Advertisement
ಟ್ಯಾಂಕ್ ಡ್ರೆಸ್ ಎಂಬುದು ಬಹಳ ಹಿಂದಿನಿಂದಲೂ ಫ್ಯಾಷನ್ ಲೋಕದಲ್ಲಿ ಮಿಂಚುತ್ತಿರುವ ಉಡುಪು. ಇದರಲ್ಲಿ ಎರಡು ಪ್ರಕಾರಗಳಿವೆ-ಒಂದು ಬಿಗಿಯಾದ ಟ್ಯಾಂಕ್ ಡ್ರೆಸ್, ಇನ್ನೊಂದು ಸಡಿಲವಾದ ಡ್ರೆಸ್. ಬಿಗಿಯಾದ ಟ್ಯಾಂಕ್ ಡ್ರೆಸ್ ಧರಿಸಿ ಮಿಂಚಿದ ಗಾಯಕಿಯರು, ಕ್ರೀಡಾಪಟುಗಳು, ನಟಿಯರು, ಹಾಲಿವುಡ್ ಬೆಡಗಿಯರ ಫೋಟೊವನ್ನು ನೀವು ನೋಡಿರುತ್ತೀರಿ. ಆದರೆ, ಈಗ ಸಡಿಲ ಟ್ಯಾಂಕ್ ಡ್ರೆಸ್‌ಗಳ ಸರದಿ. ಬೇಸಿಗೆಯಲ್ವಾ? ಧರಿಸಲೂ ಸುಲಭ ಮತ್ತು ಸೆಖೆಗೂ ಆರಾಮು. ಮೈ-ಕೈಗೆ ಅಂಟಿಕೊಳ್ಳದೇ ಇರುವ ಕಾರಣದಿಂದ ಈ ಡ್ರೆಸ್ ಎಲ್ಲರಿಗೂ ಅಚ್ಚುಮೆಚ್ಚು.
Related Articles
Advertisement
ಹೂವು, ಬಳ್ಳಿ, ಚಿಟ್ಟೆ ಚಿತ್ತಾರ..: ನಂತರ ಈ ಡ್ರೆಸ್‌ಗಳ ಮೇಲೆ ಹೂವು, ಬಳ್ಳಿ, ಚಿಟ್ಟೆ, ಹಣ್ಣು ಮುಂತಾದ ಆಕೃತಿಗಳು ಮೂಡಿದವು. ಕೇವಲ ಕಪ್ಪು, ಬಿಳಿ, ಕಂದು ಮತ್ತು ಬೂದಿ ಬಣ್ಣಗಳಲ್ಲಿಯೇ ಲಭ್ಯವಿದ್ದ ಸಡಿಲ ಟ್ಯಾಂಕ್‌ಡ್ರೆಸ್‌ಗಳು ಈಗ ಬೇರೆ ಬಣ್ಣಗಳಲ್ಲಿಯೂ ಲಭ್ಯ. ಪೇಸ್ಟಲ್ ಶೇಡ್ಸ್ ಅಂದರೆ ಬಳಪದ ಕಡ್ಡಿಯ ಬಣ್ಣದಲ್ಲೂ ಈ ಡ್ರೆಸ್ ಸಿಗುತ್ತದೆ.
ಹತ್ತಾರು ಆಯ್ಕೆ, ಹತ್ತಾರು ಬಣ್ಣ: ಕ್ಯಾಶುಯಲ್ ಉಡುಗೆಯಾಗಿರುವ ಟ್ಯಾಂಕ್ ಡ್ರೆಸ್‌ಅನ್ನು ಹಾಲಿಡೇ, ಶಾಪಿಂಗ್, ಪಾರ್ಟಿಗಳಿಗೆ ಧರಿಸಿದರೆ ಚೆಂದ. ಆನ್‌ಲೈನ್‌ನಲ್ಲಿ ಕಸ್ಟಮೈಸ್ಡ್ ಟ್ಯಾಂಕ್ ಡ್ರೆಸ್‌ಗಳು ಲಭ್ಯವಿದೆ. ದೇಹಕ್ಕೊಪ್ಪುವ ಬಣ್ಣ, ವಿನ್ಯಾಸ ಅಥವಾ ಚಿತ್ರವನ್ನು ಆಯ್ಕೆ ಮಾಡಿ, ವಿನ್ಯಾಸಕರಿಂದ ಅವುಗಳನ್ನು ಉಡುಪಿನ ಮೇಲೆ ಮೂಡಿಸಿಕೊಳ್ಳಬಹುದು.
ಉಡುಪಿನ ಮೇಲೆ ನಕ್ಷತ್ರ ಲೋಕ, ಸಾಗರದ ಅಲೆಗಳು, ಮೀನು-ಮರಳು-ಚಿಪ್ಪು-ಕಲ್ಲು -ಮುತ್ತುಗಳನ್ನೂ ಅವತರಿಸಿಕೊಳ್ಳಿ. ಕಾಮನಬಿಲ್ಲಿನ ಬಣ್ಣಗಳು, ನವಿಲು ಗರಿಯ ಆಕೃತಿ, ಪೋಲ್ಕಾಡಾಟ್ಸ್, ಜ್ಯಾಮಿತೀಯ ಆಕೃತಿಗಳು, ರಂಗೋಲಿ, ಬರಹ, ಭಾವಚಿತ್ರ, ವ್ಯಂಗ್ಯಚಿತ್ರ ಹೀಗೆ ಹತ್ತು ಹಲವು ಆಯ್ಕೆಗಳು ನಿಮ್ಮ ಮುಂದಿವೆ.
* ಅದಿತಿ ಮಾನಸ ಟಿ.ಎಸ್.