Advertisement

ಕ್ಷೇತ್ರದಲ್ಲಿ ಕಾಣುತ್ತಿಲ್ಲ ಲೋಕಸಭಾ ಚುನಾವಣಾ ಕಾವು!

10:45 AM Apr 04, 2019 | Team Udayavani |

ತರೀಕೆರೆ: ಮೊದಲ ಹಂತದ ಲೋಕಸಭಾ ಚುನಾವಣೆ ದಿನಗಣನೆ ಆರಂಭವಾಗಿದ್ದರೂ ಚುನಾವಣೆಯ ಕಾವು ಕ್ಷೇತ್ರದಲ್ಲಿ ಅಷ್ಟಾಗಿ ಕಂಡುಬರುತ್ತಿಲ್ಲ. ಮೈತ್ರಿ ಪಾಳಯದ ಕಾರ್ಯಕರ್ತರಲ್ಲೂ ಉತ್ಸಾಹ ಕಾಣುತ್ತಿಲ್ಲ. ಜನರು ಕೂಡ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆ ಮಾಡದಿರುವುದು ಚುನಾವಣೆಯ ಕಾವು ಕಾಣಿಸಿಕೊಳ್ಳದಿರಲು ಕಾರಣವಾಗಿದೆ.

Advertisement

ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಕ್ಷೇತ್ರ: ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ ಕ್ಷೇತ್ರ ಚಿಕ್ಕಮಗಳೂರು. ಆದರೆ ಅಂತಹ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯೇ ಇಲ್ಲ ! ಕಾಂಗ್ರೆಸ್‌-ಜೆಡಿಎಸ್‌ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡ ಕಾರಣ ಅನಿವಾರ್ಯ ಸ್ಥಿತಿಯಲ್ಲಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಇದು ಕಾಂಗ್ರೆಸ್‌ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಜೆಡಿಎಸ್‌ ಚಿನ್ಹೆಯಲ್ಲಿ ಸ್ಪರ್ಧಿಸುತ್ತಿದ್ದದ್ದಾರೆ. ಅವರು ಮೂಲತಃ ಕಾಂಗ್ರೆಸ್ಸಿಗರು. ಕಾಂಗ್ರೆಸ್‌ನಿಂದ ಶಾಸಕರಾಗಿ, ಮಂತ್ರಿಯಾಗಿದ್ದವರು. ಕಾಂಗ್ರೆಸ್‌ ಅವರ ತಾಯಿ ಆದರೆ ಜೆಡಿಎಸ್‌ ಸಾಕುತಾಯಿ ಆಗಿದೆ. ಜನತಾದಳದ ಅಭ್ಯರ್ಥಿ ಕಾಂಗ್ರೆಸ್ಸಿನಿಂದ ವಲಸೆ ಬಂದ ವ್ಯಕ್ತಿ ಎಂಬ ಭಾವನೆ ಜೆಡಿಎಸ್‌ ಕಾರ್ಯಕರ್ತರಲ್ಲಿದ್ದರೆ, ಕಾಂಗ್ರೆಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕ್ಷೇತ್ರವನ್ನು ಏಕಾಏಕಿ ಬಿಟ್ಟುಕೊಟ್ಟಿದ್ದು ಕಾಂಗ್ರೆಸ್ಸಿಗರ ಸಿಟ್ಟಿಗೆ ಕಾರಣ.ಇವೆರಡರ ಮಧ್ಯೆ ಚುನಾವಣೆ ನಡೆಸಬೇಕಾದ ಸ್ಥಿತಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರದ್ದಾಗಿದೆ.

8 ವಿಧಾನಸಭಾ ಕ್ಷೇತ್ರಗಳನ್ನೂ ಹೊಂದಿರುವ ಉಡುಪಿ-ಚಿಕ್ಕಮಗಳೂರು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವಿಭಿನ್ನವಾದ ಕ್ಷೇತ್ರ. ಕ್ಷೇತ್ರ ಅಸ್ತಿತ್ವಕ್ಕೆ ಬಂದ ಮೇಲೆ ನಡೆಯುತ್ತಿರುವ 3ನೇ ಚುನಾವಣೆ. ಡಿ.ವಿ.ಸದಾನಂದಗೌಡ (ಬಿಜೆಪಿ) ಉಪಚುನಾವಣೆಯಲ್ಲಿ ಜಯಪ್ರಕಾಶ್‌ ಹೆಗ್ಡೆ (ಕಾಂಗ್ರೆಸ್‌), ಶೋಭಾ ಕರಂದ್ಲಾಜೆ (ಬಿಜೆಪಿ) ಯಿಂದ ಆಯ್ಕೆಯಾಗಿದ್ದವರು, ಮೂವರು ಕೂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು ಎನ್ನುವುದು ಗಮನಾರ್ಹ.

