Advertisement

ಭಿವಂಡಿಯ ಟ್ರಾವೆಲ್‌ ಬ್ಯಾಗ್‌ ತಯಾರಿಸುವ ಘಟಕಕ್ಕೆ ಬೆಂಕಿ

05:20 PM Jan 05, 2023 | Team Udayavani |

ಥಾಣೆ: ಭಿವಂಡಿಯ ಔಲಿ ವಿಲೇಜ್‌ನ ಸಾಗರ್‌ ಕಾಂಪ್ಲೆಕ್ಸ್‌ನಲ್ಲಿರುವ ಟ್ರಾವೆಲ್‌ ಬ್ಯಾಗ್‌ಗಳನ್ನು ತಯಾರಿಸುವ ಘಟಕದಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅಕ್ಕಪಕ್ಕದಲ್ಲಿರುವ ಒಟ್ಟು ನಾಲ್ಕು ಗೋದಾಮುಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ.

Advertisement

ಎಲ್ಲಾ ನಾಲ್ಕು ಗೋದಾಮುಗಳು ನೆಲ ಮಹಡಿಯಲ್ಲಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಭಿವಂಡಿ ಮತ್ತು ಕಲ್ಯಾಣ್‌ ಅಗ್ನಿಶಾಮಕ ದಳದ ಸಿಬ್ಬಂದಿಗಳು, ವಾಹನಗಳು, ಜಂಬೋ ವಾಟರ್‌ ಟ್ಯಾಂಕರ್‌ಗಳು ಹಾಗೂ ಥಾಣೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಖಾಸಗಿ ನೀರಿನ ಟ್ಯಾಂಕರ್‌ಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ¸ ಘಟನೆಯಲ್ಲಿ ಇದುವರೆಗೂ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next