Advertisement

MSD; ‘ಅಂದೇ ನಿವೃತ್ತಿಯ ಬಗ್ಗೆ ನಿರ್ಧರಿಸಿದ್ದೆ..’: 4 ವರ್ಷದ ಬಳಿಕ ಗುಟ್ಟು ಬಿಚ್ಚಿಟ್ಟ ಧೋನಿ

11:51 AM Oct 27, 2023 | Team Udayavani |

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕಳೆದ ವಿಶ್ವಕಪ್ ನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. 2019ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅವರು ತನ್ನ ಕೊನೆಯ ಪಂದ್ಯವಾಡಿದ್ದರು. ಇದರ ಬಳಿಕ ಹಲವು ತಿಂಗಳ ಬಳಿಕ ಅವರು ಅಧಿಕೃತವಾಗಿ ನಿವೃತ್ತಿ ಘೋಷಣೆ ಮಾಡಿದ್ದರು.

Advertisement

ಕಿವೀಸ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ 240 ರನ್ ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ಕೊನೆಯಲ್ಲಿ ಧೋನಿ ಒಬ್ಬರೇ ಭರವಸೆಯಾಗಿದ್ದರು. ಆದರೆ ಮಾರ್ಟಿನ್ ಗಪ್ಟಿಲ್ ಎಸೆದ ಥ್ರೋಗೆ ಧೋನಿ ರನೌಟಾಗಿ ಮರಳಬೇಕಾಗಿತ್ತು. ಭಾರತ ಪಂದ್ಯ ಸೋತಿತ್ತು.

ಸಾಮಾನ್ಯವಾಗಿ ಶಾಂತ ಸ್ವಭಾವದ ಮತ್ತು ಭಾವನೆಗಳನ್ನು ತೋರಿಸದ ಧೋನಿ ಅಂದು ಔಟಾಗಿ ಡ್ರೆಸ್ಸಿಂಗ್ ರೂಮ್‌ ಗೆ ಹಿಂತಿರುಗುತ್ತಿದ್ದಂತೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾಗಿ ನಾಲ್ಕು ವರ್ಷಗಳ ಬಳಿಕ ಇದೀಗ ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನೀವು ಪಂದ್ಯವನ್ನು ಸೋತಾಗ ಭಾವನೆಗಳನ್ನು ನಿಯಂತ್ರಣ ಮಾಡುವುದು ಕಷ್ಟ. ನನಗೆ ಅದುವೇ ಕೊನೆಯ ಪಂದ್ಯವಾಗಿತ್ತು. ನಾನು ವರ್ಷದ ಬಳಿಕ ನಿವೃತ್ತಿ ಘೋಷಣೆ ಮಾಡಿದರೂ ಕೂಡಾ ನನ್ನ ತಲೆಯಲ್ಲಿ ನಾನು ಅಂದೇ ನಿವೃತ್ತನಾಗಿದ್ದೆ” ಎಂದು ಧೋನಿ ಹೇಳಿದರು.

ತಾನು ಮತ್ತೆ ದೇಶಕ್ಕಾಗಿ ಆಡುವುದನ್ನು ಮುಂದುವರಿಸುವುದಿಲ್ಲ ಎಂದು ಯಾರಿಗೂ ಹೇಳಿರಲಿಲ್ಲ ಎಂದು ಧೋನಿ ಹೇಳಿದರು. “ನಾವು ಧರಿಸುವ ಕೆಲವು ಯಂತ್ರಗಳನ್ನು ನಮಗೆ ನೀಡಲಾಗುತ್ತದೆ. ನಾನು ಅದನ್ನು ಹಿಂತಿರುಗಿಸಲು ತರಬೇತುದಾರರ ಬಳಿಗೆ ಹೋದಾಗಲೆಲ್ಲಾ ಅವರು ‘ಇಲ್ಲ ನೀವು ಅದನ್ನು ಇರಿಸಿಕೊಳ್ಳಿ’ ಎಂದು ಹೇಳುತ್ತಿದ್ದರು. ನನಗೆ ಇನ್ನು ಮುಂದೆ ಇದರ ಅಗತ್ಯವಿಲ್ಲ ಎಂದು ಈ ವ್ಯಕ್ತಿಗೆ ಹೇಗೆ ಹೇಳುವುದು ಎಂದು ನಾನು ಯೋಚಿಸುತ್ತಿದ್ದೆ. ಆ ಸಮಯದಲ್ಲಿ ನಾನು ನಿವೃತ್ತಿಯ ಬಗ್ಗೆ ಘೋಷಿಸಲು ಬಯಸಲಿಲ್ಲ”ಎಂದು ಧೋನಿ ಹೇಳಿದರು.

Advertisement

“ನಿವೃತ್ತಿಯ ದಿನ ನೀವ ಭಾವನೆಗಳಿಂದ ತುಂಬಿ ಹೋಗಿರುತ್ತೀರಿ. 15 ವರ್ಷಗಳಿಂದ ನೀವು ಕೇವಲ ದೇಶಕ್ಕಾಗಿ ಆಡುತ್ತೀರಿ. ನೀವು ನಿವೃತ್ತಿ ಹೇಳಿದ ಬಳಿಕ ಆ ಅವಕಾಶವೇ ಇರುವುದಿಲ್ಲ. ಈ ವಿಷಯಗಳೇ ನಿಮ್ಮ ಭಾವುಕರನ್ನಾಗಿ ಮಾಡುತ್ತವೇ” ಎಂದು ಧೋನಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next