Advertisement
ಹಲವು ಅಪಘಾತ2017-18ನೇ ಸಾಲಿನ ಒಂದು ವರ್ಷ ದಲ್ಲಿ 8 ಅಪಘಾತ ನಡೆದಿದ್ದು 4ಮಂದಿ ಸಾವನ್ನಪ್ಪಿ, 4 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಸರಣಿ ಇನ್ನೂ ಕೂಡ ಮುಂದುವರಿದಿದ್ದು ಜೂ.10ರಂದು ನಡೆದ ಅಪಘಾತದಲ್ಲಿ ಬೈಕ್ ಸಹಸವಾರ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇವೆಲ್ಲ ಪ್ರಕರಣ ದಾಖಲಾದ ಅಪಘಾತಗಳಾದರೆ ಸಣ್ಣ- ಪುಟ್ಟ ಗಾಯಗಳಾಗಿ ರಾಜಿಯಲ್ಲಿ ಇತ್ಯರ್ಥ ಗೊಂಡ ಘಟನೆಗಳು ಸಾಕಷ್ಟಿದೆ.
ಪಾದಚಾರಿಗಳು ಎಲ್ಲೆಂದರಲ್ಲಿ ರಸ್ತೆ ದಾಟುವುದನ್ನು ತಡೆಗಟ್ಟು ಸಲುವಾಗಿ ಇಲ್ಲಿ ತಡೆ ಬೇಲಿಗಳನ್ನು ಅಳವಡಿಸಲಾಗಿದೆ ಹಾಗೂ ಇನ್ನೂ ಹಲವು ಕಡೆಗಳಲ್ಲಿ ತಡೆ ಬೇಲಿ ತೆಗೆದು ರಸ್ತೆ ದಾಟಲು ಅನುಕೂಲ ಮಾಡಿಕೊಡಲಾಗಿದೆ. ಇಲ್ಲಿ ಪ್ಲೈಓವರ್‌ನ ಅಂತ್ಯಗೊಳ್ಳುವುದು ಹಾಗೂ ನೇರ ರಸ್ತೆ ಇರುವುದರಿಂದ ವಾಹನಗಳು ಸಾಕಷ್ಟು ವೇಗವಾಗಿ ಬದು ರಸ್ತೆ ದಾಟುವವರಿಗೆ ಹಲವು ಅಪಘಾತಗಳು ನಡೆಯುತ್ತಿದೆ. ತಡೆಬೇಲಿ ಕೂಡ ಅವೈಜ್ಞಾನಿಕವಾಗಿದೆ. ಅಪಘಾತ ತಡೆಗೆ ಕ್ರಮ ಅಗತ್ಯ
ಮೇಲಿಂದ ಮೇಲೆ ನಡೆಯುತ್ತಿರುವ ಅಪಘಾತಗಳನ್ನು ತಡೆಯಲು ಎಚ್ಚರಿಕೆ ಫಲಕ, ತಡೆಬೇಲಿ ನ್ಯೂನ್ಯತೆ ಸರಿಪಡಿಸುವುದು ಹಾಗೂ ಸೂಕ್ತ ಎಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.