Advertisement

ಥಾಯ್ಲೆಂಡ್‌ ಓಪನ್‌ : ಪ್ರಶಸ್ತಿ ಸುತ್ತಿಗೆ ಚಿರಾಗ್‌-ಸಾತ್ವಿಕ್‌

11:33 PM May 18, 2024 | Team Udayavani |

ಬ್ಯಾಂಕಾಕ್‌: ಭಾರತದ ಸ್ಟಾರ್‌ ಡಬಲ್ಸ್‌ ಆಟಗಾರರಾದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾ ವಳಿಯ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ.

Advertisement

ಏಷ್ಯಾಡ್‌ ಚಾಂಪಿಯನ್‌ ಹಾಗೂ ಕೂಟದ ಅಗ್ರ ಶ್ರೇಯಾಂಕಿತ ಶಟ್ಲರ್‌ಗಳಾದ ಚಿರಾಗ್‌- ಸಾತ್ವಿಕ್‌ ಶನಿವಾರದ ಸೆಮಿಫೈನಲ್‌ನಲ್ಲಿ ಚೈನೀಸ್‌ ತೈಪೆಯ ಲು ಮಿಂಗ್‌ ಚೆ-ಟಾಂಗ್‌ ಕೈ ವೀ ವಿರುದ್ಧ 21-11, 21-12 ಅಂತರದ ಸುಲಭ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ರವಿವಾರದ ಫೈನಲ್‌ನಲ್ಲಿ ಚಿರಾಗ್‌-ಸಾತ್ವಿಕ್‌ ಚೀನದ ಚೆನ್‌ ಬೊ ಯಾಂಗ್‌-ಲಿಯು ಯಿ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮಿ ಫೈನಲ್‌ನಲ್ಲಿ ಇವರು ದಕ್ಷಿಣ ಕೊರಿಯಾದ ಕಿಮ್‌ ಜಿ ಜಂಗ್‌-ಕಿಮ್‌ ಸಾ ರಾಂಗ್‌ ವಿರುದ್ಧ 21-19, 21-18 ಅಂತರದಿಂದ ಗೆದ್ದು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next