Advertisement
ಜಿಲ್ಲೆಯ ರಜತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸಿದ್ದೇವೆ ಮತ್ತು ಜವಾಬ್ದಾರಿಗಳನ್ನು ಹಂಚಿದ್ದೇವೆ. ಆ ಸಮಿತಿಗಳು ಪ್ರತ್ಯೇಕವಾಗಿ ಸಭೆ ಸೇರಿ ಏನೇನು ಮಾಡಬೇಕು ಮತ್ತು ಜಿಲ್ಲಾಡಳಿತದಿಂದ ಏನಾಗ ಬೇಕು ಎಂಬುದರ ಚರ್ಚೆ ನಡೆಸಿ, ಕಾರ್ಯಕ್ರಮ ಅನುಷ್ಠಾನ ಮಾಡಲಿದ್ದೇವೆ. ಸ್ಥಳೀಯ ಶಾಸಕರು ಉಸ್ತುವಾರಿ ನೋಡಿ ಕೊಳ್ಳಲಿದ್ದಾರೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.
ಜಿಲ್ಲೆ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಅಮೃತ ಮಹೋ ತ್ಸ ವದ ಈ ಸಂದರ್ಭ ರಜತಾದ್ರಿಯ ಜಿಲ್ಲಾಧಿಕಾರಿ ಸಂಕೀರ್ಣವನ್ನು ವಿದ್ಯುದ್ದೀಪಾಲಂಕಾರದ ಜತೆಗೆ ಸುಣ್ಣ-ಬಣ್ಣ ಬಳಿದು ದುರಸ್ತಿ ಮಾಡಬೇಕಿತ್ತು. ಆದರೆ ಸಾಧ್ಯವಾಗಿಲ್ಲ. 3 ಕೋ.ರೂ. ಅನುದಾನದ ಪ್ರಸ್ತಾವನೆ ಸಿದ್ಧಪಡಿಸಿದ್ದೆವು ಎಂದರು. ವಿವಿಧೋದ್ದೇಶ ಬಂದರು ಮರೀನಾ ಅಲ್ಲ
ಜಿಲ್ಲೆಯಲ್ಲಿ ಕಾಲುಸಂಕಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಿದ್ದೇವೆ. ನರೇಗಾ ಯೋಜನೆಯಡಿಯಲ್ಲಿ ಪರಿಕರಗಳಿಗೂ ಶೀಘ್ರ ಅನುದಾನ ಒದಗಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನದಲ್ಲಿ ಬಂದರುಗಳ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ವಿವಿಧೋದ್ದೇಶದ ಬಂದರುಗಳು ಮರೀನಾ ಅಲ್ಲ ಎಂದು ಸ್ಪಷ್ಟಪಡಿಸಿದರು.
Related Articles
Advertisement