Advertisement

ತಾಪಂ ಇರಲಿ, ಗ್ರಾಪಂಗೆ ಮಾರ್ಗದರ್ಶಕವಾಗಲಿ

01:39 PM Jan 22, 2021 | Team Udayavani |

ರಾಮನಗರ: ತಾಲೂಕು ಪಂಚಾಯ್ತಿಗಳ ಅಸ್ತಿತ್ವ ಮುಂದುವರಿಯಬೇಕು ಎಂಬ ಸಾರ್ವರ್ತಿಕ ಅಭಿ ಪ್ರಾಯ ಜಿಲ್ಲೆಯಲ್ಲಿ ವ್ಯಕ್ತವಾಗಿದೆ. ಗ್ರಾಪಂಗಳಿಗೆ ಮಾರ್ಗದರ್ಶಕ ಸಂಸ್ಥೆಯನ್ನಾಗಿ ತಾಪಂಗಳನ್ನು ಬಲವ ರ್ಧನೆಗೊಳಿಸಬೇಕು ಎಂಬ ಕೂಗು ಕೇಳಿ ಬಂದಿದೆ. ತಾಪಂ ವ್ಯವಸ್ಥೆಯನ್ನೇ ರದ್ದುಗೊಳಿಸುವ ವಿಚಾರ ಹೊಸ ವಿಷಯವೇನಲ್ಲ. ಹತ್ತಾರು ವರ್ಷದಿಂದ ಈ ವಿಷಯ ಚಾಲ್ತಿಯಲ್ಲಿದೆ. ಸಚಿವ ಗೋವಿಂದ ಕಾರಜೋಳ ಇತ್ತೀಚೆಗೆ ತಾಪಂ ವ್ಯವಸ್ಥೆಯನ್ನು ರದ್ದು ಮಾಡುವ ಚಿಂತನೆಯ ಬಗ್ಗೆ ಹೇಳಿಕೆ ನೀಡಿದ್ದು, ಅಸ್ತಿತ್ವದ ವಿಚಾರ ಮತ್ತೂಮ್ಮೆ ಪುಟಿದಿದೆ ಎಂದು ಸದಸ್ಯರು ಪ್ರತಿಕ್ರಿಯಿಸಿದ್ದಾರೆ.

Advertisement

ಇನ್ನಷ್ಟು ಬಲ ತುಂಬಬೇಕು: ತಾಪಂ ಬೇಕೇ? ಬೇಡವೇ? ಎಂದು ಪತ್ರಿಕೆ ತಾಪಂ ಹಾಲಿ ಮತ್ತು ಮಾಜಿ ಅಧ್ಯಕ್ಷರು ಸದಸ್ಯರನ್ನು ಸಂಪರ್ಕಿಸಿದಾಗ, ತಾಪಂ ವ್ಯವಸ್ಥೆ ಇರಬೇಕು ಎಂದವರೇ ಹೆಚ್ಚು!. ಸದಸ್ಯರಿಗೆ ಅನುದಾನ ಮಾತ್ರವಲ್ಲದೆ, ಗ್ರಾಪಂಗಳಲ್ಲಿ ಸಮರ್ಥ ನಿರ್ವಹಣೆಯ ವಿಚಾರದಲ್ಲಿ ತಾಪಂಗಳಿಗೆ ಇನ್ನಷ್ಟು ಬಲ ತುಂಬಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.

