Advertisement

ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಹೊಣೆ ಅದಾನಿ ಗ್ರೂಪ್‌ಗೆ

12:30 AM Feb 26, 2019 | Team Udayavani |

ಹೊಸದಿಲ್ಲಿ: ಕರ್ನಾಟಕದ ಮಂಗಳೂರು ಸಹಿತ ದೇಶದ 5 ವಿಮಾನ ನಿಲ್ದಾಣಗಳ ನಿರ್ವಹಣೆಯ ಹೊಣೆಯನ್ನು ಅದಾನಿ ಗ್ರೂಪ್‌ ವಹಿಸಿ ಕೊಂಡಿದೆ. ಒಟ್ಟು 6 ಏರ್‌ಪೋರ್ಟ್‌ಗಳ ಪೈಕಿ ಮಂಗಳೂರು, ತಿರುವನಂತಪುರ, ಅಹಮ ದಾಬಾದ್‌, ಲಕ್ನೋ, ಜೈಪುರ ಏರ್‌ಪೋರ್ಟ್‌ಗಳಿಗೆ ಅದಾನಿ ಗ್ರೂಪ್‌ ಹೆಚ್ಚಿನ ಬಿಡ್ಡರ್‌ ಆಗಿ ಹೊರ ಹೊಮ್ಮಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ. ಸಂಬಂಧಿತ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಈ ವಿಮಾನ ನಿಲ್ದಾಣಗಳನ್ನು ಸಂಸ್ಥೆಗೆ ಹಸ್ತಾಂತರಿಸ ಲಾಗುತ್ತದೆ. 50 ವರ್ಷ ಈ ವಿಮಾನ ನಿಲ್ದಾಣಗಳನ್ನು ಅದಾನಿ ಸಂಸ್ಥೆ ನಿರ್ವಹಿಸಲಿದೆ. 

Advertisement

ಕಳೆದ ನವೆಂಬರ್‌ನಲ್ಲಿ ಎಎಐ ನಿಯಂತ್ರಣದಲ್ಲಿರುವ ವಿಮಾನ ನಿಲ್ದಾಣ ಗಳನ್ನು ಖಾಸಗಿ – ಸರಕಾರಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಘೋಷಿಸಲಾಗಿತ್ತು. ಮಂಗಳೂರು, ತಿರುವ ನಂತಪುರಕ್ಕೆ ತಲಾ 3, ಅಹಮದಾಬಾದ್‌, ಜೈಪುರಕ್ಕೆ ತಲಾ 7, ಲಕ್ನೋ, ಗುವಾಹಟಿ ಏರ್‌ಪೋರ್ಟ್‌ಗಳಿಗೆ ತಲಾ 6 ಬಿಡ್‌ಗಳು ಸಲ್ಲಿಕೆಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next