ಸ್ಥಳೀಯ ಸಂಸ್ಥೆ ಚುನಾವಣೆಯ ಕರಿನೆರಳು: ಮೈತ್ರಿ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಲು ಬರಲಿರುವ ಸ್ಥಳೀಯ ಚುನಾವಣೆ ಕರಿನೆರಳು ಬೀರಿದೆ. ಪಕ್ಷದ ಅಧಿಕೃತ ಚಿನ್ಹೆಯಾದ ಹಸ್ತವನ್ನು ಬಿಟ್ಟು ಜನತಾದಳದ ಹೊರೆ ಹೊತ್ತ ಮಹಿಳೆಗೆ ಮತವನ್ನು ಕೇಳಬೇಕಾದ ಅನಿವಾರ್ಯತೆಯನ್ನು ಕಾಂಗ್ರೆಸ್ಸಿಗರದ್ದಾಗಿದೆ. ಈಗ ನಾವು ಜನತಾದಳದ ಅಭ್ಯರ್ಥಿ ಮತಯಾಚಿಸಿ, ಮುಂಬರುವ ಪುರಸಭೆ, ನಗರಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಪರ ನಾವು ಮತಯಾಚಿಸುವುದು ಹೇಗೆ ಎಂಬ ಗೊಂದಲದಿಂದ ಸ್ಥಳೀಯ ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸುತ್ತಿರುವ ಟಿಕೆಟ್‌ ಆಕಾಂಕ್ಷಿಗಳು ಈ ಚುನಾವಣೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ನಾಯಕರು ಬಂದಾಗ ಮಾತ್ರ ಮುಖ ತೋರುತ್ತ ನಾವು ಕೂಡ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದೇವೆ ಎನ್ನುವುದನ್ನು ತೋರ್ಪಡಿಸುತ್ತಿದ್ದಾರೆ. ಈ ರೀತಿಯ ದ್ವಂಧ್ವ ನಿಲುವು ಮತದಾನದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದುನ್ನು ಕಾದು ನೋಡಬೇಕಾಗಿದೆ.

ತರೀಕೆರೆ ಭಾಗಕ್ಕೆ ಸೀಮಿತವಾದಂತೆ ಕಾಂಗ್ರೆಸ್‌ ತನ್ನದೇ ಆದ ಛಾಪು ಮತ್ತು ಕಾರ್ಯಕರ್ತರ ಪಡೆ ಹೊಂದಿದೆ. ಮುಖಂಡರಿಗೇನು ಕೊರತೆ ಇಲ್ಲ, ಆದರೂ ಎರಡು ಪಕ್ಷಗಳ ನಡುವೆ ಸಮನ್ವಯತೆ ಮೂಡದಿರುವುದು ವಿಪರ್ಯಾಸ. ನಾಯಕರ ಮೇಲಾಟವು ಇಲ್ಲಿದೆ, ಗುಂಪುಗಾರಿಕೆ, ಪರಸ್ಪರ ನಂಬಿಕೆ ಇಲ್ಲದಿರುವುದು, ಚುನಾವಣೆಯಲ್ಲಿ ಗೆಲುವಿಗಾಗಿ ತಂತ್ರ ಪ್ರತಿತಂತ್ರ ಮಾಡದಿರುವುದು, ಒಟ್ಟಾಗಿ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ತೊಡಗದಿರುವುದು ಎರಡು ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ. ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ವಿಧಾನ ಪರಿಷತ್‌ ಸದಸ್ಯರಾದ ಎಸ್‌.ಎಲ್‌ .ಧರ್ಮೇಗೌಡ, ಎಸ್‌.ಎಲ್‌.ಭೋಜೇಗೌಡ ಎಲ್ಲವನ್ನೂ ಸರಿತೂಗಿಸಿಕೊಂಡು ಹೋಗುವ ಅನಿವಾರ್ಯಯದಲ್ಲಿದ್ದಾರೆ.

Advertisement

ಸುಸೂತ್ರವಾಗಿ ನಡೆಯುತ್ತಿಲ್ಲ ಚುನಾವಣೆ ಹೊಂದಾಣಿಕ
ಎರಡು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎನ್ನುವ ಕಾರಣಕ್ಕಾಗಿ ಸಮ್ಮಿಶ್ರ ಸರಕಾರದ ಆಶಯ. ಆದರೆ ಪಕ್ಷದ ಹಿರಿತಲೆಗಳ ಆಶಯದಂತೆ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕೀಯ ನಡೆಯದಿರುವುದು ಎದ್ದು ಕಾಣುತ್ತಿದೆ. ಮೈತ್ರಿ ಅಭ್ಯರ್ಥಿ ಉಡುಪಿ ಜಿಲ್ಲೆಗೆ ಸೀಮಿತವಾಗಿದ್ದ ನಾಯಕರು, ಚಿಕ್ಕಮಗಳೂರು ಭಾಗಕ್ಕೆ ಚಿರಪರಿಚಿತರಲ್ಲ.

ಶೇಖರ್‌ ವಿ. ಗೌಡ

Advertisement

Udayavani is now on Telegram. Click here to join our channel and stay updated with the latest news.

Next