ಗ್ರಾಪಂಗಳಿಗೆ ಮಾರ್ಗದರ್ಶಕ ಸಂಸ್ಥೆಯಾಗಲಿ: ರಾಮನಗರ ತಾಪಂ ಅಧ್ಯಕ್ಷ ಭದ್ರಯ್ಯ ಪ್ರತಿಕ್ರಿಯಿಸಿ, ಕಂದಾಯ ವಿಚಾರಗಳಲ್ಲಿ ಕಾನೂನು, ನಿಯಮಗಳನ್ನು ತಿಳಿದುಕೊಂಡಿರುವ ಅನೇಕರು ಇದ್ದಾರೆ. ಉದಾಹರಣೆಗೆ ಭೂಮಿ ಖಾತೆ ಮಾಡಿ ಕೊಡುವ ವಿಚಾರದಲ್ಲಿ ಗ್ರಾಪಂಗಳು ಎಡವಿರುವ ಅನೇಕ ಪ್ರಸಂಗಗಳಿವೆ. ಇಂತಹ ಪ್ರಸಂಗಗಳನ್ನು ತಾಪಂನಲ್ಲಿ ತಿದ್ದಿ, ಸರಿ ಮಾಡಿರುವ ಉದಾಹರಣೆಗಳು ಇವೆ. ಹೀಗಾಗಿ ತಾಪಂಗಳನ್ನು ಮಾರ್ಗದರ್ಶಕ ಸಂಸ್ಥೆಯನ್ನಾಗಿ ರೂಪಿಸಬೇಕು ಎಂದು ಭದ್ರಯ್ಯ ಅಭಿಪ್ರಾಯ ಪಟ್ಟಿದ್ದಾರೆ. ತಾಪಂಗೆ ಅನುದಾನ ಹೆಚ್ಚಳ ಬೇಡಿಕೆ ಸಮಂಜಸ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ಗುಂಡಿಗೆ ಇದ್ದರೇ ಈ ಗುಂಡಿ ರಸ್ತೆಗೆ ಬನ್ನಿ

ಅನುದಾನ ಕೊಟ್ಟು ತಾಪಂ ಉಳಿಸಿ

Advertisement

ಗ್ರಾಪಂಗಳಿಗೆ ಬರುವ ಅನುದಾನವೂ ತಾಪಂಗಳಿಗೆಬರದಿದ್ದರೆ, ಚುನಾಯಿತ ಪ್ರತಿನಿಧಿಗಳು ತಮ್ಮ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡುವು ದಾದರೂ ಹೇಗೆ? ತಾಪಂ ಅಧ್ಯಕ್ಷರಾಗಿದ್ದರೂ ಸಹ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದು ಕನಕಪುರ ತಾಪಂ ಅಧ್ಯಕ್ಷ ನಾಗು ಬೇಸರ ವ್ಯಕ್ತಪಡಿ ಸಿದರು.

ಪತ್ರಿಕೆಗೆ ಪ್ರತಿಕ್ರಿಯಿಸಿದ ಅವರು, ಅಲ್ಪ ಅನುದಾನ ಯಾವುದಕ್ಕೂ ಸಾಲದು. ಕನಕಪುರ ದೊಡ್ಡ ತಾಲೂಕು, ಹೀಗಾಗಿ ಬರುತ್ತಿರುವ ಅನುದಾನವನ್ನು ಹಂಚಿಕೆ ಮಾಡುವುದೇ ದೊಡ್ಡ ಸವಾಲಾಗಿದೆ. ಗ್ರಾಪಂಗಳಿಗೆ ಕೋಟ್ಯಂತರ ರೂ. ಅನುದಾನ ಹರಿದು ಬರುವುದರಿಂದ ಸ್ಥಳೀಯ ಸಂಸ್ಥೆಯಿಂದಲೇ ಸಾಕಷ್ಟು ಗ್ರಾಮಾಭಿವೃದ್ಧಿ ಕಾರ್ಯ ಮಾಡಬಹುದು. ಗ್ರಾಪಂ ಸದಸ್ಯನಿಗಿರುವ ಗೌರವ ಹತ್ತಾರು ಗ್ರಾಮಗಳ ಮತದಾರರರಿಂದ ಆಯ್ಕೆಯಾಗಿ ಬರುವ ತಾಪಂ ಸದಸ್ಯರಿಗಿಲ್ಲ ದಂತಾಗಿದೆ. ಅನುದಾನ ಕೊಟ್ಟು ತಾಪಂ ವ್ಯವಸ್ಥೆ ಉಳಿಸಿಕೊಳ್ಳಬೇಕು.

ಬಿ.ವಿ.ಸೂರ್ಯ ಪ್ರಕಾಶ್

Advertisement

Udayavani is now on Telegram. Click here to join our channel and stay updated with the latest news.

Next