Advertisement
ಇಂತಹ ಮಹಾನಗರಕ್ಕೆ 1862ರಲ್ಲಿ ಮೊತ್ತ ಮೊದಲ ಮುನ್ಸಿಪಾಲಿಟಿ ಆರಂಭವಾಗಿತ್ತು. ಕಂಟೋನ್ಮೆಂಟ್ ಪ್ರದೇಶಕ್ಕೆ ಪ್ರತ್ಯೇಕ ಮಿನ್ಸಿಪಲ್ ಬೋರ್ಡ್ ರಚನೆಯಾಗಿತ್ತು. 1949ರಲ್ಲಿ ಬೆಂಗಳೂರು ಪಟ್ಟಣ ಮತ್ತು ಕಂಟೋನ್ಮೆಂಟ್ ಪ್ರದೇಶಗಳನ್ನು ಸೇರಿಸಿ ಬೆಂಗಳೂರು ಸಿಟಿ ಕಾರ್ಪೋರೇಷನ್ ಸ್ಥಾಪನೆಯಾಗಿತ್ತು. 2007ರ ಏಪ್ರಿಲ್‌ನಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳು, ಏಳು ಸಿಟಿ ಮುನ್ಸಿಪಾಲಿಟಿ ಕೌನ್ಸಿಲ್‌ಗಳು, ಒಂದು ಟೌನ್ ಮುನ್ಸಿಪಲ್ ಕೌನ್ಸಿಲ್ ಹಾಗೂ ಸುತ್ತಲಿನ 111 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ 198 ವಾರ್ಡ್‌ಗಳು ರಚನೆಯಾದವು.
Related Articles
Advertisement
ಈಗ ಅದರ ಅರ್ಧದಷ್ಟು ಕಸ ವಿಂಗಡಣೆಯಾಗುತ್ತಿದೆ. ನಗರದಲ್ಲಿ ಕುಡಿಯುವ ನೀರಿಗಾಗಿಯೇ 86 ಕೋಟಿ ರೂ. ಮೀಸಲಿಸಲಾಗಿದೆ. 110 ಹಳ್ಳಿಗಳ ವ್ಯಾಪ್ತಿಯ ಪಾಲಿಕೆ ಸದಸ್ಯರಿಗೂ ಅನುದಾನ ಲಭ್ಯವಿದೆ. ಕೊಳವೆಬಾವಿ ಅಥವಾ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ, ಪ್ರದೇಶವಾರು ಅಗತ್ಯವಿರುವ ಕ್ರಮಗಳನ್ನು ಸದಸ್ಯರು ಕೈಗೊಳ್ಳಬಹುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಅವರು ಹೇಳಿದ್ದಾರೆ.
ಬದಲಾಗಲಿದೆ ನಗರ, ಪೌರ ಸಂಸ್ಥೆಗಳ ವಾರ್ಡ್ ನಕ್ಷೆಸದ್ಯದಲ್ಲೇ ನಗರಪಾಲಿಕೆ, ನಗರಸಭೆ, ಪುರಸಭೆಗಳ ಕ್ಷೇತ್ರ ಮರುವಿಂಗಡಣೆಗೆ ಜೊತೆಯಲ್ಲಿ ಮೀಸಲು ಕೂಡ ಬದಲಾಗಲಿದೆ. ವಾರ್ಡ್‌ಗಳು ಶೇ.10 ರಷ್ಟು ಹೆಚ್ಚುವ ಸಾಧ್ಯತೆ ಇದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಪುನರ್ ವಿಂಗಡಣೆಗೆ ಸರ್ಕಾರ ನಿರ್ಧರಿಸಿದ್ದು, ಸದ್ಯದಲ್ಲೇ ಪಾಲಿಕೆ, ನಗರಸಭೆ, ಪುರಸಭೆಗಳ ಸ್ವರೂಪ ಬದಲಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳು, 41 ನಗರ ಸಭೆ, 65 ಪುರಸಭೆ, 91 ಪಟ್ಟಣ ಪಂಚಾಯಿತಿಗಳ 4,976 ಕ್ಷೇತ್ರಗಳ (ವಾರ್ಡ್) ಸಂಖ್ಯೆ ಶೇ.10 ರಿಂದ ಶೇ.15 ರವರೆಗೆ ಹೆಚ್ಚಾಗಲಿದೆ. ಮುಂದಿನ ವರ್ಷ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜ್ಯದ 209 ಸ್ಥಳೀಯ ಸಂಸ್ಥೆಗಳನ್ನು 2011ರ ಜನಗಣತಿ ಆಧರಿಸಿ ಪುನರ್ ವಿಂಗಡಣೆ ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಚುನಾವಣೆ ಆಯೋಗದ ಅಧಿಕಾರಿಗಳು ಎರಡು ಸಭೆಗಳನ್ನೂ ನಡೆಸಿದ್ದು, ಪುನರ್ ವಿಂಗಡಣೆ ಮಾಡುವುದಕ್ಕೆ ತೀರ್ಮಾನವನ್ನೂ ತೆಗೆದುಕೊಂಡಿದ್ದಾರೆ. ಆದರೆ, ಸರ್ಕಾರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕಿದ್ದು, ಅನಂತರದಲ್ಲಿ ಪ್ರಕ್ರಿಯೆ ಆರಂಭವಾಗಲಿದೆ. ಇದರೊಂದಿಗೆ ರಾಜ್ಯದಲ್ಲಿ ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳು, 41 ನಗರ ಸಭೆ, 65 ಪುರಸಭೆ, 91 ಪಟ್ಟಣ ಪಂಚಾಯಿತಿಗಳ 4,976 ಕ್ಷೇತ್ರಗಳ (ವಾರ್ಡ್) ಸಂಖ್ಯೆ ಶೇ.10 ರಿಂದ ಶೇ.15 ರವರೆಗೆ ಹೆಚ್ಚಾಗಲಿದೆ. ಇದರ ಪರಿಣಾಮ ನಗರ, ಸ್ಥಳೀಯ ಸಂಸ್ಥೆಗಳ ರಚನೆ, ಸ್ವರೂಪ ಮತ್ತು ಮೀಸಲಾತಿ ಎಲ್ಲವೂ ಬದಲಾಗಲಿದೆ. ಅಂದರೆ, ಪ್ರತಿ ಸ್ಥಳೀಯ ಸಂಸ್ಥೆಗಳಲ್ಲಿ 5 ರಿಂದ 8 ಕ್ಷೇತ್ರಗಳು ಹೆಚ್ಚುವರಿ ರಚನೆಯಾಗಲಿದ್ದು, ಸದ್ಯ ಇರುವ ರಾಜ್ಯದ ಎಲ್ಲ ಸಂಸ್ಥೆಗಳ ಕ್ಷೇತ್ರಗಳ (ವಾರ್ಡ್) ಸಂಖ್ಯೆ 4,976ರ ಬದಲು 5,500ಕ್ಕೆ ಹೆಚ್ಚಾದರೂ ಅಚ್ಚರಿ ಇಲ್ಲ. * ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳು, ಏಳು ಸಿಟಿ ಮುನ್ಸಿಪಾಲಿಟಿ ಕೌನ್ಸಿಲ್‌ಗಳು, ಒಂದು ಟೌನ್ ಮುನ್ಸಿಪಲ್ ಕೌನ್ಸಿಲ್ ಹಾಗೂ ಸುತ್ತಲಿನ 111 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ 198 ವಾರ್ಡ್‌ಗಳು ರಚನೆಯಾದವು. * ರಾಜ್ಯದಲ್ಲಿ ಬಿಬಿಎಂಪಿ ಸೇರಿದಂತೆ ಮಹಾನಗರ ಪಾಲಿಕೆಗಳು, 41 ನಗರ ಸಭೆ, 65 ಪುರಸಭೆ, 91 ಪಟ್ಟಣ ಪಂಚಾಯಿತಿಗಳ 4,976 ಕ್ಷೇತ್ರಗಳ (ವಾರ್ಡ್) ಸಂಖ್ಯೆ ಶೇ.10 ರಿಂದ ಶೇ.15 ರವರೆಗೆ ಹೆಚ್ಚಾಗಲಿದೆ.