Advertisement

6 ವಿಕೆಟ್‌ಗಳಿಂದ ಗೆದ್ದ ದ.ಆಫ್ರಿಕಾ

07:30 AM Mar 13, 2018 | |

ಪೋರ್ಟ್‌ ಎಲಿಜಬೆತ್‌: ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯವನ್ನು 6 ವಿಕೆಟ್‌ಗಳಿಂದ ಕೆಡವಿದ ದಕ್ಷಿಣ ಆಫ್ರಿಕಾ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಒಟ್ಟು 11 ವಿಕೆಟ್‌ ಉಡಾಯಿಸಿದ ರಬಾಡ ಗೆಲುವಿನ ಹೀರೋ ಎನಿಸಿದರು. ಆದರೆ ಅಶಿಸ್ತಿನ ಕಾರಣಕ್ಕಾಗಿ ಅವರು 2 ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದಾರೆ.

Advertisement

101 ರನ್ನುಗಳ ಸುಲಭ ಗುರಿ ಪಡೆದ ದಕ್ಷಿಣ ಆಫ್ರಿಕಾ, 4 ವಿಕೆಟ್‌ ನಷ್ಟಕ್ಕೆ 102 ರನ್‌ ಮಾಡಿ ಗೆಲುವು ಸಾಧಿಸಿತು. ಡರ್ಬನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಆಸ್ಟ್ರೇಲಿಯ 118 ರನ್ನುಗಳಿಂದ ಗೆದ್ದಿತ್ತು.  

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-243 ಮತ್ತು 239. ದಕ್ಷಿಣ ಆಫ್ರಿಕಾ-382 ಮತ್ತು 4 ವಿಕೆಟಿಗೆ 102. ಪಂದ್ಯಶ್ರೇಷ್ಠ: ಕಾಗಿಸೊ ರಬಾಡ.

Advertisement

Udayavani is now on Telegram. Click here to join our channel and stay updated with the latest news.

Next