Advertisement

ತಾಪಂಗೆ ಅನುದಾನ ನೀಡಿ, ಬಲವರ್ಧನೆ ಮಾಡಿ

03:49 PM Jan 21, 2021 | Team Udayavani |

ಗದಗ: ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣದ ಭಾಗವಾಗಿ ಸ್ಥಾಪನೆಗೊಂಡ ತಾಪಂ ವ್ಯವಸ್ಥೆ ಪ್ರಮುಖ ಎರಡು ಕಾರಣಗಳಿಂದಾಗಿ ಅವಸಾನದತ್ತ ಜಾರುತ್ತಿದೆ. ಅದರೊಂದಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಾಲೂಕು ಪಂಚಾಯತ್‌ ಗಳನ್ನು ರದ್ದುಗೊಳಿಸಲಾಗುವುದು ಎಂಬ ಹೇಳಿಕೆಯಿಂದಾಗಿ ಜಿಲ್ಲೆಯಲ್ಲೂ ಈ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ.

Advertisement

ಅಧಿಕಾರ ವಿಕೇಂದ್ರೀಕರಣಕ್ಕಾಗಿ ತಾ.ಪಂ. ವ್ಯವಸ್ಥೆ ಬಲಪಡಿಸಬೇಕು, ಇಲ್ಲವೇ ಬರ್ಕಾಸ್ತುಗೊಳಿಸುವುದೇ ಸೂಕ್ತ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಹಿಂದೆ ಪ್ರಧಾನಿಯಾಗಿದ್ದ ದಿ| ರಾಜೀವಗಾಂಧಿ ಅವರು ಸಂವಿಧಾನಕ್ಕೆ 73ನೇ ತಿದ್ದುಪಡಿ ತರುವ ಮೂಲಕ ಮೂರು ಹಂತದ ಪಂಚಾಯತ್‌ ವ್ಯವಸ್ಥೆ ಬಲಪಡಿಸಿದರು. ಗ್ರಾಪಂ, ತಾಪಂ ಹಾಗೂ ಜಿಪಂಗಳಿಗೆ ನೇರವಾಗಿ ಜನಪ್ರತಿನಿಧಿಗಳು ಆಯ್ಕೆಯಾಗುವಂತೆ ಮಾಡಿದರು. ಅದಕ್ಕೂ ಮುನ್ನ ಗ್ರಾ.ಪಂ. ಅಧ್ಯಕ್ಷರೇ ತಾ.ಪಂ. ಅಧ್ಯಕ್ಷರಾಗುತ್ತಿದ್ದರು. ಸ್ಥಳೀಯ ಶಾಸಕರು ಇದಕ್ಕೆ ಅಧ್ಯಕ್ಷರಾಗಿರುತ್ತಿದ್ದರು. ಆದರೆ, 73ನೇ ತಿದ್ದುಪಡಿ ಮೂಲಕ ಮೂರು ಹಂತದ ಪಂಚಾಯತ್‌ ವ್ಯವಸ್ಥೆಗೆ ನೇರವಾಗಿ ಜನರಿಂದಲೇ ಸದಸ್ಯರ ಆಯ್ಕೆಗೆ ಒತ್ತು ನೀಡಿದರು.

ತಾಪಂ ಕೈತಪ್ಪಿದ ಅಧಿಕಾರ: ಕಳೆದ ಒಂದು ದಶಕದಿಂದೀಚೆಗೆ ವರ್ಷದಿಂದ ವರ್ಷಕ್ಕೆ ತಾ.ಪಂ. ಅಧಿಕಾರವನ್ನು ಒಂದೊಂದಾಗಿ ಗ್ರಾ.ಪಂ. ಹಾಗೂ ಜಿ.ಪಂ.ಗೆ ವಹಿಸಲಾಗಿದೆ. ಹಿಂದಿನ ಯುಪಿಎ ಸರಕಾರದಲ್ಲಿ ಜಾರಿಗೆ ಬಂದಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಆಶ್ರಯ ಫಲಾನುಭವಿಗಳ ಆಯ್ಕೆ, ಭೂ ರಹಿತರಿಗೆ ಸಾಗುವಳಿ ಜಮೀನು ಒದಗಿಸುವುದು, ವಸತಿ ರಹಿತರಿಗೆ ನೀವೇಶನ ಹಂಚಿಕೆ ಸೇರಿದಂತೆ ಇನ್ನಿತರೆ ಯೋಜನೆಗಳ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗಳೆಲ್ಲವೂ ತಾಪಂಗಳಿಂದ ಗ್ರಾ.ಪಂ. ಹಾಗೂ ಜಿ.ಪಂ. ವ್ಯಾಪ್ತಿಗೆ ಜಾರಿದೆ. ಹೀಗಾಗಿ ತಾ.ಪಂ. ಚುನಾಯಿತ ಮಂಡಳಿ ಯೋಜನೆಗಳಿಗೆ ಅನುಮೋದನೆ ನೀಡಲು ಸೀಮಿತವಾಗಿದೆ.

