ಹೊನ್ನಾವರ: ದೇಶದ ಪ್ರತಿಯೊಂದು ಕ್ಷೇತ್ರವನ್ನು ಕಾರ್ಪೊರೇಟ್ ಶ್ರೀಮಂತರಿಗೆ ಧಾರೆಯೆರೆಯುವ ಇರಾದೆ ಹೊತ್ತಿರುವ ಕೇಂದ್ರ ಸರ್ಕಾರ ಈಗ ಕೃಷಿ ವಲಯವನ್ನು ಅವರಿಗೆ ವರ್ಗಾಯಿಸಲು ಮುಂದಾಗಿದೆ ಎಂದು ಮೇಧಾ ಪಾಟ್ಕರ್ ಆರೋಪಿಸಿದರು.
ಸಹಯಾನ ಕೆರೆಕೋಣ, ಸಮುದಾಯ ಕರ್ನಾಟಕ ಮತ್ತು ಸಮಾನ ಮನಸ್ಕ ಸಾಂಸ್ಕೃತಿಕ ಸಂಘಟನೆಗಳು ಸೇರಿ ನಡೆಸಿದ ರೈತರ ಜೊತೆಗೆ ನಾವು-ನೀವು ಸಾಂಸೃRತಿಕ ಸ್ಪಂದನೆ ಜಾಲಗೋಷ್ಠಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಅದು ಜಾರಿಗೆ ತಂದಿರುವ ಕೃಷಿ ಮಸೂದೆಗಳು ರೈತರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳುವುದಲ್ಲದೇ ಮುಂದಿನ ಇಪ್ಪತ್ತು ವರ್ಷಗಳವರೆಗೆ ನ್ಯಾಯ ಬೇಡುವ ಹಕ್ಕು ನಿರಾಕರಿಸುತ್ತದೆ. ಜತೆಗೆ ಇದು ಸಂಪೂರ್ಣ ಅಸಾಂವಿಧಾನಿಕ ನೀತಿಯಾಗಿದ್ದು ರಾಜ್ಯಗಳ ಹಕ್ಕು ಕಸಿದುಕೊಂಡಂತಾಗಿದೆ. ಈ ಸರ್ಕಾರಕ್ಕೆಪ್ರಜಾಪ್ರಭುತ್ವ ಕುರಿತು, ಸಂವಿಧಾನ ಕುರಿತು ಕಿಂಚಿತ್ತೂಗೌರವವಿಲ್ಲ. ಪ್ರಸ್ತುತ ಮಸೂದೆಯಿಂದ ರೈತರು ಮಾತ್ರವಲ್ಲಕೃಷಿ ಕೂಲಿ ಅವಲಂಬಿಸಿರುವ ಮಹಿಳೆಯರು, ಆದಿವಾಸಿಗಳು,ತರಕಾರಿ ಬೆಳೆಗಾರರು ಮೊದಲಾದವರೆಲ್ಲ ಸಿಡಿದೆದ್ದಿದ್ದಾರೆ.ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳ ಜತೆ ಬಿಜೆಪಿ ಸರ್ಕಾರವಿರುವ ಕರ್ನಾಟಕದಲ್ಲೂ ಕೂಡ ಬಂದ್ ಯಶಸ್ವಿಯಾಗಿದೆ. ರೈತರ ಕೋಪ ಈ ಸರ್ಕಾರವನ್ನು ಕೆಳಗಿಳಿಸಬಲ್ಲದು. ರೈತ ಚಳವಳಿಗೆ ಪ್ರಜ್ಞಾವಂತ ನಾಗರಿಕರು ಬೆಂಬಲಿಸಬೇಕು. ಸಾಹಿತಿಗಳು ಮೇಧಾವಿಗಳು ಮೌನ ಮುರಿದು ಧ್ವನಿ ಎತ್ತಬೇಕಾದ ಕಾಲ ಇದು ಎಂದು ಮೇಧಾ ಪಾಟ್ಕರ್ ಕರೆ ನೀಡಿದರು.
ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಹಿಟ್ಲರ್ ಸತ್ತಿದ್ದು ಅನ್ನೋರು ಯಾರು? ಆತನ ಭೌತಿಕ ದೇಹ ಮಾತ್ರ ಸಮಾಧಿ ಆಗಿದೆ. ಆರ್ಯ ಜನಾಂಗದ ಮೇಲ್ಮೆಯನ್ನುಮತ್ತೆ ಸ್ಥಾಪಿಸುವ ಆತನ ಧೋರಣೆ ದಫನ್ ಆಗಿಲ್ಲ. ಅದು ಗಾಳಿಯಲ್ಲಿ ನೀರಿನಲ್ಲಿ ಸೇರಿ ದೇಶದೇಶಗಳನ್ನು ಹರಡಿದೆ. ಪ್ರಚಂಡ ನಾಯಕರ ಮಿದುಳನ್ನು, ಒಡಲನ್ನು ಸೇರಿ ಹೋಗಿದೆ ಎಂದು ಹೇಳಿದರು. ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ, ಎಂ.ಡಿ. ಪಲ್ಲವಿ, ಶಿಲ್ಪಾ ಮೂಡಬಿ ರೈತ ಸ್ಪಂದನದ ಹಾಡುಗಳನ್ನು ಪ್ರಸ್ತುತಪಡಿಸಿದರು.
ರೈತ ಹೋರಾಟಕ್ಕೆ ಕಾವ್ಯಸ್ಪಂದನೆಯಲ್ಲಿ ಶಾಂತಾರಾಮ ನಾಯಕ ಹಿಚ್ಕಡ, ರಂಜಾನ್ ದರ್ಗಾ, ಕೆ.ಷರಿಫಾ, ಆರ್.ಜಿ. ಹಳ್ಳಿ, ನಾಗರಾಜ್, ಎಚ್.ಆರ್. ಸುಜಾತಾ, ವಿಜಯಕಾಂತ ಪಾಟೀಲ, ಅಲ್ಲಾಗಿರಿರಾಜ್, ಚಂ.ಸು. ಪಾಟೀಲ, ಪೀರ್ ಬಾಷ, ಮಮತಾ ಸಾಗರ, ಸುಬ್ರಾಯ ಮತ್ತಿಹಳ್ಳಿ, ಗಣೇಶ ಹೊಸ್ಮನೆ, ದೀಪದಮಲ್ಲಿ, ಕೊಟ್ರೇಶ್ ಕೊಟ್ಟೂರು, ಕೆ.ನೀಲಾ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದೇವೇಂದ್ರ ಗೌಡ ಸ್ವಾಗತಿಸಿದರು. ಯಮುನಾ ಗಾಂವ್ಕರ್ ನಿರ್ವಹಿಸಿದರು.
ನ್ಯಾ| ಎಚ್.ಎನ್. ನಾಗಮೋಹನ ದಾಸ್, ಅರುಂಧತಿ ನಾಗ್, ಡಾ| ಎಂ.ಜಿ. ಹೆಗಡೆ, ಕೆ.ಎಸ್. ವಿಮಲಾ, ವಿಶುಕುಮಾರ್, ಯು. ಬಸವರಾಜ್, ಎನ್. ಕೆ. ವಸಂತರಾಜ್, ಎಸ್. ವರಲಕ್ಷ್ಮಿ, ಡಾ| ಪ್ರಕಾಶ, ಟಿ. ಯಶವಂತ, ಶ್ರೀಧರ ನಾಯಕ, ಕಿರಣ ಭಟ್, ಸಿ.ಆರ್. ಶಾನಭಾಗ್, ವಿಠuಲ ಭಂಡಾರಿ, ಎಸ್.ವೈ. ಗುರುಶಾಂತ್, ಕೃಷ್ಣ ನಾಯಕ ಹಿಚ್ಕಡ, ಬಿ. ಶ್ರೀಪಾದ ಭಟ್ ಮೊದಲಾದವರು ಭಾಗವಹಿಸಿದ್ದರು.