Advertisement

ವೈಶಿಷ್ಟ್ಯಗಳ ವಚನ ಶಿಲಾಮಂಟಪ: ರಾಜ್ಯಪಾಲರಿಂದ ಉದ್ಘಾಟನೆ

11:48 PM Jun 08, 2022 | Team Udayavani |

ವಿಜಯಪುರ: ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ದೇಶದ ವಿಶಿಷ್ಟ ಹಾಗೂ ಏಕೈಕ ವಚನಶಿಲಾ ಮಂಟಪವನ್ನು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಬುಧವಾರ ಉದ್ಘಾಟಿಸಿದರು.

Advertisement

ಇಂಗಳೇಶ್ವರ ವಿರಕ್ತ ಮಠದ ಚನ್ನಬಸವ ಶ್ರೀಗಳು ಈ ವಿಶೇಷ ಯೋಜನೆಯ ಹಿಂದೆ ಇದ್ದಾರೆ. ಅರ್ಧ ಶತಮಾನದ ಹಿಂದೆ ದೇಶಾದ್ಯಂತ ಪಾದಯಾತ್ರೆ ಸಂಚಾರದಲ್ಲಿದ್ದಾಗ ಬರೋಡಾ ವಿಶ್ವವಿದ್ಯಾನಿಲಯದಲ್ಲಿ ಶಿಲೆಯಲ್ಲಿ ಅರಳಿದ ಸಾಹಿತ್ಯವನ್ನು ಅವಲೋಕಿಸಿದ್ದರು.

ವಚನಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು, ಹಾಲಿ ಪೀಠಾಧಿಪತಿ ಡಾ| ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಧಿಕಾರಿ ಡಾ| ವಿ.ಬಿ. ದಾನಮ್ಮವರ, ಎಸ್ಪಿ ಆನಂದ ಕುಮಾರ, ಯರನಾಳದ ಗುರುಸಂಗನಬಸವ ಶ್ರೀಗಳು ಸಹಿತ ನೂರಾರು ಮಠಾಧಿಧೀಶರು ಈ ಸಂದರ್ಭ ಉಪಸ್ಥಿತರಿದ್ದರು.

ಯಾರ ವಚನಗಳಿವೆ?
ಬಸವೇಶ್ವರ ಸಮಗ್ರ ವಚನಗಳು ಹಾಗೂ ಪ್ರಭು ದೇವರು, ಚನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ ಶರಣರು ಮುಂತಾದವರ ವಚನಗಳಿವೆ.

40 ವರ್ಷ- ಚನ್ನಬಸವ ಶ್ರೀಗಳ ಪರಿಶ್ರಮ
– ಸರಕಾರದಿಂದ ಯಾವುದೇ ನೆರವು ಪಡೆದಿಲ್ಲ
– ಶರಣರ ವಚನಗಳನ್ನು ಶಿಲೆಗಳಲ್ಲಿ ಕೆತ್ತಿಸಲೇಬೇಕೆಂದು ನಿರ್ಧರಿಸಿ ಭಕ್ತರಿಂದಲೇ ಹಣ ಸಂಗ್ರಹಕ್ಕೆ ತೀರ್ಮಾನ
– 40 ವರ್ಷ ನಿರಂತರ ಎಡೆಬಿಡದ ಸಾಧನೆಯಿಂದ ಐತಿಹಾಸಿಕ ಸಾಧನೆ.
– ಜಗತ್ತಿನಲ್ಲೇ ಇಂಗಳೇಶ್ವರ ವಚನಶಿಲಾ ಮಂಟಪ ವಿಶಿಷ್ಟತೆ ಪಡೆದಿದೆ. ಭವಿಷ್ಯದಲ್ಲಿ ಪ್ರವಾಸಿಗರ ಆಕರ್ಷಣೆ ಆಗುವ ನಿರೀಕ್ಷೆ ಇದೆ.
– 1.60 ಲಕ್ಷ ಅಕ್ಷರಗಳ 1200 ವಚನ- ಶಿಲೆಗಳಲ್ಲಿ ಅರಳಿದ ವಚನಗಳು. ಅದಕ್ಕೆ ಷಟಸ್ಥಲ ಪರಿಕಲ್ಪನೆ ಬಳಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next