ಥಾಣೆ: ಥಾಣೆಯ ಮೇಯರ್ ಸ್ಥಾನವನ್ನು ಅಲಂಕರಿಸಿರುವ ತುಳು-ಕನ್ನಡಿಗ ಮೀನಾಕ್ಷೀ ರಾಜೇಂದ್ರ ಶಿಂಧೆ (ಪೂಜಾರಿ) ಅವರನ್ನು ಥಾಣೆ ಪರಿಸರದ ತುಳು-ಕನ್ನಡಿಗ ಸಂಘ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿಕೊಂಡು ತುಳು-ಕನ್ನಡಿಗ ಅಭಿಮಾನಿ ಬಳಗ ಥಾಣೆ ಎಂಬ ಅಭಿನಂದನ ಸಮಿತಿಯಿಂದ ಅಭಿನಂದಿಸಿ ಗೌರವಿಸಲು ಮುಂದಾಗಿದ್ದು, ಇದರ ಪೂರ್ವಭಾವಿ ಸಭೆಯು ಮಾ. 20 ರಂದು ತೀನ್‌ಹಾಥ್ ನಾಕಾದಲ್ಲಿರುವ ಹೊಟೇಲ್ ಸಾಯಿಮಾಸ್ ಸಭಾಗೃಹದಲ್ಲಿ ನಡೆಯಿತು.
ಡಿವೈನ್ ಪಾರ್ಕ್ ಥಾಣೆ ಅಧ್ಯಕ್ಷ ಕೇಶವ ಎಂ. ಆಳ್ವ ಹಾಗೂ ಪತ್ರಕರ್ತ ಶ್ರೀಧರ ಉಚ್ಚಿಲ್ ಅವರ ಪರಿಕಲ್ಪನೆಯಲ್ಲಿ ನಗರದ ಉದ್ಯಮಿಗಳಾದ ಹರೀಶ್ ಡಿ. ಸಾಲ್ಯಾನ್, ವಿನೋದ್ ಎ. ಅಮೀನ್, ಮಾನಿಪಾಡಿ ಪ್ರಶಾಂತ್ ನಾಯಕ್ ಅವರ ಸಹಕಾರದೊಂದಿಗೆ ಈ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ತುಳು-ಕನ್ನಡಿಗ ಅಭಿಮಾನಿ ಬಳಗ ಥಾಣೆ ಅಭಿನಂದನ ಸಮಿತಿಯನ್ನು ರಚಿಸಿ ಮೇಯರ್ ಮೀನಾಕ್ಷೀ ಪೂಜಾರಿ ಅವರನ್ನು ಸಮ್ಮಾನಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಮಿತಿಯ ಅಧ್ಯಕ್ಷರನ್ನಾಗಿ ಘೋಡ್‌ಬಂದರ್ ಪರಿಸರದ ಉದ್ಯಮಿ ಮಹೇಶ್ ಕರ್ಕೇರ ಅವರನ್ನು ನೇಮಿಸಲಾಯಿತು. ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕುಮ್ ಥಾಣೆ ಇದರ ಅಧ್ಯಕ್ಷ ಮನೋಜ್ ಕುಮಾರ್ ಹೆಗ್ಡೆ, ಶ್ರೀ ಆದಿಶಕ್ತಿ ಕನ್ನಡ ಸಂಘ ಮಾಜಿವಾಡಾ ಥಾಣೆ ಅಧ್ಯಕ್ಷ ಶಿಮಂತೂರು ಶಂಕರ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ರೇವತಿ ಸದಾನಂದ ಶೆಟ್ಟಿ, ಘೋಡ್‌ಬಂದರ್ ಕನ್ನಡ ಅಸೋಸಿಯೇಶನ್ ಥಾಣೆ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ, ವರ್ತಕ್ ನಗರ ಕನ್ನಡ ಸಂಘ ಥಾಣೆ ಕಾರ್ಯದರ್ಶಿ ಜಯಂತ್ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಥಾಣೆ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಅನಂತ ಸಾಲ್ಯಾನ್, ಬಿಲ್ಲವರ ಅಸೋಸಿಯೇಶನ್ ಕಲ್ವಾ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಸುವರ್ಣ, ನವೋದಯ ಕನ್ನಡ ಸಂಘದ ಅಧ್ಯಕ್ಷ ಜಯ ಕೆ. ಶೆಟ್ಟಿ, ಅಯ್ಯಪ್ಪ ಸೇವಾ ಸಮಿತಿ ಕಿಸನ್‌ನಗರ ಥಾಣೆಯ ರಮೇಶ್ ಕೋಟ್ಯಾನ್, ಚಿಣ್ಣರ ಬಿಂಬ ಥಾಣೆ ಶಿಬಿರದ ಸೀತಾರಾಮ್ ಶೆಟ್ಟಿ, ಗುರುದೇವಾ ಸೇವಾ ಬಳಗ ಥಾಣೆ ಘಟಕದ ಕಾರ್ಯಾಧ್ಯಕ್ಷ ಗುಣಪಾಲ್ ಶೆಟ್ಟಿ ಅವರನ್ನು ಸಮಿತಿಯ ಉಪಾಧ್ಯಕ್ಷರುಗಳನ್ನಾಗಿ ನೇಮಿಸಲಾಯಿತು.
