Advertisement

ಎಸಿಬಿ ಬಲೆಗೆ ಬಿದ್ದ ಕೃಷಿ ಇಲಾಖೆ ಅಧಿಕಾರಿ

11:07 PM Sep 17, 2019 | Team Udayavani |

ಬ್ಯಾಡಗಿ: ಕೃಷಿ ಇಲಾಖೆ ಅ ಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಟ್ಟಣದ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್‌.ಜಿ. ಅಮೃತೇಶ್ವರ, ಸಂಗೂರಿನ ಅಗ್ರೋ ಕೇಂದ್ರದ ಮಂಜುನಾಥ ಮಣೆಗಾರ ಅವರಿಗೆ ವಂತಿಗೆ ನೀಡಬೇಕಿದ್ದ 1.96 ಲಕ್ಷ ರೂ. ಚೆಕ್‌ಗಾಗಿ ಕಳೆದೊಂದು ತಿಂಗಳಿನಿಂದ ಅಲೆದಾಡಿಸುತ್ತಿದ್ದರು.

Advertisement

ಅಲ್ಲದೇ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಂಜುನಾಥ ಜಿಲ್ಲಾ ಎಸಿಬಿಗೆ ದೂರು ಸಲ್ಲಿಸಿದ್ದರು. ಮಂಗಳವಾರ ಮಂಜುನಾಥ ಕೃಷಿ ಅಧಿ ಕಾರಿಗೆ 10 ಸಾವಿರ ರೂ. ಲಂಚ ನೀಡುತ್ತಿದ್ದಾಗ ದಾಳಿ ನಡೆಸಿದ ಡಿವೈಎಸ್‌ಪಿ ಪ್ರಹ್ಲಾದ ನೇತೃತ್ವದ ಎಸಿಬಿ ತಂಡ ಅಧಿಕಾರಿಯನ್ನು ಹಿಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next