Advertisement

ಥೈಲೆಂಡ್‌ ಯಥಾಸ್ಥಿತಿಗೆ: ಶಾಲೆ-ಕಾಲೇಜು ಶುರು

02:30 PM Jul 06, 2020 | mahesh |

ಬ್ಯಾಂಕಾಕ್‌ : ಕೋವಿಡ್ ವೈರಸ್‌ನಿಂದಾಗಿ ಶೈಕ್ಷಣಿಕ ವಲಯದ ಮೇಲೆ ಗಂಭೀರ ಪರಿಣಾಮವಾಗಿದ್ದು, ಯುಸ್‌ಎನ ಕೆಲ ರಾಜ್ಯಗಳು ಸೇರಿದಂತೆ ಕೆಲವೊಂದು ದೇಶಗಳು ಶೈಕ್ಷಣಿಕ ಸಂಸ್ಥೆಗಳ ಪುನರಾರಂಭಕ್ಕೂ ಮುಂದಾಗಿವೆ. ಇದೀಗ ಥೈಲ್ಯಾಂಡ್‌ ಕೂಡ ಶಾಲಾ-ಕಾಲೇಜುಗಳನ್ನು ತೆರೆದಿದ್ದು, ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿದೆ ಎಂದು ಬ್ಯಾಂಕಾಕ್‌ ಪೋಸ್ಟ್‌ ವರದಿ ಮಾಡಿದೆ.

Advertisement

ಸಮರೋಪಾದಿಯಲ್ಲಿ ಸಿದ್ಧತೆ
ಕಳೆದ ಮೂರೂವರೆ ತಿಂಗಳುಗಳಿಂದ ಶಾಲೆಯತ್ತ ಬಂದಿರದ ಥಾಯ್ಲೆಂಡ್‌ನ‌ ಶಾಲಾ ಮಕ್ಕಳು ಇದೀಗ ನಿಧಾನವಾಗಿ ಮರಳಿ ಶಾಲೆಗೆ ಬರುತ್ತಿದ್ದು, ಮಕ್ಕಳಿಗೆ ಸೋಂಕು ಹರಡದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಥಾಯ್ಲೆಂಡ್‌ ಶಾಲೆಗಳು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಂಡಿವೆ.

ಮಕ್ಕಳಿಗೆ ಕ್ವಾರಂಟೈನ್‌
ಶಾಲೆ ತೆರೆಯುವಿಕೆ ಹಿನ್ನೆಲೆಯಲ್ಲಿಯೇ ಬ್ಯಾಂಕಾಕ್‌ ನಗರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಾಮ್ಕಾಕ್‌ ತರಗತಿ ಪ್ರಾರಂಭಕ್ಕೂ ಮುನ್ನ ಅಗತ್ಯ ಕ್ರಮಗಳನ್ನು ಪಾಲಿಸಲು ಸೂಚಿಸಿದ್ದು, ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ಹೋಮ್‌ ಕ್ವಾರಂಟೈನ್‌ಗೆ ಒಳಗಾಗುವಂತೆ ಆದೇಶ ಹೊರಡಿಸಿತ್ತು.

ಪೋಷಕರಿಗೆ ಮಾಹಿತಿ
ಪ್ರತಿನಿತ್ಯ ವಿದ್ಯಾರ್ಥಿಗಳ ಆರೋಗ್ಯ ತಪಸಾಣೆ ಮಾಡಲು ಶಿಕ್ಷಣ ಸಂಸ್ಥೆ ನಿರ್ಧರಿಸಿದ್ದು, ಪ್ರವೇಶದ್ವಾರದಲ್ಲಿಯೇ ವಿದ್ಯಾರ್ಥಿಗಳ ಥಾರ್ಮಲ್‌ ಸ್ಕ್ಯಾನಿಂಗ್‌ ನಡೆಸಲಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಗಳ ದೇಹ ತಾಪಮಾನ ಸೇರಿದಂತೆ ಆರೋಗ್ಯ ವರದಿಯನ್ನು ಸ್ವಯಂಚಾಲಿತವಾಗಿ ಪೋಷಕರಿಗೆ
ಸಂದೇಶವನ್ನು ಕಳುಹಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ.

ನಿಯಮ ಪಾಲನೆಗಾಗಿ ವಿಭಿನ್ನ ಮಾರ್ಗ
ವಿದ್ಯಾರ್ಥಿಗಳು ಶಾಲೆಗೆ ಬಂದ ನಂತರ ಸ್ವತ: ಶಿಕ್ಷಕರು ಮಕ್ಕಳಿಗೆ ಮಾಸ್ಕ್ ನೀಡಲಿದ್ದು, ಕಡ್ಡಾಯವಾಗಿ ಅವುಗಳನ್ನು ಧರಿಸುವಂತೆ ನಿಯಮ ಮಾಡಲಾಗಿದೆ. ತರಗತಿಗಳು ಹಾಗೂ ಮಧ್ಯಾಹ್ನದ ಊಟದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುಲು ಒಂದೊಂದು ಬೆಂಚ್‌ ಗೂ ಬಾಕ್ಸ್‌ಗಳನ್ನು ಮಾಡಲಾಗಿದ್ದು, ಊಟದ ವೇಳೆಯೂ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವ ವಮೂಲಕ ಸಾಮಾಜಿಕ ಅಂತರ ನಿಯಮವನ್ನು ಕಾಯ್ದುಕೊಳ್ಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next