Advertisement

ಥಾಣೆ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಕನ್ನಡ ಸಂಘ: ತಾಳಮದ್ದಳೆ

02:51 PM Jul 25, 2018 | |

ಥಾಣೆ: ಥಾಣೆ  ಪಶ್ಚಿಮದ ಬಾಲ್ಕುಮ್‌ ಪರಿಸರದ ಪ್ರತಿಷ್ಠಿತ ಶ್ರೀ ಸತ್ಯ ನಾರಾಯಣ ಸೇವಾ ಸಮಿತಿ ಕನ್ನಡ ಸಂಘ ಬಾಲ್ಕುಮ್‌ ಇದರ ಆಶ್ರಯದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ತವರೂರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಜು. 21 ರಂದು ಸಂಜೆ ಥಾಣೆ ಪಶ್ಚಿಮದ ಕಲರ್‌ಕೆಮ್‌ ಕಂಪೆನಿಯ ಎದುರುಗಡೆಯಿರುವ ಮಾರ್ತಾಂಡ ಮಂಗಳ ಸಭಾಗೃಹದಲ್ಲಿ ಭಕ್ತ ಮಯೂರ ಧ್ವಜ ಯಕ್ಷಗಾನ ತಾಳಮದ್ದಳೆ ನಡೆಯಿತು.

Advertisement

ಬಳಗದ ನಾಮಾಂಕಿತ ಭಾಗ ವತೆ ಕು| ಕಾವಶ್ರೀ ಅಜೇರು ಅವರ ಯಕ್ಷಗಾನ ಶೈಲಿಯ ಪ್ರಾರ್ಥನೆ, ಗಣಪತಿ ಶೃತಿ ಹಾಗೂ ಸಂಘದ ಪದಾಧಿಕಾರಿಗಳ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. 

ಈ ಸಂದರ್ಭದಲ್ಲಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಕನ್ನಡ ಸಂಘ ಬಾಲ್ಕುಮ್‌ ಇದರ ಅಧ್ಯಕ್ಷ ಮನೋಜ್‌ ಎಲ್‌. ಹೆಗ್ಡೆ, ಕಾರ್ಯದರ್ಶಿ ಅಶೋಕ್‌ ಶೆಟ್ಟಿ, ಕೋಶಾಧಿಕಾರಿ ಬಾಲಕೃಷ್ಣ ಎ. ಹೆಗ್ಡೆ, ಜತೆ ಕಾರ್ಯದರ್ಶಿ ಶ್ಯಾಮ್‌ ಕೆ. ಶೆಟ್ಟಿ, ಜತೆ ಕೋಶಾಧಿಕಾರಿ ಮನೋಹರ್‌ ಅಂಚನ್‌, ಉದ್ಯಮಿಗಳಾದ ಜಯರಾಮ್‌ ಶೆಟ್ಟಿ, ರವಿ ಹೆಗ್ಡೆ ಹೆರ್ಮುಂಡೆ ಅವರು ಉಪಸ್ಥಿತರಿದ್ದರು.

ಬಳಗದ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರು ಗಳಾದ ಪ್ರಶಾಂತ್‌ ಶೆಟ್ಟಿ ವಗೆನಾಡು, ಶ್ರೀಪತಿ ನಾಯಕ್‌ ಅಜೇರು, ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ದಿನೇಶ್‌ ಶೆಟ್ಟಿ ಕಾವಳ್‌ಕಟ್ಟೆ, ಹರೀಶ್‌ ಭಟ್‌ ಬೊಳಂತಿಮೊಗರು, ಶ್ಯಾಮ್‌ ಭಟ್‌ ಪಕಳಕುಂಜ, ಅವಿನಾಶ್‌ ಶೆಟ್ಟಿ ಉಬರಡ್ಕ, ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕರು ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಉಪ ಸ್ಥಿತರಿದ್ದರು. ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಉದ್ಯಮಿಗಳು, ಸಮಾಜ ಸೇವಕರು ಪಾಲ್ಗೊಂಡಿದ್ದರು. ಸಂಸ್ಥೆಯ ಪದಾ ಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next