ಕಾರ್ಯದರ್ಶಿಯಾಗಿ ವರ್ತಕ್ ನಗರ ಕನ್ನಡ ಸಂಘದ ಅಧ್ಯಕ್ಷ ಸುನಿಲ್ ಜೆ. ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಬೆಳುವಾಯಿ, ಕೋಶಾಧಿಕಾರಿಗಳಾಗಿ ಉದ್ಯಮಿ ವಿನೋದ್ ಎ. ಅಮೀನ್, ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ ಅಧ್ಯಕ್ಷ ಜಯರಾಮ ಪೂಜಾರಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷರನ್ನಾಗಿ ಉದ್ಯಮಿ ಹರೀಶ್ ಡಿ. ಸಾಲ್ಯಾನ್, ಮಹಿಳಾ ವಿಭಾಗದ ಮುಖ್ಯಸ್ಥರನ್ನಾಗಿ ಘೋಡ್ ಬಂದರ್ ಕನ್ನಡ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಶೆಟ್ಟಿ ಮತ್ತು ಬಿಲ್ಲವರ ಅಸೋಸಿಯೇಶನ್ ಥಾಣೆ ಸ್ಥಳೀಯ ಕಚೇರಿಯ ಮಹಿಳಾ ವಿಭಾಗದ ಮುಖ್ಯಸ್ಥೆ ಪೂರ್ಣಿಮಾ ಅಮೀನ್ ಅವರನ್ನು ನೇಮಿಸಲಾಯಿತು.
ಸಮಿತಿಯ ಸಂಚಾಲಕರನ್ನಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ ಕಲ್ವಾ, ಘೋಡ್‌ಬಂದರ್‌ರೋಡ್ ಕನ್ನಡ ಅಸೋಸಿಯೇಶನ್ ಉಪಾಧ್ಯಕ್ಷ ಪ್ರಶಾಂತ್ ನಾಯಕ್, ಪರಿಸರದ ಉದ್ಯಮಿ ಲಕ್ಷ್ಮಣ್ ಮಣಿಯಾಣಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಎಸ್. ಶೆಟ್ಟಿ, ಡಿವೈನ್‌ಪಾರ್ಕ್ ಥಾಣೆ ಸ್ಥಳೀಯ ಸಮಿತಿಯ ಅಧ್ಯಕ್ಷ ಕೇಶವ ಎಂ. ಆಳ್ವ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಅಶೋಕ್ ಸಸಿಹಿತ್ಲು ಕಲ್ವಾ ಅವರನ್ನು ನೇಮಿಸಲಾಯಿತು.
ಕಾರ್ಯನಿರ್ವಾಹಕರಾಗಿ ಪತ್ರಕರ್ತ ಶ್ರೀಧರ ಉಚ್ಚಿಲ್ ಅವರನ್ನು ಆಯ್ಕೆಮಾಡಲಾಯಿತು. ಸಭೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಲ್ಲಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಕಾರ್ಯದರ್ಶಿ ರಮೇಶ್ ಶೆಟ್ಟಿ, ಸ್ತಿÅà ಶಕ್ತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಸಮಿತಿಯ ಜೊತೆ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭೆಯ ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಎ. 8ರಂದು ಕಾರ್ಯಕ್ರಮ
ಈ ಅದ್ದೂರಿ ಅಭಿನಂದನ ಸಮಾರಂಭವು ಎ. 8 ರಂದು ಅಪರಾಹ್ನ ಘೋಡ್‌ಬಂದರ್‌ರೋಡ್‌ನಲ್ಲಿ ಜರಗಲಿದ್ದು, ನಗರದ ಕಲಾವಿದ ಅಶೋಕ್ ಕೊಡ್ಯಡ್ಕ ಅವರ ನೇತೃತ್ವದಲ್ಲಿ ತುಳುನಾಡ ಕಲೆ- ಸಂಸ್ಕೃತಿಯನ್ನು ಸಾರುವ ಭವ್ಯ ಮೆರವಣಿಗೆಯೊಂದಿಗೆ ಮೇಯರ್ ಮೀನಾಕ್ಷೀ ಆರ್. ಶಿಂಧೆ (ಪೂಜಾರಿ) ಅವರನ್ನು ವೇದಿಕೆಗೆ ಸ್ವಾಗತಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಳುನಾಡ ವೈಭವ ಜರಗಲಿದೆ. ಥಾಣೆಯಲ್ಲಿ ಪ್ರಪ್ರಥಮ ಬಾರಿಗೆ ಓರ್ವ ತುಳು-ಕನ್ನಡತಿ ಮೇಯರ್ ಸ್ಥಾನವನ್ನು ಅಲಂಕರಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಯಾವುದೇ ರಾಜಕೀಯ, ಜಾತಿ, ಮತ-ಭೇದವಿಲ್ಲದೆ ತುಳು-ಕನ್ನಡಿಗರ ವತಿಯಿಂದ ಅಭಿನಂದಿಸುವ ಈ ಸಂಭ್ರಮದಲ್ಲಿ ಎಲ್ಲರ ಪ್ರೋತ್ಸಾಹ, ಸಹಕಾರದ ಅಗತ್ಯವಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕ ಪತ್ರಕರ್ತ ಶ್ರೀಧರ ಉಚ್ಚಿಲ್ ತಿಳಿಸಿದ್ದಾರೆ.