Advertisement

ಅನುಜಾ ಮಹಿಳಾ ಸಂಸ್ಥೆ ಡೊಂಬಿವಲಿ ಇದರ 38ನೇ ವಾರ್ಷಿಕೋತ್ಸವ

02:31 PM Mar 15, 2019 | |

ಡೊಂಬಿವಲಿ: ಡೊಂಬಿವಲಿಯ ಅನುಜಾ ಮಹಿಳಾ ಸಂಸ್ಥೆಯ 38ನೇ ವಾರ್ಷಿಕೋತ್ಸವ ಸಂಭ್ರಮವು ಮಾ. 9 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಡೊಂಬಿವಲಿ ಪೂರ್ವದ ಸರ್ವೇಶ ಸಭಾಗೃಹದಲ್ಲಿ ನಡೆಯಿತು.

Advertisement

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮೈಸೂರು ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷೆ ಕಮಲಾ ಕೆ. ಅವರು, ಅನುಜಾ ಮಹಿಳಾ ಸಂಸ್ಥೆಯ ಕಾರ್ಯಕ್ರಮಗಳನ್ನು ಮಹಿಳೆಯರೇ ಆಯೋಜಿಸಿಕೊಂಡು ಬರುತ್ತಿರುವುದು ಅಭಿನಂದನೀಯ. ಮಹಿಳೆಯರು ಇನ್ನಷ್ಟು ಸಂಘಟಿತರಾಗಿ ಸಂಸ್ಥೆಯನ್ನು ಬೆಳೆಸಬೇಕು. ಅಲ್ಲದೆ ಡೊಂಬಿವಲಿಯ ಇತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಮಾಜಪರ ಕಾರ್ಯಗಳಲ್ಲಿ ಸಂಸ್ಥೆಯು ತೊಡಗಬೇಕು. ಸಂಸ್ಥೆಯ ಆರ್ಥಿಕವಾಗಿ ಇನ್ನಷ್ಟು ಬೆಳೆಯಬೇಕು. ಆಗ ಸಾಮಾಜಿಕ ಸುಧಾರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಿದೆ. ಸಂಸ್ಥೆಯ ಮಹಿಳೆಯರ ಸಂಘಟನಾ ಶಕ್ತಿ ಅಭಿನಂದನೀಯವಾಗಿದೆ ಎಂದರು.

ಗೌರವ ಅತಿಥಿಯಾಗಿ ಆಗಮಿಸಿದ ಸು. ಶ್ರೀ. ಇನಾಮ್‌ದಾರ್‌ ಅವರು ಪಾಲ್ಗೊಂಡು ಮಾತನಾಡಿ, ಮರಾಠಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ಮಹಿಳೆಯರು ಅಭಿನಯಿಸಿದ ಇಂದಿನ ನಾಟಕವು ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ. ನಮ್ಮಲ್ಲಿರುವ ಸಂಸ್ಕೃತಿ-ಸಂಸ್ಕಾರಗಳನ್ನು ಬಿಂಬಿಸುವ ಉದ್ಧೇಶದಿಂದ ಇಂತಹ ಕಾರ್ಯಕ್ರಮಗಳು ಮಹಿಳೆಯರಿಗೆ ಅರ್ಥಪೂರ್ಣವಾಗಿದೆ. ಸಂಸ್ಥೆಯಿಂದ ಇನ್ನಷ್ಟು ಸಾಮಾಜಕ, ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯುತ್ತಿರಲಿ ಎಂದು ಹಾರೈಸಿ ಸಂಸ್ಥೆಯ ಮಹಿಳೆಯರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಅನುಜಾ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಸಂಧ್ಯಾ ರವಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸತತ 38 ವರ್ಷಗಳಿಂದ ಕನ್ನಡದ ತೇರನ್ನು ಎಳೆಯುವುದರೊಂದಿಗೆ ಸ್ಥಳೀಯ ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಸಂಸ್ಥೆಯು ಕಾರ್ಯ

ಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸಂಸ್ಥೆಯೊಂದಿಗೆ ಮಹಿಳೆಯರು ಇನ್ನಷ್ಟು ಸೇರಿಕೊಂಡು ಸಂಘಕ್ಕೆ ಬಲತುಂಬಬೇಕು. ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಸಂಸ್ಥೆಗೆ ಸದಾಯಿರಲಿ ಎಂದು ಆಶಿಸಿದರು.

Advertisement

ವೇದಿಕೆಯಲ್ಲಿ ಅತಿಥಿಗಳಾದ ಕಮಲಾ ಕೆ., ಸು. ಶ್ರೀ ಇನಾಂದಾರ್‌, ಡೊಂಬಿವಲಿ ಪರಿಸರದ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅನುಜಾ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಸಂಧ್ಯಾ ರವಿ, ಕಾರ್ಯದರ್ಶಿ ಸೀತಾ ದೇವಾಡಿಗ, ಕೋಶಾಧಿಕಾರಿ ದೇವಿಕಾ ಸಾಲ್ಯಾನ್‌ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು. ಉಷಾ ಜೋಶಿ, ವಿಜಯಲಕ್ಷ್ಮೀ ಕುಲಕರ್ಣಿ ಅವರು ಪ್ರಾರ್ಥನೆಗೈದರು. ಕಾರ್ಯದರ್ಶಿ ಸೀತಾ ದೇವಾಡಿಗ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು.

ಅತಿಥಿ-ಗಣ್ಯರನ್ನು ಸಂಸ್ಥೆಯ ವತಿಯಿಂದ ಪದಾಧಿಕಾರಿಗಳು  ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯೆಯರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾಜೇಂದ್ರ ಗುಂಜೀಕರ ಹಾಗೂ ಸುಧಾ ಗುಂಜಿಕರ ಇವರ ನಿರ್ದೇಶನದಲ್ಲಿ ಮರಾಠಿ ಮೂಲ, ಕನ್ನಡ ಅನುವಾದಿತ ಸತ್ಯಮೇವ ಜಯತೆ ನಾಟಕವು ಸಂಸ್ಥೆಯ ಕಲಾವಿದೆಯರು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.

ಅಲ್ಲದೆ ಮಹಿಳಾ ವಿಭಾಗದಿಂದ ನೃತ್ಯ ವೈವಿಧ್ಯ, ಸದಸ್ಯೆಯರ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಕ್ಷಿತಿಜಾ ಶಾಲೆಯ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವ ಕನ್ನಡ ಗೀತೆಗಳ ಗಾಯನ ನಡೆಯಿತು. ಸಂಘದ ಉಪಾಧ್ಯಕ್ಷೆ ಸುಧಾ ಗುಂಜಿಕರ, ಜತೆ ಕಾರ್ಯದರ್ಶಿ ಅಶ್ವಿ‌ನಿ ಮೂಡಿಗೇರಿ, ಜತೆ ಕೋಶಾಧಿಕಾರಿ ರಾಧಿಕಾ ರಾವ್‌ ಉಪಸ್ಥಿತರಿದ್ದರು. ಪೂರ್ಣಿಮಾ ಪುರೋಹಿತ್‌ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಎಲ್ಲಾ ಸದಸ್ಯರುಗಳ ಸಹಕಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next