Advertisement

ಥಾಣೆ ಚಾಮುಂಡೇಶ್ವರಿ ಸೇವಾ ಸಮಿತಿ ವಾರ್ಷಿಕ ಮಹಾಪೂಜೆ ಸಂಪನ್ನ

04:59 PM Jun 08, 2019 | Vishnu Das |

ಥಾಣೆ: ಥಾಣೆ ಪಶ್ಚಿಮದ ವೀರ ಸಾವರ್ಕರ್‌ ನಗರದಲ್ಲಿರುವ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿಯ 7ನೇ ವಾರ್ಷಿಕ ಮಹಾಪೂಜೆಯು ಮೇ 16 ರಂದು ಸಮಿತಿಯ ಸಂಸ್ಥಾಪಕರು ಹಾಗೂ ಜ್ಯೋತಿಷಿ ಶಿವಪ್ರಸಾದ್‌ ಪೂಜಾರಿ ಪುತ್ತೂರು ಇವರ ಮುಂದಾಳತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 7.30ರಿಂದ ಜಗದೀಶ್‌ ತಂತ್ರಿ ಮತ್ತು ಬಳಗ

ದವರಿಂದ ಗಣಹೋಮ, ಪೂರ್ವಾಹ್ನ 10ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ 12.30ರಿಂದ ಮಹಾ ಮಂಗಳಾರತಿ ಹಾಗೂ ಮಧ್ಯಾಹ್ನ ಮಹಾ ಪ್ರಸಾದದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು.

ಅಪರಾಹ್ನ 3 ರಿಂದ ಓಂಕಾರ ಭಜನಾ ಮಂಡಳಿ ಮೀರಾರೋಡ್‌ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 5.30 ರಿಂದ 6.30 ರವರೆಗೆ ಪ್ರಸಾದ್‌ ಸಾಲ್ಯಾನ್‌ ರವರಿಂದ ಶ್ರೀ ದೇವಿ ಚಾಮುಂಡೇಶ್ವರಿ ಅಮ್ಮನ ದರ್ಶನ ಆವೇಶ ಸೇವೆ ತದನಂತರ ದೈವ ಪಾತ್ರಿಗಳಾದ ಸನ್ನಿಧ್‌ ಪೂಜಾರಿ ಕಟಪಾಡಿ ಹಾಗೂ ಶುಭಕರ ಪೂಜಾರಿ ಇವರಿಂದ ಮಂತ್ರ ಕಲ್ಲುರ್ಟಿ-ಕವಡೆಯ ಪಂಜುರ್ಲಿ ದೈವಗಳ ಆವೇಶ ಸೇವೆಯು ಭಕ್ತಿ ಪೂರ್ವಕವಾಗಿ ಜರುಗಿತು.

ವಾಲಗದಲ್ಲಿ ರಾಮದಾಸ್‌ ಕೋಟ್ಯಾನ್‌ ಬಳಗದವರು ಹಾಗೂ ಮಧುಕರ್ತರಾಗಿ ಯಕ್ಷಗಾನ ಭಾಗವತರಾದ ಮುದ್ದಣ್ಣ ಪೂಜಾರಿ ಸಹಕರಿಸಿದರು. ಈ ಸಂದರ್ಭದಲ್ಲಿ ಅನೇಕ ಭಕ್ತಾಭಿಮಾನಿಗಳು ಪಾಲ್ಗೊಂಡು ಶ್ರೀದೇವಿ ಹಾಗೂ ದೈವದೇವರ ಕೃಪೆಗೆ ಪಾತ್ರರಾದರು. ಮಂದಿರದ ರೂವಾರಿ ಶಿವಪ್ರಸಾದ್‌ ಪೂಜಾರಿ ಇವರು ವಾರ್ಷಿಕ ಪೂಜೆಯ ಕಾಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಹಾಗೂ ನೆರೆದ ಭಕ್ತಾದಿಗಳಿಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಅನುಗ್ರಹ ಸದಾ ಇರಲೆಂದು ಹರಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next