ಅಲ್ಲದೇ, ಕಂದಾಯ ಮತ್ತು ಪೊಲೀಸ್‌ ಇಲಾಖೆ ಹೊರತಾಗಿ ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಹೆಸ್ಕಾಂ ಸೇರಿದಂತೆ ಸುಮಾರು 23 ಇಲಾಖೆಗಳು ತಾ.ಪಂ. ವ್ಯಾಪ್ತಿಗೆ ಬರುತ್ತವೆ. ಆದರೆ, ಆಯಾ ಇಲಾಖೆಗಳ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಯನ್ನಷ್ಟೇ ನಡೆಸಬಹುದು. ಲೋಪದೋಷಗಳು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮಕ್ಕೆ ಮಾಡಿದ ಶಿಫಾರಸು ಪತ್ರಗಳನ್ನು ಆಯಾ ಇಲಾಖೆ ಉನ್ನತಾಧಿಕಾರಿಗಳು ಕೆಲವೊಮ್ಮೆ ಗಮನಿಸುವುದೂ ಇಲ್ಲ. ಹೀಗಾಗಿ ಕೆಲ ಇಲಾಖೆಗಳ ಮೇಲೆ ತಾ.ಪಂ. ಹಿಡಿತ ಕಳೆದುಕೊಂಡಿದೆ. ಅನಾರೋಗ್ಯ, ಇತರೆ ಜಿಲ್ಲಾಧಿಕಾರಿಗಳ ಸಭೆ, ಕಾರ್ಯನಿಮಿತ್ತ ಪ್ರವಾಸ ನೆಪ ಹೇಳಿ ಕೆಲ ಅಧಿಕಾರಿಗಳು ತಾ.ಪಂ. ಸಾಮಾನ್ಯ ಸಭೆಗೂ ಹಾಜರಾಗುವುದಿಲ್ಲ ಎಂಬುದು ಮುಂಡರಗಿ ತಾ.ಪಂ. ಅಧ್ಯಕ್ಷೆ ರೇಣುಕಾ ಗೋಣೆಬಸಪ್ಪ ಕೊರ್ಲಹಳ್ಳಿ ಅವರ ಬೇಸರದ ನುಡಿ.

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ತಾಪಂಗಳಿಗೆ ಸರಕಾರ ನೀಡುವ ಅನುದಾನ ಆನೆ ಹೊಟ್ಟೆಸಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಪ್ರಸಕ್ತ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಡಿ ಕೋಟಿ ರೂ. ಅನುದಾನ ಲಭಿಸಿದೆ. ಇನ್ನುಳಿದ ವರ್ಷಗಳಲ್ಲಿ ಸಿಕ್ಕಿದ್ದು ಕೇವಲ 10-15 ಲಕ್ಷ ರೂ. ಮಾತ್ರ. ಆದರೆ, ಪ್ರತಿ ತಾ.ಪಂ. ಕ್ಷೇತ್ರದಲ್ಲಿ 6-7 ಹಳ್ಳಿಗಳಿದ್ದು, ಅಲ್ಲಿನ ಜನರು ಕೇಳುವ ಸಣ್ಣಪುಟ್ಟ ಕೆಲಸಗಳನ್ನೂ ಮಾಡಲಾಗದ ದುಸ್ಥಿತಿ ಎದುರಿಸುವಂತಾಗಿದೆ. ಜಿಲ್ಲೆಯ ಹೊಳೆಆಲೂರು ತಾ.ಪಂ. ಕ್ಷೇತ್ರದಲ್ಲಿ 10 ಹಳ್ಳಿಗಳಿದ್ದು, 6-7 ಲಕ್ಷ ರೂ. ಅನುದಾನ ಯಾವುದಕ್ಕೆ ಸಾಲುತ್ತದೆ. ಈ ಬಾರಿ ರೋಣ ತಾ.ಪಂ.ಗೆ ಬರಬೇಕಿದ್ದ ಸ್ಟಾÂಂಪ್‌ ಡ್ನೂಟಿ ಸೆಸ್‌ ಮರಳಿ ಹೋಗಿದೆ. ಆರ್ಥಿಕ ಪರಿಸ್ಥಿತಿ ಹೀಗಾದರೆ ಕ್ಷೇತ್ರದ ಮತದಾರರ ಆಶೋತ್ತರ ಈಡೇರಿಸುವುದು ಹೇಗೆ ಎಂಬುದು ರೋಣ ತಾ.ಪಂ. ಸದಸ್ಯರ ಪ್ರಶ್ನೆ. ಇನ್ನುಳಿದಂತೆ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಹಳ್ಳಕ್ಕೆ ಪರಿಸಿ ಹಾಕಿಸುವುದು, ಗ್ರಾಮದಲ್ಲಿ ಸಣ್ಣ ಮೊತ್ತದಲ್ಲಿ ಚರಂಡಿ, ರಸ್ತೆ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಕೆ, ಶಾಲಾ ಒಂದೆರಡು ಕೊಠಡಿಗಳ ದುರಸ್ತಿ ಹಾಗೂ ನರಗುಂದ ತಾ.ಪಂ.ನಿಂದ ವಿವಿಧ ಗ್ರಾಮಗಳಲ್ಲಿ ಹಳೇ ಬಸ್‌ ನಿಲ್ದಾಣಗಳಿಗೆ ಹೈಟೆಕ್‌ ಆಗಿ ನವೀಕರಿಸಿದ್ದೇ ಪ್ರಮುಖ ಸಾಧನೆಗಳಾಗಿವೆ.

