಕ್ ಅಧ್ಯಕ್ಷರ ಹೊಣೆಗಾರಿಕೆಯನ್ನು ನೀಡಿದ್ದಾರೆ. ಎಲ್ಲರ ಸಹಕಾರದಿಂದ ಇದನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸ ನನಗಿದೆ ಎಂದರು.
ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು ವಾರ್ಡ್, ಬೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಸಂಘಟಿತರಾಗಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ಈಗಿಂದಲೇ ತೊಡಗ ಬೇಕು ಎಂದವರು ಹೇಳಿದರು.
ಶಾಸಕ ಜೆ.ಆರ್. ಲೋಬೋ ಅವರು ಪಕ್ಷದ ಧ್ವಜ ಹಾಗೂ ನೇಮಕ ಪತ್ರವನ್ನು ಸಲೀಂ ಅವರಿಗೆ ಹಸ್ತಾಂತರಿಸಿ ಪದಗ್ರಹಣ ನೆರವೇರಿಸಿ ಶುಭ ಕೋರಿದರು.
ಎಐಸಿಸಿ ಸದಸ್ಯ ಪಿ.ವಿ. ಮೋಹನ್, ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ರಾಜ್ಯ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಪ್ಪಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ದ.ಬ್ಲಾಕ್ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ರೈ, ಮುಖಂಡರಾದ ಟಿ.ಕೆ. ಸುಧೀರ್, ಸುರೇಶ್ ಶೆಟ್ಟಿ, ಪ್ರಭಾಕರ ಶ್ರೀಯಾನ್, ಸುಭೋದ್ ಆಳ್ವ, ನಮಿತ್ ಡಿ. ರಾವ್, ಎ.ಸಿ. ವಿನಯ್ ರಾಜ್, ಜೇಸಿಂತಾ ಅಲ್ಫೆ†ಡ್, ರಮಾನಂದ ಪೂಜಾರಿ, ಸುಹೈಲ್ ಕಂದಕ್, ಮೆರಿಲ್ ರೇಗೋ, ವಿಜಯ ಲಕ್ಷ್ಮೀ, ನೀರಜ್ ಪಾಲ್, ಜನಾರ್ದನ್, ಭಾರತಿ ಬಿ.ಎಂ., ನಜೀರ್ ಬಜಾಲ್, ಉಮೇಶ್ ದೇವಾಡಿಗ, ಶಶಿಕಲಾ, ಕಾಂಗ್ರೆಸ್ ಸೇವಾದಳದ ಸಂಘಟಕ ಅಶ್ರಫ್, ಹುಸೈನ್, ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಅಬ್ದುಲ್ ಮತ್ತಿತರರು ಉಪಸ್ಥಿತರಿದ್ದರು.
ಬ್ಲಾಕ್ ಉಪಾಧ್ಯಕ್ಷ ಸದಾಶಿವ ಅಮೀನ್ ಸ್ವಾಗತಿಸಿದರು. ದುರ್ಗಾ ಪ್ರಸಾದ್ ನಿರೂಪಿಸಿದರು.