Advertisement

ಜನರಿಗೆ ಸರ್ಕಾರ ನೀಡುತ್ತಿರುವ 5 ಗ್ಯಾರಂಟಿಗಳೇ ನಮ್ಮ ಗೆಲುವಿನ ಶ್ರೀರಕ್ಷೆ: ಚಂದ್ರಶೇಖರ್‌ಗೌಡ

07:58 PM Mar 12, 2024 | Team Udayavani |

ಕೊರಟಗೆರೆ ; 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಸ್.ಬಿ.ಮುದ್ದಹನುಮೇಗೌಡರ ಗೆಲುವು ಖಚಿತವಾಗಿದ್ದು ಸರ್ಕಾರ ಬಡ ಜನರಿಗೆ ನೀಡುತ್ತಿರುವ ೫ ಗ್ಯಾರಂಟಿಗಳೇ ನಮ್ಮ ಗೆಲುವಿನ ಶ್ರೀರಕ್ಷೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ ತಿಳಿಸಿದರು.

Advertisement

ಅವರು ಪಟ್ಟಣದ ರಾಜೀವ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಮಾ.13 ರ ಬುಧವಾರದಂದು ಬೆಳಿಗ್ಗೆ 10.30 ಕ್ಕೆ ಕೊರಟಗೆರೆ ಪಟ್ಟಣದ ರಾಜೀವ ಭವನದ ಆವರಣದಲ್ಲಿ ತುಮಕೂರು ಲೋಕಸಭಾ ಚುನಾವಣೆ 2024 ರ ಪ್ರಚಾರ ಸಭೆ ಮತ್ತು ಪಕ್ಷ ಸೇರ್ಪಡೆಯ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರುಗಳಾದ ಶ್ರೀನಿವಾಸ್, ರಂಗನಾಥ್, ವೆಂಕಟೇಶ್, ಷಡಾಕ್ಷರಿ, ವಿಧಾನಪರಷತ್ ಸದಸ್ಯ ರಾಜೇಂದ್ರ, ವಿಧಾನಸಭಾ ಕ್ಸೇತ್ರದ ನಾಯಕರುಗಳಾದ ಬೆಮೇಲ್ ಕಾಂತರಾಜು, ಡಿ.ಸಿ.ಗೌರಿಶಂಕರ್, ಕಿರಣ್‌ಕುಮಾರ್, ರಷೀಕ್‌ಅಹಮದ್, ಹಾಗೂ ಕೆ.ಪಿ.ಸಿ.ಸಿ.ಯ ಹಲವು ಪದಾಧಿಕಾರಿಗಳು ಆಗಮಿಸಲಿದ್ದಾರೆ ಈ ಕಾರ್ಯಕ್ರಮಕ್ಕೆ ಕ್ಷೇತ್ರದ ಮತ್ತು ಜಿಲ್ಲೆಯ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಆಗಮಿಸುವಂತೆ ಕೊರಿದರು.

ತುಮಕೂರು ಜಿಲ್ಲೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಬರಲಿದ್ದು ಮೂರರಲ್ಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ಹೆಚ್ಚು ಕ್ಷೇತ್ರಗಳು ತುಮಕೂರು ಲೋಕಸಭೆಗೆ ಬರಲ್ಲಿದ್ದು ಈ ಕ್ಷೇತ್ರ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಜನ ವಿಧಾನ ಸಭಾ ಸದಸ್ಯರಿದ್ದು ಅದರಲ್ಲೂ ಇಬ್ಬರು ಪ್ರಭಲ ಸಚಿವರುಗಳು ಇದ್ದಾರೆ, ಈ ಲೋಕಸಭಾ ಚುನಾವಣೆ ಡಾ.ಜಿ.ಪರಮೇಶ್ವರ ಮತ್ತು ಕೆ.ಎನ್.ರಾಜಣ್ಣ ನವರ ನೇತೃತ್ವದಲ್ಲಿ ನಡೆಯಲ್ಲಿದ್ದು ನಮ್ಮ ಅಭ್ಯರ್ಥಿ ಮುದ್ದಹನುಮೇಗೌಡರು ಅತಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲ್ಲಿದ್ದಾರೆ, ಕೊರಟಗೆರೆಯಲ್ಲಿ ಬುಧವಾರದಂದು ಲೋಕಸಭಾ ಚುನಾವಣಾ ಪ್ರಚಾರ ಅರಂಭಿಸಲಿದ್ದು, ಅಂದು ಜೆಡಿಸ್ ಮತ್ತು ಬಿಜೆಪಿ ಪಕ್ಷಗಳ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದ ಅವರು ಈ ಭೃಹತ್ ಕಾರ್ಯಕ್ರಮಕ್ಕೆ ಸಾವಿರರು ಸಂಖ್ಯೆಯಲ್ಲಿ ಕಾರ್ಯಕರ್ತರು ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವಥನಾರಾಯಣ, ಅರಕರೆಶಂಕರ್, ಮಹಿಳಾ ಅದ್ಯಕ್ಷೆ ಜಯಮ್ಮ, ಮಖಂಡರುಗಳಾದ ಟಿ.ಸಿ.ರಾಮಯ್ಯ, ನಾಗಭೂಷಣ್, ವೆಂಕಟಪ್ಪ, ಮಹಮದ್ ಇಸ್ಮಾಯಿಲ್, ಕೆ.ಎಲ್.ಮಂಜುನಾಥ್, ಅರವಿಂದ್, ರಘುವೀರ್ ಸೇರಿದಂತೆ ಇತರರು ಹಾಜರಿದ್ದರು.

ಇದನ್ನೂ ಓದಿ: ಉತ್ತಮ ಗೆಲುವು ಆಕೈತಿ, ಅರ್ಹ ವ್ಯಕ್ತಿಯ ಮರ್ದನ ಆಕೈತಿ.. ಬಬಲಾದಿ ಮುತ್ಯಾನ ಕಾಲಜ್ಞಾನದ ಭವಿಷ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next