Advertisement

ಆಗಬೇಕಿದೆ ತಾಪಂಗಳ ಬಲವರ್ದನೆ: ಪ್ರತಿ ತಾಪಂಗಳಿಗೆ ಹೆಚ್ಚಿನ ಅನುದಾನ ಮತ್ತು ಅಧಿಕಾರವನ್ನು ನೀಡಬೇಕು. ತಾ.ಪಂ. ಮೂಲಕ ನರೇಗಾ, ವಸತಿ ಯೋಜನೆ ಅನುಷ್ಠಾನಕ್ಕೆ ತರಬೇಕು. ತಾಪಂಗೆ ಆದಾಯ ತರುವ ಮಾರ್ಗಗಳನ್ನು ಒದಗಿಸಬೇಕು. ಪ್ರತ್ಯೇಕವಾಗಿ ಬಜೆಟ್‌ ಮಂಡಿಸುವ ಶಕ್ತಿ ತುಂಬಬೇಕು. ಅದಕ್ಕಾಗಿ ವಿವಿಧ ತೆರಿಗೆಗಳನ್ನು ವಿಧಿಸುವ ಅಧಿಕಾರ ನೀಡಬೇಕು. ಗ್ರಾಮೀಣ ಭಾಗದಲ್ಲಿ ದೊಡ್ಡಮಟ್ಟದ ಯೋಜನೆ ಅನುಷ್ಠಾವನ್ನು ತಾ.ಪಂ.ಗೆ ವಹಿಸಬೇಕು ಎಂಬದು ತಾ.ಪಂ. ಅಧ್ಯಕ್ಷರ ಅಭಿಪ್ರಾಯ.

ಇದನ್ನೂ ಓದಿ:ನೀರು ನಿರ್ವಹಣೆಯಲ್ಲಿ ಸಹಭಾಗಿತ್ವ ಅಗತ್ಯ; ಶರಣಪ್ಪ ತಳವಾರ

ಗ್ರಾಮೀಣ ಭಾಗಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸುವುದೇ ಸ್ಥಳೀಯ ಶಾಸಕರು ಮತ್ತು ತಾ.ಪಂ. ಹೊಣೆಗಾರಿಕೆಯಾಗಿರುತ್ತದೆ. ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ತಾ.ಪಂ. ಪಾತ್ರ ಮಹತ್ವದ್ದಾಗಿದೆ. ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಬೇಕಿದೆ. ಅಲ್ಲದೇ, ಪಂಚಾಯತ್‌ ವ್ಯವಸ್ಥೆಯಲ್ಲಿ ತಾ.ಪಂ. ಕೈಬಿಡುವುದು ಹೇಳಿದಷ್ಟು ಸುಲಭವೂ ಅಲ್ಲ. ಪಾರ್ಲಿಮೆಂಟ್‌ನಲ್ಲಿ 2/3 ನಷ್ಟು ಬಹುಮತ ಬೇಕಾಗುತ್ತದೆ. ಸದ್ಯಕ್ಕೆ ಅದು ಸಾಧ್ಯವೂ ಇಲ್ಲ. ಅದರ ಬದಲಾಗಿ ತಾ.ಪಂ.ಬಲವರ್ದನೆಗೆ ಒತ್ತು ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಬೇಕು.

 ಡಿ.ಆರ್‌. ಪಾಟೀಲ, ಕರ್ನಾಟಕ ಪಂಚಾಯತ್‌ ಪರಿಷತ್‌ ಉಪಾಧ್ಯಕ್ಷ

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next