Advertisement
ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಪಿತ್ರೋಡಿಯ ವೆಂಕಟರಮಣ ನ್ಪೋರ್ಟ್ಸ್ಆ್ಯಂಡ್ ಕಲ್ಚರಲ್ ಕ್ಲಬ್ ಸಹಯೋಗದಲ್ಲಿ ಉಡುಪಿಯ ಸೈಂಟ್ ಸಿಸಿಲಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಂದಿಯ ಸಮ್ಮುಖದಲ್ಲಿ ತನುಶ್ರೀ ದಾಖಲೆ ಬರೆದರು.
2017ರಲ್ಲಿ ನಿರಾಲಂಭಪೂರ್ಣ ಚಕ್ರಾಸನವನ್ನು 1 ನಿಮಿಷದಲ್ಲಿ 19 ಬಾರಿ ಮಾಡಿ “ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಸಾಧನೆ, 2018ರಲ್ಲಿ ಎದೆಯ ಭಾಗ ಮತ್ತು ತಲೆಯನ್ನು ಸ್ಥಿರವಾಗಿರಿಸಿ ಉಳಿದ ಭಾಗವನ್ನು ಒಂದು ನಿಮಿಷದಲ್ಲಿ 42 ಬಾರಿ ತಿರುಗಿಸಿ ಗಿನ್ನೆಸ್ ದಾಖಲೆ ಮಾಡಿದ್ದರು. ತಂದೆ ಉದಯ ಕುಮಾರ್, ತಾಯಿ ಸಂಧ್ಯಾ ಅವರು ತನುಶ್ರೀ ಜತೆಗಿದ್ದು ಹುರಿದುಂಬಿಸಿದರು. ಇಬ್ಬರು ಅತಿಥಿಗಳು ಸ್ಥಳದಲ್ಲಿಯೇ ತಲಾ 10,000 ರೂ. ಬಹುಮಾನ ಕೂಡ ಘೋಷಿಸಿದರು.
Related Articles
“ಈ ಬಾರಿ ತನುಶ್ರೀ ಎರಡು ದಾಖಲೆಗಳನ್ನು ಮಾಡಿದ್ದಾರೆ. ಇದು ಅತ್ಯಂತ ಕಠಿನ, ಅಪರೂಪದ ದಾಖಲೆ ಎಂದು ದಾಖಲೆಯನ್ನು ಘೋಷಿಸಿದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಪ್ರಧಾನ ತೀರ್ಪುಗಾರ ಮನೀಷ್ ಬಿಷ್ಣೋಯ್ ತಿಳಿಸಿದರು.
Advertisement
ಹುತಾತ್ಮರಿಗೆ ಅರ್ಪಣೆ“ನನಗೆ ತುಂಬಾ ಖುಷಿಯಾಗುತ್ತಿದೆ. ಎರಡೂ ಸಾಧನೆಗಳನ್ನು ಒಟ್ಟಿಗೆ ಮಾಡಿದ್ದೇನೆ. ಅಪ್ಪ, ಅಮ್ಮ, ಗುರುಗಳು ಮತ್ತು ಎಲ್ಲರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಈ ದಾಖಲೆಯನ್ನು ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಸಮರ್ಪಿಸುತ್ತೇನೆ ಎಂದು ದಾಖಲೆ ಮಾಡಿದ ಅನಂತರ ಹುತಾತ್ಮರ ಭಾವಚಿತ್ರ ಎದುರು ದೀಪ ಬೆಳಗಿದ ತನುಶ್ರೀ ಹೇಳಿದರು. ಉಡುಪಿ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯಾಗಿರುವ ತನುಶ್ರೀ ನೃತ್ಯ, ಯಕ್ಷಗಾನ ತರಬೇತಿ ಕೂಡ ಪಡೆಯು ತ್ತಿದ್ದಾರೆ. ಸಮಾರಂಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವ ಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್, ಫಾ| ವಿಲಿಯಂ ಮಾರ್ಟಿಸ್, ಸೈಂಟ್ ಸಿಸಿಲೀಸ್ ಕನ್ನಡ ಮಾಧ್ಯಮ ವಿಭಾಗದ ಪ್ರಾಂಶುಪಾಲೆ ಸಿ| ವಿಭಾ, ಸಂಚಾಲಕಿ ಸಿ| ಮೇಝಿ, ವೆಂಕಟರಮಣ ನ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ಸ್‌ನ ಮಲ್ಲೇಶ್, ಭರತನಾಟ್ಯ ಗುರು ರಾಮಕೃಷ್ಣ ಕೊಡಂಚ, ವಿಜಯ ಕೋಟ್ಯಾನ್, ನಾಗರಾಜ ರಾವ್, ನಾರಾಯಣ ಶೆಟ್ಟಿ, ನ್ಯಾಯವಾದಿ ಶಾಂತಾರಾಮ ಶೆಟ್ಟಿ, ವಿಶುಶೆಟ್ಟಿ ಅಂಬಲಪಾಡಿ, ಪ್ರವೀಣ್ ಪೂಜಾರಿ, ನಾಗೇಶ್ ಉದ್ಯಾವರ, ಪ್ರತಾಪ್ ಕುಮಾರ್ ಉಪ ಸ್ಥಿತರಿದ್ದರು. ಎರೋಲ್ ನಿರ್ವಹಿಸಿದರು.