Advertisement

ಮೋದಿಗೆ ಚೊಂಬಿನ ಚಿತ್ರ ತೋರಿಸಿದ ದೇವೇಗೌಡರು

11:43 PM Apr 20, 2024 | Team Udayavani |

ಬೆಂಗಳೂರು: “ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸರಕಾರದ ಕೊಡುಗೆ ಚೊಂಬು’ ಎಂದು ಕಾಂಗ್ರೆಸ್‌ ನೀಡಿದ ಜಾಹೀರಾತನ್ನು ಶನಿವಾರ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮೋದಿಗೆ ಪ್ರದರ್ಶಿಸುವಾಗ ಸೆರೆಹಿಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಚಿಕ್ಕಬಳ್ಳಾಪುರದಲ್ಲಿ ಹಮ್ಮಿ ಕೊಂಡಿದ್ದ ಸಮಾವೇಶದಲ್ಲಿ ದೇವೇಗೌಡ ಅವರು, ಭಾಷಣದ ವೇಳೆ ಚೊಂಬಿಗೆ ಸಂಬಂಧಿಸಿದ ಜಾಹೀರಾತು ಪ್ರಧಾನಿ ಪ್ರದರ್ಶಿಸುವಾಗ ಫೋಟೋ ಸೆರೆಹಿಡಿಯಲಾಗಿದೆ.

ಈ ಫೋಟೋ ಅನ್ನು ಸಾಮಾಜಿಕ ಜಾಲತಾಣ “ಎಕ್ಸ್‌’ನಲ್ಲಿ ಅಪ್‌ಲೋಡ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, ಅದರ ಕೆಳಗೆ ಶ್ರೀ ದೇವೇಗೌಡ ಶೋಯಿಂಗ್‌ ಆರ್ಟ್‌ ಟು ದಿ ಆರ್ಟಿಸ್ಟ್‌’ (ದೇವೇಗೌಡ ಅವರು ಕಲೆಯನ್ನು ಕಲೆಗಾರನಿಗೆ ತೋರಿಸುತ್ತಿದ್ದಾರೆ) ಅಂತ ಚುಟುಕು ಚಿತ್ರಶೀರ್ಷಿಕೆ ನೀಡಿದ್ದಾರೆ. ಇವೆರಡೂ ವಾಟ್ಸ್‌ಆ್ಯಪ್‌ ಸ್ಟೇಟಸ್‌ ಸಹಿತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next