Advertisement
ಎಷ್ಟು ಸಜ್ಜನನಾಗಿದ್ದರೂ ಸಿಟ್ಟು ಆವರಿಸಿಕೊಂಡಿರುವಾತನನ್ನು ಆತ ಮಹಾ ಕೋಪಿಷ್ಟ ಎಂಬುದಾಗಿ ಜನ ಬೆಟ್ಟು ಮಾಡಿ ತೋರಿಸುವುದಿದೆ. ಈ ಕೆಟ್ಟ ಹೆಸರಿನಿಂದ ಹೊರಗುಳಿಯಬೇಕಾದರೆ ಒಳಸೇರಿರುವ ಕ್ರೋಧವನ್ನು ತೊರೆಯಬೇಕಾಗುತ್ತದೆ. ಕಾಶೀ ಕ್ಷೇತ್ರಕ್ಕೆ ಯಾತ್ರೆಗೈದಿದ್ದ ಒಬ್ಟಾತ “ಜೀವನದಲ್ಲಿ ಇನ್ನು ಮುಂದೆ ಕೋಪಿಸಲಾರೆ’ ಎಂದುಕೊಂಡು ತನ್ನ ಕೋಪವನ್ನೆಲ್ಲ ಅಲ್ಲೇ ಬಿಟ್ಟು ಬಂದನಂತೆ. ಇತ್ತ ಊರ ವರೆಲ್ಲ ಈ ಕುರಿತು ಪ್ರಶ್ನಿಸಿದಾಗ, ಆತ ಒಂದೆರಡು ಬಾರಿ ಸಾವಧಾನದಿಂದ ಉತ್ತರಿಸಿದ. ಆದರೆ ಕುತೂಹಲದಿಂದ ಮತ್ತೂ ಕೆಣಕಿದಾಗ, ಸಹನೆಯನ್ನು ಕಳೆದುಕೊಂಡ ಆತ “ಇನ್ನು ಆ ಸುದ್ದಿ ಎತ್ತಿದರೆ ನಿಮ್ಮನ್ನೆಲ್ಲ ಬಡಿದೋಡಿಸುವೆ’ ಎಂದು ಸಿಡಿಮಿಡಿಗೊಂಡನಂತೆ. ಹಾಗಾಗಿ ಕೋಪವನ್ನು ತ್ಯಜಿಸುವುದು ಅಷ್ಟು ಸುಲಭದ ವಿಚಾರವೂ ಅಲ್ಲ. ಏಕೆಂದರೆ ಬುದ್ಧಿಯು ನಮ್ಮ ಮನಸ್ಸನ್ನು ಕೆರಳಿಸಲು ಸದಾ ಹವಣಿಸುತ್ತಿರುತ್ತದೆ. ಆದರೆ ಇಂದ್ರಿಯಗಳ ಹಿಡಿತವನ್ನು ಸಾಧಿಸಿ ಕೊಂಡಾಗ ಅದೇ ಮನವು ಅರಳುತ್ತದೆ. ಆಗ ಸಹಜವಾಗಿಯೇ ಮೈಗೂಡಿಕೊಳ್ಳುವ ಶಾಂತ ಚಿತ್ತದಿಂದಾಗಿ, ಅಲ್ಲಿದ್ದ ಸಿಟ್ಟು ಶಮನಗೊಳ್ಳಬಹುದಾಗಿದೆ.
ಒಬ್ಟಾತ ದೊರೆ ತನ್ನ ಅರಮನೆಗೆ ಬಂದಾಗ ಪರಪುರುಷನ ಜತೆ ತನ್ನ ರಾಣಿಯು ಮಂಚದಲ್ಲಿರುವುದಾಗಿ ಗ್ರಹಿಸಿ ಕೊಂಡನಂತೆ. ಆ ದೃಶ್ಯವನ್ನು ಕಂಡ ತತ್‌ಕ್ಷಣ ಸಹಜವಾಗಿ ಕೆಂಡಾ ಮಂಡಲಗೊಂಡ ಆತನು ಖರವಾಳವನ್ನು ಕೈಗೆತ್ತಿಕೊಂಡನು. ಅದೇ ವೇಳೆ ತಾನೇ ಗೋಡೆಯಲ್ಲಿ ನೇತುಹಾಕಿದ್ದ “ಕಣ್ಣಾರೆ ಕಂಡರೂ…’ ಎಂಬ ನೀತಿವಾಕ್ಯದ ಫಲಕ ವೊಂದು ದೊಪ್ಪನೆ ಕೆಳಗುರುಳಿತು. ಇತ್ತ ಆತನ ಕೈಯಲ್ಲಿದ್ದ ಕತ್ತಿಯೂ ಜಾರಿತು. ಕೂಡಲೇ ಮಂಚದಿಂದೆದ್ದ ಮನೆಕೆಲಸದಾಕೆ ಭಯದಿಂದ ತತ್ತರಿಸಿ, ರಾಣಿಯಲ್ಲಿ “ಅಮ್ಮಾ ನಿತ್ಯ ಈ ಮಂಚವನ್ನು ಶುಚಿಗೊಳಿಸುತ್ತಿದ್ದ ನನಗೆೆ ಅದರಲ್ಲೊಮ್ಮೆ ಒರಗಬೇಕೆಂಬ ಆಸೆ ಇತ್ತು. ಅದರಂತೆ, ನಾನಿಂದು ಏಕಾಂತದಲ್ಲಿ ಮುಸುಕೆಳೆದುಕೊಂಡಾಗ, ಖಾವಂದರೇ ಬಂದು ವಿರಮಿಸಿರಬೇಕೆಂದು ಗ್ರಹಿಸಿ ಕೊಂಡ ತಾವು ಮಂಚವೇರಿದಿರಿ’. ಎಂದು ಅರಸಿಯ ಕಾಲು ಹಿಡಿದು ತನ್ನ ತಪ್ಪೊಪ್ಪಿಕೊಂಡಳಂತೆ. ಇಲ್ಲಿ ಅಚಾ ತುರ್ಯದಿಂದ ಅರಮನೆಯು ಅರೆಘ ಳಿಗೆಯಲ್ಲಿ ನರಕ ಸದೃಶವಾಗುವ ಸಂಭಾ ವ್ಯತೆ ಇತ್ತು. ಆದರೆ ಅಲ್ಲಿದ್ದ ನೀತಿವಾ ಕ್ಯದ ಸಂದೇಶವನ್ನು ದೊರೆಯು ಅರಿತು ಕೊಂಡ ಫಲವಾಗಿ ಆಪತ್ತು ತಪ್ಪಿತು. ಸಿಟ್ಟು ಇಳಿಯಿತು, ಬದುಕು ಬೆಳಗಿತು. “ಧೃತಿ ಕ್ಷಮ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹ ಧಿರ್ವಿದ್ಯಾಸತ್ಯಮೆಕ್ರೋಧೋ ದಶಕಂ ಧರ್ಮಲಕ್ಷಣಂ’
ಎಂಬ ನೀತಿ ವಾಕ್ಯದಂತೆ ಹತ್ತು ಧರ್ಮ ಲಕ್ಷಣಗಳಲ್ಲಿ ಕ್ರೋಧವೂ ಒಳಗೊಂಡಿದೆ.
Related Articles
Advertisement